ವೈರಲ್ ಆಗಿದೆ 'ಹೆಬ್ಬುಲಿ' ಕಿಚ್ಚ ಸುದೀಪ್ ಹೇರ್ ಸ್ಟೈಲ್
ಜೂನ್ 8, ಬುಧವಾರದಂದು ಕಿಚ್ಚ ಸುದೀಪ್ ಅಭಿನಯದ 'ಹೆಬ್ಬುಲಿ' ಚಿತ್ರದ ಅನಧೀಕೃತ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಆಗಿತ್ತು. ಆ ಪೋಸ್ಟರ್ ನಲ್ಲಿ ಸುದೀಪ್ ಅವರ ಸ್ಟೈಲಿಷ್ ಹೇರ್ ಸ್ಟೈಲ್ ನೋಡಿದ ಅಭಿಮಾನಿಗಳು ಫಿದಾ ಆಗಿದ್ದರು.
ಹಾಗಾಗಿ ಅಭಿಮಾನಿಗಳು ಕೂಡ ಪೋಸ್ಟರ್ ಬಿಡುಗಡೆ ಆದ ಮರುದಿನವೇ ಸುದೀಪ್ ಅವರಂತೆಯೇ ಹೇರ್ ಸ್ಟೈಲ್ ಮಾಡಿಕೊಂಡು ತಮ್ಮ ಪ್ರೀತಿಯ ಕಿಚ್ಚನ ಮೇಲಿರುವ ಅಭಿಮಾನವನ್ನು ಈ ಮೂಲಕ ತೋರಿಸಿದ್ದಾರೆ. ಅಂತೂ ಸದ್ಯಕ್ಕೆ ಸುದೀಪ್ ಅವರ ಹೇರ್ ಸ್ಟೈಲ್ ಇಡೀ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.[ಶುಕ್ರವಾರ 'ಹೆಬ್ಬುಲಿ'ಯ ಇನ್ನೊಂದು ಅವತಾರ ನಿರೀಕ್ಷಿಸಿ]

ಸಾಮಾನ್ಯವಾಗಿ ರಾಕಿಂಗ್ ಸ್ಟಾರ್ ಯಶ್ ಅವರುತಮ್ಮ ಪ್ರತೀ ಸಿನಿಮಾಗಳಿಗೆ ಹೇರ್ ಸ್ಟೈಲ್ ಬದಲಾವಣೆ ಮಾಡುತ್ತಿದ್ದರು. ಒಂದು ಸಿನಿಮಾದಲ್ಲಿ ಇದ್ದಂತೆ ಮತ್ತೊಂದು ಸಿನಿಮಾದಲ್ಲಿ ಅವರ ಹೇರ್ ಸ್ಟೈಲ್ ಇರುತ್ತಿರಲಿಲ್ಲ. ಅದಕ್ಕೆ ಸಾಕಷ್ಟು ಮೆಚ್ಚುಗೆ ಕೂಡ ವ್ಯಕ್ತವಾಗಿತ್ತು. ಇದೀಗ ಸುದೀಪ್ ಅವರು ತಮ್ಮ ಕೇಶದಲ್ಲಿ ಮಾಡಿರುವ ವಿಭಿನ್ನ ಪ್ರಯೋಗಕ್ಕೆ ಅಭಿಮಾನಿಗಳು ಹುಚ್ಚರಾಗಿ ಹೋಗಿದ್ದಾರೆ.
ಹೌದು ಕಿಚ್ಚ ಸುದೀಪ್ ಅವರ ಅಭಿಮಾನಿಗಳು ಇದೀಗ ಕಿಚ್ಚನ ಸ್ಟೈಲ್ ಅನ್ನು ಫಾಲೋ ಮಾಡುತ್ತಿದ್ದಾರೆ. 'ಹೆಬ್ಬುಲಿ' ಪೋಸ್ಟರ್ ನಲ್ಲಿರುವ ಸುದೀಪ್ ಅವರ ಹೇರ್ ಸ್ಟೈಲನ್ನು ನೋಡಿದ ಅಭಿಮಾನಿಗಳು ಅದೇ ತರ ಹೇರ್ ಸ್ಟೈಲ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಕೊಂಡಿದ್ದಾರೆ.['ಹೆಬ್ಬುಲಿ' ಫಸ್ಟ್ ಲುಕ್ ಔಟ್: ಹೊಸ ಅವತಾರದಲ್ಲಿ ಕಿಚ್ಚ ಸುದೀಪ್]

ಅಭಿಮಾನಿಗಳ ಈ ಹುಚ್ಚು ಅಭಿಮಾನವನ್ನು ಕಂಡ ಸುದೀಪ್ ಅವರು ನಿಬ್ಬೆರಗಾಗಿ ಹೋಗಿ, ಅಭಿಮಾನಿಗಳು ತನ್ನ ಮೇಲಿಟ್ಟಿರುವ ಅಭಿಮಾನಕ್ಕೆ ಟ್ವಿಟ್ಟರ್ ಮೂಲಕ ಹರ್ಷ ವ್ಯಕ್ತಪಡಿಸಿದ್ದಾರೆ.
ಅಭಿಮಾನಿಗಳು ಕೂಡ ತನ್ನಂತೆ ಮಾಡಿಕೊಂಡಿರುವ ಹೇರ್ ಸ್ಟೈಲ್ ಕಂಡು ಕಿಚ್ಚ ಸುದೀಪ್ ಅವರು ಸಾಲು-ಸಾಲು ಟ್ವೀಟ್ ಗಳನ್ನು ಮಾಡುವ ಮೂಲಕ ಅಭಿಮಾನಿಗಳ ಮೇಲೆ ತಮಗೆಷ್ಟು ಪ್ರೀತಿ-ಗೌರವ ಇದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. (ಕಿಚ್ಚನ ರೆಸ್ಪಾನ್ಸ್ ನೋಡಲು ಈ ಟ್ವಿಟ್ಟರ್ ಐಡಿ ಕ್ಲಿಕ್ ಮಾಡಿ)
ಒಟ್ನಲ್ಲಿ 'ಹೆಬ್ಬುಲಿ' ಚಿತ್ರ ಸುದೀಪ್ ಅವರ ಹೇರ್ ಸ್ಟೈಲ್ ಮೂಲಕ ಆರಂಭಿಕ ಹಂತದಲ್ಲಿಯೇ 'ಹೆಬ್ಬುಲಿ' ಸಾಕಷ್ಟು ಸುದ್ದಿ ಮಾಡುತ್ತಿದೆ. ಕಿಚ್ಚ ಸುದೀಪ್ ಅವರಂತೆಯೇ ಅವರ ಅಭಿಮಾನಿಗಳು ಮಾಡಿಕೊಂಡಿರುವ ಹೇರ್ ಸ್ಟೈಲ್ ನ ಫೋಟೋ ಕಲೆಕ್ಷನ್ಸ್ ಇಲ್ಲಿದೆ ನೋಡಿ ಕೆಳಗಿನ ಸ್ಲೈಡುಗಳಲ್ಲಿ....


Click it and Unblock the Notifications











