'ಕ್ಯಾಡ್ಬರಿ' ಧರ್ಮ ಕೀರ್ತಿರಾಜ್ ಗೆ ಕಾಲೆಳೆದ ಕಿಚ್ಚ ಸುದೀಪ್

Recommended Video

ಟ್ವಿಟರ್‍ನಲ್ಲಿ ಕಾಲೆಳೆದ ಸುದೀಪ್ |FILMIBEAT KANNADA

ಸ್ಯಾಂಡಲ್ ವುಡ್ ನ ಯುವ ಪ್ರತಿಭೆಗಳ ಪಾಲಿಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಲಕ್ಕಿ ಅಂದರೆ ತಪ್ಪಾಗಲ್ಲ. ಯಾಕೆಂದರೆ ಚಿತ್ರರಂಗಕ್ಕೆ ಎಂಟ್ರಿ ಕೊಡುವ ಸಾಕಷ್ಟು ಯುವ ಕಲಾವಿದರಿಗೆ ಒಂದಿಷ್ಟು ಧೈರ್ಯದ ಮಾತುಗಳನ್ನು ಹೇಳುವ ಮೂಲಕ ಅವರ ಬೆಂಬಲಕ್ಕೆ ಸದಾ ನಿಲ್ತಾರೆ ಸುದೀಪ್. ಇಂಡಸ್ಟ್ರಿಯಲ್ಲಿ ಯಾವುದೇ ಉತ್ತಮ ಸಿನಿಮಾಗಳು ಬಂದರೂ ಆ ಚಿತ್ರತಂಡಕ್ಕೆ ಕಿಚ್ಚನ ಕಡೆಯಿಂದ ಒಂದು ವಿಶ್ ಇದ್ದೇ ಇರುತ್ತೆ.

ಚಂದನವನದಲ್ಲಿ ಯಾವುದೇ ಉತ್ತಮ ಸಿನಿಮಾದ ಟ್ರೈಲರ್ ಮತ್ತು ಟೀಸರ್ ಗಳು ರಿಲೀಸ್ ಆದರೂ ಸಹ ಅದನ್ನು ಗುರುತಿಸಿ ಟ್ವಿಟರ್ ಮೂಲಕ ಶುಭಾಶಯ ಕೋರುತ್ತಾರೆ ಸುದೀಪ್. ಸದ್ಯ ಚಾಣಾಕ್ಷ ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. ಈ ಟ್ರೈಲರ್ ನೋಡಿ ಇಂಪ್ರೆಸ್ ಆದ ಸುದೀಪ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಟ್ರೈಲರ್ ನೋಡಿದ ಕಿಚ್ಚ, ''ಕೆಲವು ವರ್ಷಗಳ ಹಿಂದೆ ನಿನ್ನನ್ನು ನೋಡಿದ ಹಾಗೆ, ಈಗಲು ಇದ್ದೀಯಾ. ನೀನೊಬ್ಬ ಪ್ರಾಮಾಣಿಕ ಮತ್ತು ಎನರ್ಜಿಟಿಕ್ ಹುಡುಗ. ಚಾಣಾಕ್ಷ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದು ನೋಡಿ ಖುಷಿಯಾಯಿತು. ಶುಭವಾಗಲಿ ಸಹೋದರ'' ಎಂದು ಟ್ವಿಟರ್ ಮೂಲಕ ಕ್ಯಾಡ್ಬರಿಗೆ ವಿಶ್ ಮಾಡಿದ್ದಾರೆ.

Kannada actor Sudeep react on dharma keerthiraj tweet

ಕಿಚ್ಚ ವಿಶ್ ಮಾಡಿದ ನಂತರ ಧರ್ಮ ಕೀರ್ತಿ ರಾಜ್ ಧನ್ಯವಾದ ತಿಳಿಸಿದ್ದಾರೆ. ಇದಕ್ಕೆ ಮತ್ತೆ ಪ್ರತಿಕ್ರಿಯಿಸಿದ ಸುದೀಪ್, ''ಅಷ್ಟಕ್ಕೂ ನಾನು ನಿನಗೆ ಧನ್ಯವಾದ ಹೇಳಬೇಕು, ಯಾಕೆಂದರೆ ನೀನು ನನಗೆ ಟ್ವೀಟ್ ಮಾಡುವುದೇ ತುಂಬ ಅಪರೂಪ'' ಎಂದು ಧರ್ಮ ಕೀರ್ತಿರಾಜ್ ಅವರನ್ನು ತಮಾಷೆಯಾಗಿ ಕಿಚಾಯಿಸಿದ್ದಾರೆ ಕಿಚ್ಚ.

ಅಂದ್ಹಾಗೆ, ಚಾಣಾಕ್ಷ ಧರ್ಮ ಕೀರ್ತಿರಾಜ್ ಅಭಿನಯದ ಸಿನಿಮಾ. ವರ್ಷದ ಬಳಿಕ ಚಾಣಾಕ್ಷ ಚಿತ್ರದ ಮೂಲಕ ಕ್ಯಾಡ್ಬರಿ ಧರ್ಮ ಕೀರ್ತಿ ರಾಜ್ ನಾಯಕನಾಗಿ ಎಂಟ್ರಿ ಕೊಡುತ್ತಿದ್ದಾರೆ. ಚಾಣಾಕ್ಷ ಚಿತ್ರದ ಟ್ರೈಲರ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹ ಗೆಳೆಯ ಧರ್ಮ ಕೀರ್ತಿರಾಜ್ ಗೆ ಶುಭಕೋರಿದ್ದಾರೆ. ಚಾಣಾಕ್ಷ ಚಿತ್ರಕ್ಕೆ ಮಹೇಶ್ ಚಿನ್ಮಯ್ ಆಕ್ಷನ್ ಕಟ್ ಹೇಳಿದ್ದಾರೆ.

More from Filmibeat

English summary
Kannada actor kiccha sudeep has taken his twitter account to wish dharma keerthiraj stareer chanaksha movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X