ಸ್ಟಾರ್-ವಾರ್, ಮಣ್ಣು-ಮಸಿ ಅಂತ್ಹೇಳಿ ನಟರ ಮಧ್ಯೆ ಹುಳಿ ಹಿಂಡಬೇಡಿ: ಕಿಚ್ಚ

ಬಿಗ್ ಸ್ಟಾರ್ ಗಳ ಸಿನಿಮಾ ಒಂದೇ ದಿನ ತೆರೆ ಕಂಡರೆ, ಸ್ಟಾರ್-ವಾರ್ ಎಂದು ಬರೆಯುತ್ತಾರೆ. ಆದರೆ ಇದು ಸರಿಯಲ್ಲ ಎಂದು ಖುದ್ದು ಕಿಚ್ಚ ಸುದೀಪ್ ಅವರು ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದ್ದಾರೆ. ಜೊತೆಗೆ ಹೀಗೆ ಬರೆಯುವ ಮೂಲಕ ಸಂಬಂಧಗಳನ್ನು ಹಾಳು ಮಾಡಬೇಡ

By Suneetha

ಯಾವುದೇ ಇಬ್ಬರು ಬಿಗ್ ಸ್ಟಾರ್ ಗಳ ಸಿನಿಮಾ ಒಟ್ಟೊಟ್ಟಿಗೆ ಬರ್ತಾ ಇದೆ ಅಂತಂದ್ರೆ, ಸ್ಟಾರ್-ವಾರ್, ಅವರು ವರ್ಸಸ್ ಇವರು, ಅಂತೆಲ್ಲಾ ಉದ್ದುದ್ದಕ್ಕೂ ಎಲ್ಲರೂ ಬರೆಯುತ್ತಾರೆ. ಇದೀಗ ಸ್ಟಾರ್-ವಾರ್ ಎಂಬ ಕಾನ್ಸೆಪ್ಟ್ ಗೆ ಅಭಿನಯ ಚಕ್ರವರ್ತಿ ಅವರು ತಮ್ಮದೇ ಧಾಟಿಯಲ್ಲಿ ಉತ್ತರ ನೀಡಿದ್ದಾರೆ.

ಜೊತೆಗೆ ಸುಖಾ-ಸುಮ್ಮನೆ ಸ್ಟಾರ್-ವಾರ್ ಅನ್ನೋ ದೊಡ್ಡ-ದೊಡ್ಡ ಪದಗಳನ್ನು ಬಳಸಿ, ಆತ್ಮೀಯರಾಗಿರುವಸ್ಟಾರ್ ನಟರ ಮಧ್ಯೆ ಹುಳಿ ಹಿಂಡುವ ಕೆಲಸ ಮಾಡಬೇಡಿ, ಅಂತ ಖುದ್ದು ಕಿಚ್ಚ ಸುದೀಪ್ ಅವರು ಟ್ವೀಟ್ ಮಾಡಿದ್ದಾರೆ.[ಈ ಬಾರಿ ತೆರೆ ಮೇಲೆ 'ದೀಪಾವಳಿ' ಆಚರಿಸ್ತಾರಾ ಭಾವಿ ದಂಪತಿ?]

Kannada Actor Sudeep's Tweets about Star-Wars

ಅಷ್ಟಕ್ಕೂ ಸುದೀಪ್ ಅವರು ಸ್ವಲ್ಪ ಬೇಸರ ಮಾಡಿಕೊಳ್ಳಲು ಪ್ರಮುಖ ಕಾರಣ 'ಸಂತು Straight Forward' ಮತ್ತು 'ಮುಕುಂದ ಮುರಾರಿ' ಚಿತ್ರಗಳು. ಈ ಎರಡೂ ಸಿನಿಮಾ ಮುಂದಿನ ವಾರ ಒಂದೇ ದಿನ ತೆರೆ ಕಾಣುವ ಸಂಭವವಿದೆ.

'ಮುಕುಂದ ಮುರಾರಿ' ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಆಗಿದೆ, ಥಿಯೇಟರ್ ಲಿಸ್ಟ್ ಕೂಡ ಹೊರಬಿದ್ದಿದೆ. ಜೊತೆಗೆ 'ಸಂತು Straight Forward' ಚಿತ್ರದ ಥಿಯೇಟರ್ ಲಿಸ್ಟ್ ಗಳು ಹೊರಬಂದಿವೆ. ಆದ್ದರಿಂದ ಎರಡೂ ಸಿನಿಮಾಗಳು ಒಟ್ಟೊಟ್ಟಿಗೆ ತೆರೆ ಕಾಣುವುದು ಬಹುತೇಕ ಪಕ್ಕಾ.['ಸಂತು' ಅಲಿಯಾಸ್ ಯಶ್ ಕಡೆಯಿಂದ ಅಭಿಮಾನಿಗಳಿಗೆ ಸರ್ ಪ್ರೈಸ್]

Kannada Actor Sudeep's Tweets about Star-Wars

ಈ ಎರಡೂ ಸಿನಿಮಾಗಳಲ್ಲಿ ಬಿಗ್ ಸ್ಟಾರ್ ನಟಿಸಿದ್ದಾರೆ. 'ಮುಕುಂದ ಮುರಾರಿ' ಚಿತ್ರದಲ್ಲಿ ಸುದೀಪ್ ಮತ್ತು ಉಪೇಂದ್ರ ನಟಿಸಿದ್ದು, ಯಶ್-ರಾಧಿಕಾ ಪಂಡಿತ್ 'ಸಂತು Straight Forward' ಚಿತ್ರದಲ್ಲಿ ನಟಿಸಿದ್ದಾರೆ. ಇದಕ್ಕೆ ಸ್ಟಾರ್-ವಾರ್ ಎಂದವರಿಗೆ, ಸುದೀಪ್ ಟ್ವೀಟ್ ಮಾಡುವ ಮೂಲಕ ಸ್ಪಷ್ಟನೆ ನೀಡಿದ್ದಾರೆ.[ದೀಪಾವಳಿಗೆ 'ಮುಕುಂದ ಮುರಾರಿ'ಯ ದರ್ಶನ]

Kannada Actor Sudeep's Tweets about Star-Wars

"ಇಬ್ಬರು ಸ್ಟಾರ್ ನಟರ ಚಿತ್ರ ಏಕಕಾಲದಲ್ಲಿ ಬಿಡುಗಡೆ ಆಗುವುದರಿಂದ ಸ್ಟಾರ್-ವಾರ್ ಆಗುತ್ತದೆ ಎಂಬುದಕ್ಕೆ ಅರ್ಥವಿಲ್ಲ. ಅಲ್ಲದೇ ಇಂತಹ ಹೇಳಿಕೆಗಳನ್ನು ನೀಡಿ, ನಟರ ನಡುವಿನ ಉತ್ತಮ ಸಂಬಂಧದಲ್ಲಿ ಬಿರುಕು ಮೂಡಿಸಬೇಡಿ" ಎಂದು ಕಿಚ್ಚ ಸುದೀಪ್ ವಿನಮ್ರವಾಗಿ ಟ್ವೀಟ್ ಮಾಡಿದ್ದಾರೆ.

Kannada Actor Sudeep's Tweets about Star-Wars

ಅಕ್ಟೋಬರ್ 28 ರಂದು 'ಮುಕುಂದ ಮುರಾರಿ' ಮತ್ತು ಸಂತು Straight Forward' ಇಡೀ ಕರ್ನಾಟಕದಾದ್ಯಂತ ಅದ್ಧೂರಿಯಾಗಿ ತೆರೆ ಕಾಣುತ್ತಿದೆ.

More from Filmibeat

English summary
This is the first time that 3 stars will see their films release on the same day, though it is only two films. On 28th of this month Kannada Movie 'Santhu Straight Forward' starring Yash and Radhika Pandit is releasing. On the same day Kiccha Sudeep-Upendra starrer 'Mukunda Murari' is also releasing. Here is the Sudeep's Clarification Tweets about Star-Wars.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X