ಪೈರಸಿ ಪ್ರಕರಣ ಕೈಬಿಡುವಂತೆ ಸುದೀಪ್ ಗೆ ಒತ್ತಡ: ಫೋನ್ ಮಾಡಿದ ಆ ಎಂಎಲ್ಸಿ ಯಾರು?

ನಟ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾದ ಪೈರಸಿ ಪ್ರಕರಣ ಮತ್ತೊಂದು ತಿರುವು ಪಡೆದುಕೊಳ್ಳುವ ಸೂಚನೆ ಕಾಣುತ್ತಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಸುದೀಪ್ "ಪೈರಸಿ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆ, ನಾನು ಸುಮ್ಮನಿಲ್ಲ" ಎಂದು ಗುಡುಗಿದ್ದಾರೆ.

ಈಗಾಗಲೆ ಪೊಲೀಸರು ಪೈರಸಿ ಪ್ರಕರಣದಲ್ಲಿ ಭಾಗಿಯಾದ ಒಬ್ಬನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಇದರ ನಡುವೆ ಪ್ರಕರಣ ಮುಚ್ಚಿಹಾಕಿವ ಪ್ರಯತ್ನ ನಡೆಯುತ್ತಿರುವ ಜೊತೆಗೆ ಸುದೀಪ್ ಗೆ ಪ್ರಕರಣ ಕೈಬಿಡುವಂತೆ ಒತ್ತಡ ಕೂಡ ಜಾಸ್ತಿಯಾಗಿದೆಯಂತೆ. ಪೈರಸಿ ಪ್ರಕರಣ ಮುಚ್ಚಿಹಾಕುವ ಪ್ರಯತ್ನ ನಡೆಯುತ್ತಿದೆ ಎನ್ನುವ ಬಗ್ಗೆ ಸುದೀಪ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಪ್ರಕರಣ ಮುಚ್ಚಿಹಾಕುವ ಪ್ರಯತ್ನ ನಡೆಯುತ್ತಿದೆ

ಪ್ರಕರಣ ಮುಚ್ಚಿಹಾಕುವ ಪ್ರಯತ್ನ ನಡೆಯುತ್ತಿದೆ

"ಪೈರಸಿ ಪ್ರಕರಣ ಮತ್ತು ಬಂಧಿತರ ಬಗ್ಗೆ ಅಪ್ ಡೇಟ್ ಕೇಳುತ್ತಿದ್ದವರಿಗೆ. ಈ ಪ್ರಕರಣ ಮುಚ್ಚಿಹಾಕುವ ಪ್ರಯತ್ನ ನಡೆಯುತ್ತಿದೆ" ಎಂದು ಹೇಳಿದ್ದಾರೆ. ಹಾಗಾದ್ರೆ ಪೈರಸಿ ಪ್ರಕರಣ ಮುುಚ್ಚಿ ಹಾಕುವ ಪ್ರಯತ್ನ ಮಾಡುತ್ತಿರುವುದಾದರು ಯಾರು? ಪೈರಸಿ ಪ್ರಕರಣ ಹತ್ತಿಕ್ಕುವವರ ವಿರುದ್ಧ ಸುದೀಪ್ ಮತ್ತೆ ಕೆಂಡಕಾರಿರುವುದು ಅಚ್ಚರಿ ಮೂಡಿಸಿದೆ. ಎಷ್ಟೆ ಪ್ರಯತ್ನ ಪಟ್ಟರು ನಾನು ಸುಮ್ಮನಿರಲ್ಲ ಎಂದು ಸುದೀಪ್ ಖಡಕ್ ಆಗಿ ಹೇಳಿದ್ದಾರೆ.

ಆಪ್ತ ಎಂಎಲ್ಸಿ ಇಂದ ಫೋನ್

ಆಪ್ತ ಎಂಎಲ್ಸಿ ಇಂದ ಫೋನ್

"ನನ್ನ ಬೆಂಬಲಕ್ಕೆ ಇರುವ ಎಂ ಎಲ್ ಸಿ ಯಿಂದ ಫೋನ್ ಮಾಡಿಸಿವುದು ಅನಿವಾರ್ಯವಾ? ಜನರು ಮತ್ತು ಸ್ನೇಹಿತರು ನನ್ನ ಪರ ಇರುವವರೆಗೂ ಅದರ ಅವಶ್ಯಕತೆ ಇಲ್ಲ ಎಂದು ಕೊಳ್ಳುತ್ತೇನೆ. ಈ ಬಗ್ಗೆ ಮತ್ತೆ ಧ್ವನಿ ಎತ್ತುತ್ತೇನೆ. ಇಲ್ಲಿಗೆ ಬಿಡಲ್ಲ" ಎಂದು ಹೇಳಿದ್ದಾರೆ. ಹಾಗಾದ್ರೆ ಸುದೀಪ್ ಗೆ ಫೋನ್ ಮಾಡುತ್ತಿರುವ ಆಪ್ತ ಎಂಎಲ್ಸಿ ಯಾರು? ಪ್ರಕರಣ ಕೈಬಿಡುವಂತೆ ಸುದೀಪ್ ಗೆ ಒತ್ತಡ ಹೇರುತ್ತಿರುವುದೇಗೆ? ಈ ಬಗ್ಗೆ ಸುದೀಪ್ ಅವರೆ ಬಹಿರಂಗ ಪಡೆಸಬೇಕು.

ಕೈಗೆ ಹಾಕಿರುವುದು ಕಡಗ, ಬಳೆ ಅಲ್ಲ

ಕೈಗೆ ಹಾಕಿರುವುದು ಕಡಗ, ಬಳೆ ಅಲ್ಲ

"ನಾನು ಹಾಗೂ ನನ್ನ ಸ್ನೇಹಿತರು, ಕೈಗೆ ಹಾಕಿರುವುದು ಕಡಗ, ಬಳೆ ಅಲ್ಲ. ನನಗೆ ನನ್ನ ಸಿನಿಮಾ ಬಿಟ್ಟರೆ ಬೇರೆನುಗೊತಿಲ್ಲ. ನನ್ನ ಮೌನ, ನನ್ನ ತಾಳ್ಮೆ, ಎರಡನ್ನು ಪರೀಕ್ಷಿಸಿದ್ದಾರೆ. ಸಂಪೂರ್ಣ ಪೈಲ್ವಾನ್ ತಂಡದ ಶ್ರಮವನ್ನು ಹಾಳು ಮಾಡಲು ತಮ್ಮ ಶಕ್ತಿಯನ್ನು ಹಾಕಿದ್ದಾರೆ. ಇದರ ಹಿಂದಿರುವ ವ್ಯಕ್ತಿಗಳ ನೆಮ್ಮದಿಯ ನಿದ್ರೆ, ಇನ್ನು ಕೆಲವು ದಿನಗಳು ಮಾತ್ರ" ಎಂದು ಹೇಳಿದ್ದಾರೆ.

ಒಬ್ಬ ಆರೋಪಿಯ ಬಂಧನ

ಒಬ್ಬ ಆರೋಪಿಯ ಬಂಧನ

ಪೈಲ್ವಾನ್ ಸಿನಿಮಾ ಪೈರಸಿ ಪ್ರಕರಣದಲ್ಲಿ ಒಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಪೈರಸಿ ಮಾಡಿ ಲಿಂಕ್ ಶೇರ್ ಮಾಡಿದ ಒಬ್ಬ ರಾಕೇಶ್ ವಿರಾಟ್ ನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಈತನ ಹಿಂದೆ ಇರುವ ವ್ಯಕ್ತಿಗಳು ಯಾರು ಎನ್ನುವ ಬಗ್ಗೆ ತನಿಖೆ ನಡೆಯುತ್ತಿದೆ. ಆದ್ರೆ ಅಷ್ಟರಲ್ಲಿ ಈ ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆ ಎಂದು ಸುದೀಪ್ ಹೇಳುತ್ತಿದ್ದಾರೆ. ಅಲ್ಲದೆ ಪ್ರಕರಣ ಕೈಬಿಡುವಂತೆ ಸುದೀಪ್ ಗೆ ಫೋನ್ ಮಾಡಲಾಗುತ್ತಿದೆ ಅಂದ್ರೆ ಇದು ಸುದೀಪ್ ಮೇಲೆ ಸೇಡು ತೀರಿಸಿಕೊಳ್ಳಲು ಉದ್ದೇಶ ಪೂರ್ವಕವಾಗಿ ಮಾಡಿದ ಕೆಲಸವಾ ಎನ್ನುವುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

More from Filmibeat

English summary
Seems like there are attempts to silence the issue. Is a call from an MLC in our support mandatory sudeep said.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X