ಪೋಲ್ಯಾಂಡ್ ನ ಭಾರತೀಯ ರಾಯಭಾರಿ ಕಚೇರಿಯಲ್ಲಿ ಕಿಚ್ಚ ಸುದೀಪ್
Recommended Video
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸದ್ಯ ಪೋಲ್ಯಾಂಡ್ ನಲ್ಲಿ ಬೀಡುಬಿಟ್ಟಿದ್ದಾರೆ. ಕಿಚ್ಚ ಅಭಿನಯದ ಕೋಟಿಗೊಬ್ಬ-3 ಚಿತ್ರೀಕರಣ ಪೋಲ್ಯಾಂಡ್ ನಲ್ಲಿ ನಡೆಯುತ್ತಿದೆ. ಹಾಗಾಗಿ ಇಡೀ ಚಿತ್ರತಂಡ ಇತ್ತೀಚಿಗಷ್ಟೆ ಪೋಲ್ಯಾಂಡ್ ಗೆ ತೆರಳಿದೆ. ಫೋಲ್ಯಾಂಡ್ ನಲ್ಲಿ ಶೂಟಿಂಗ್ ನಲ್ಲಿರುವ ಸುದೀಪ್ ಮತ್ತು ನಟ ರವಿಶಂಕರ್ ಸೇರಿದಂತೆ ಚಿತ್ರತಂಡ ಕ್ಯಾಮರಾಗೆ ಪೋಸ್ ನೀಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಇದರ ಜೊತೆಗೀಗ ಕಿಚ್ಚ ಪೋಲ್ಯಾಂಡ್ ನ ಭಾರತೀಯ ರಾಯಭಾರಿ ಕಚೇರಿಗೆ ಭೇಟಿ ನೀಡಿರುವ ಫೋಟೋ ಕೂಡ ವೈರಲ್ ಆಗಿದೆ. ಹೌದು, ಸುದೀಪ್ ಚಿತ್ರೀಕರಣದ ನಡುವೆಯು ಪೋಲ್ಯಾಂಡ್ ನ ಭಾರತೀಯ ರಾಯಭಾರಿ ಕಚೇರಿಗೆ ಭೇಟಿ ನೀಡಿ ಭಾರತೀಯ ರಾಯಭಾರಿ ತ್ಸೆವಾಂಗ್ ನಮ್ಗ್ಯಾಲ್ ಅವರನ್ನು ಭೇಟಿಯಾಗಿದ್ದಾರೆ.
ಸುದೀಪ್ ಜೊತೆ ನಟ ರವಿಶಂಕರ್, ಅಫ್ತಾಬ್ ಶಿವದಾಸಾನಿ ಸೇರಿದಂತೆ ಇಡೀ ಚಿತ್ರತಂಡ ಪೋಲ್ಯಾಂಡ್ ನ ಭಾರತೀಯ ರಾಯಭಾರಿ ಕಚೇರಿಗೆ ಭೇಟಿ ನೀಡಿ ಕೆಲವು ಸಮಯ ಮಾತುಕತೆ ನಡೆಸಿದ್ದಾರೆ. ಜೊತೆಗೆ ಭಾರತೀಯ ರಾಯಭಾರಿ ತ್ಸೆವಾಂಗ್ ನಮ್ಗ್ಯಾಲ್ ಅವರ ಜೊತೆ ಫೋಟೋಕ್ಲಿಕ್ಕಿಸಿಕೊಂಡಿದ್ದಾರೆ. ಈ ಫೋಟೋ ಈಗ ಸಾಮಾಜಿಕ ಜಾಲಾತಾಣದಲ್ಲಿ ಹರಿದಾಡುತ್ತಿದೆ.

ಚಿತ್ರೀಕರಣ ಸದ್ಯ ಪೋಲ್ಯಾಂಡ್ ನ ವಾರ್ಸಾದಲ್ಲಿ ನಡೆಯುತ್ತಿದೆ. ಚಿತ್ರದ ಹೈ ವೋಲ್ಟೇಜ್ ಚೇಸಿಂಗ್ ದೃಶ್ಯವನ್ನು ಸೆರೆಹಿಡಿಯಲಾಗುತ್ತಿದೆ. ಚಿತ್ರದ ಮೊದಲಾರ್ಧ ಚಿತ್ರೀಕರಣ ಬೆಲ್ ಗ್ರೆಡ್ ನಲ್ಲಿ ಚಿತ್ರೀಕರಣ ಮಾಡಲಾಗಿದೆಯಂತೆ. ಈಗಾಗಲೆ ಸಾಕಷ್ಟು ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಈಗ ಕೊನೆಯ ಹಂತದ ಚಿತ್ರೀಕರಣ ಮಾಡುತ್ತಿದೆ.


Click it and Unblock the Notifications











