»   » ಸುದೀಪ್ ಚಿತ್ರಕ್ಕೆ ಇನ್ನು 60 ದಿನಗಳ ಶೂಟಿಂಗ್ ಬಾಕಿ!

ಸುದೀಪ್ ಚಿತ್ರಕ್ಕೆ ಇನ್ನು 60 ದಿನಗಳ ಶೂಟಿಂಗ್ ಬಾಕಿ!

Posted By:
Subscribe to Filmibeat Kannada

ನಿರ್ದೇಶಕ ಕೆ.ಎಸ್ ರವಿಕುಮಾರ್ ಹಾಗೂ ಕಿಚ್ಚ ಸುದೀಪ್ ಅವರ ಕಾಂಬಿನೇಷನ್ ನಲ್ಲಿ ಮೂಡಿ ಬರುತ್ತಿರುವ ದ್ವಿಭಾಷಿಕ ಹೊಸ ಚಿತ್ರ ಶೂಟಿಂಗ್ ಹಂತದಲ್ಲಿದ್ದು, ಈಗಾಗಲೇ 40 ದಿನಗಳ ಶೂಟಿಂಗ್ ಯಶಸ್ವಿಯಾಗಿ ಮುಗಿಸಿದೆ. ಇನ್ನು ಹಾಡುಗಳು ಸೇರಿದಂತೆ 60 ದಿನಗಳ ಶೂಟಿಂಗ್ ಬಾಕಿ ಇದ್ದು, ಈಗಾಗಲೇ ಚಿತ್ರತಂಡ ಶೂಟಿಂಗ್ ಗಾಗಿ ಚೆನ್ನೈನಲ್ಲಿ ಬೀಡು ಬಿಟ್ಟಿದೆ.

Kannada Actor Sudeep Movie 60 more days of shoot pending

ನಿರ್ಮಾಪಕ ಸೂರಪ್ಪ ಬಾಬು ಅವರು ಬಂಡವಾಳ ಹೂಡಿರುವ ಚಿತ್ರ ಕನ್ನಡ ಹಾಗೂ ತಮಿಳು ಭಾಷೆಯಲ್ಲಿ ಏಕಕಾಲದಲ್ಲಿ ತೆರೆ ಕಾಣಲಿದೆ. ಈಗಾಗಲೇ ತಮಿಳು ಚಿತ್ರಕ್ಕೆ 'ಮುಡಿಂಜ ಇವನ ಪುಡಿ' ಎಂದು ಹೆಸರಿಡಲಾಗಿದ್ದು, ಕನ್ನಡಕ್ಕೆ ಇನ್ನೂ ಟೈಟಲ್ ಪಕ್ಕಾ ಆಗಿಲ್ಲ.[ಕಿಚ್ಚನ ಬರ್ತ್ ಡೇ ಸ್ಪೆಷಲ್: ಫಸ್ಟ್ ಲುಕ್ ಟೀಸರ್ ಝಲಕ್]

ಬೆಂಗಳೂರು ಹಾಗೂ ಚೆನ್ನೈ ಸುತ್ತಮುತ್ತ ಭರ್ಜರಿಯಾಗಿ ಚಿತ್ರದ ಶೂಟಿಂಗ್ ಸಾಗುತ್ತಿದ್ದು, ಹಾಡಿನ ಶೂಟಿಂಗ್ ಗಾಗಿ ವಿದೇಶಕ್ಕೆ ಹೋಗುವ ಯೋಜನೆಯನ್ನ ಚಿತ್ರತಂಡ ಹಾಕಿಕೊಂಡಿದೆ.

ಚಿತ್ರದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಗೆ ನಾಯಕಿಯಾಗಿ ಇದೇ ಮೊದಲ ಬಾರಿಗೆ ನಟಿ ನಿತ್ಯಾ ಮೆನನ್ ಕಾಣಿಸಿಕೊಂಡಿದ್ದಾರೆ.[ಕಿಚ್ಚನಿಗೆ 'ಕೋಟಿಗೊಬ್ಬ 2' ತಂಡದಿಂದ ಅಚ್ಚರಿಯ ಗಿಫ್ಟ್]

Kannada Actor Sudeep Movie 60 more days of shoot pending

ತಮಿಳು ವರ್ಷನ್ ನ 'ಮುಡಿಂಜ ಇವನ ಪುಡಿ' ಚಿತ್ರದ ಫಸ್ಟ್ ಲುಕ್ ಟೀಸರ್ ಸುದೀಪ್ ಹುಟ್ಟುಹಬ್ಬದಂದು ಬಿಡುಗಡೆಯಾಗಿದ್ದು, ಸಖತ್ ರೆಸ್ಪಾನ್ಸ್ ಗಿಟ್ಟಿಸಿಕೊಂಡಿದೆ. ಜೊತೆಗೆ ಸುದೀಪ್ ಅವರ ಸ್ಟೈಲಿಷ್ ಲುಕ್ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸುತ್ತಿದ್ದು, ಅಭಿಮಾನಿಗಳು ಚಿತ್ರ ತೆರೆಗೆ ಬರುವುದನ್ನೇ ಕಾಯುತ್ತಿದ್ದಾರೆ.

English summary
Director KS Ravi Kumar directed film starring Actor Sudeep has 60 more days of shooting pending including songs. Already 40 days of shooting is complete. Kannada Actor sudeep, Actress Nithya menen in the lead role.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X