ತಮಿಳು ನಟ ಧನುಷ್ ಹುಟ್ಟುಹಬ್ಬಕ್ಕೆ ಸುದೀಪ್ ಶುಭ ಹಾರೈಸಿದ್ದು ಹೀಗೆ
ಕಾಲಿವುಡ್ ನ ಕೊಲವೆರಿ ಖ್ಯಾತಿಯ ನಟ ಧನುಷ್ ಗೆ ಇಂದು ಹುಟ್ಟುಹಬ್ಬ ಸಂಭ್ರಮ. 36ನೇ ವಸಂತಕ್ಕೆ ಕಾಲಿಟ್ಟ ಧನುಷ್ ಜನ್ಮ ದಿನಾಚರಣೆಯನ್ನು ಆಚರಿಸಿಕೊಳ್ಳುತ್ತಿದ್ದಾರೆ. ಸ್ನೇಹಿತರು, ಕುಂಟುದವರ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಧನುಷ್ ಗೆ ಶುಭಾಶಯಗಳ ಮಹಾಪೂರವೆ ಹರಿದು ಬರುತ್ತಿದ್ದು, ಅಭಿಮಾನಿಗಳು ಸೇರಿದಂತೆ ಬೇರೆ ಬೇರೆ ಭಾಷೆಯ ಚಿತ್ರರಂಗದ ಗಣ್ಯರು ಸಹ ಶುಭಹಾರೈಸುತ್ತಿದ್ದಾರೆ.
ಧನುಷ್ ಗೆ ಶುಭಹಾರೈಸಿದವರಲ್ಲಿ ಸ್ಯಾಂಡಲ್ ವುಡ್ ಮಾಣಿಕ್ಯ ಕಿಚ್ಚ ಸುದೀಪ್ ಕೂಡ ಒಬ್ಬರು. ಧನುಷ್ ಮತ್ತು ಸುದೀಪ್ ಇಬ್ಬರು ಉತ್ತಮ ಸ್ನೇಹಿತರು. ಇಬ್ಬರ ನಡುವೆ ಉತ್ತಮ ಬಾಂಧವ್ಯವಿದೆ. ಇಬ್ಬರು ಕೂಡ ಒಟ್ಟಿಗೆ ಸಿನಿಮಾ ಮಾಡುತ್ತಾರೆ ಎನ್ನುವ ಮಾತುಗಳು ಆಗಾಗೆ ಕೇಳಿ ಬರುತ್ತಿವೆ.
ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಧನುಷ್ ಗೆ ನಟ ಸುದೀಪ್ "ನನ್ನ ಗೆಳೆಯ ಧನುಷ್ ಗೆ ಹುಟ್ಟುಹಬ್ಬದ ಶುಭಾಶಯಗಳು. ನೀವು ಅದ್ಭುತವಾದ ವ್ಯಕ್ತಿ. ಯಾವಾಗಲು ಒಳ್ಳೆಯದಾಗಲಿ" ಎಂದು ಹೇಳಿದ್ದಾರೆ.

ಧನುಷ್ 'ಮಾರಿ-2' ಚಿತ್ರದ ನಂತರ ಮತ್ತೆ ಅಭಿಮಾನಿಗಳ ಮುಂದೆ ಬಂದಿಲ್ಲ. ಸದ್ಯ ಎರಡು ಸಿನಿಮಾಗಳಲ್ಲಿ ದನುಷ್ ಅಭಿನಯಿಸುತ್ತಿದ್ದಾರೆ. ಇನ್ನು ಶಮಿತಾಭ್ ನಂತರ ಮತ್ತೊಂದು ಬಾಲಿವುಡ್ ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಕಾಲಿವುಡ್ ನಲ್ಲಿ ಸದ್ಯ ಅಸುರನ್ ಸಿನಿಮಾದಲ್ಲಿ ಧನುಷ್ ನಿರತರಾಗಿದ್ದಾರೆ.


Click it and Unblock the Notifications











