'ಏಕಾಂಗಿ' ಎಲ್ಲಾ ಬಿಟ್ಟಾಕಿ, ನಿಮ್ ಸ್ಟೈಲ್ ಸಿನಿಮಾ ಮಾಡಿ: ಸುದೀಪ್
Recommended Video
ಸ್ಯಾಂಡಲ್ ವುಡ್ ಮಾಣಿಕ್ಯ ಕಿಚ್ಚ ಸುದೀಪ್ ಮತ್ತು ಕ್ರೇಜಿ ಸ್ಟಾರ್ ರವಿಚಂದ್ರನ್ ಮತ್ತೆ ಒಂದಾಗಿ ತೆರೆ ಮೇಲೆ ಬರುತ್ತಿದ್ದಾರೆ. ಮಾಣಿಕ್ಯ, ಹೆಬ್ಬುಲಿಯಲ್ಲಿ ಅಭಿಮಾನಿಗಳನ್ನು ಮೋಡಿ ಮಾಡಿದ್ದ ಈ ಜೋಡಿ ಈಗ ರವಿ ಬೋಪಣ್ಣ ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ.
ರವಿಚಂದ್ರನ್ ನಿರ್ದೇಶನದ ಮತ್ತು ಅಭಿನಯದ ರವಿ ಬೋಪಣ್ಣ ಚಿತ್ರದಲ್ಲಿ ಸುದೀಪ್ ವಕೀಲನಾಗಿ ಬಣ್ಣಹಚ್ಚಿದ್ದಾರೆ. ರವಿಚಂದ್ರನ್ ನಿರ್ದೇಶನದಲ್ಲಿ ಅಭಿನಯಿಸುವುದೇ ಪುಣ್ಯ ಎಂದಿರುವ ಸುದೀಪ್, ಚಿತ್ರೀಕರಣದ ನಡುವೆ ಮಾಧ್ಯಮದ ಜೊತೆ ಒಂದಿಷ್ಟು ಇಂಟ್ರಸ್ಟಿಂಗ್ ಸಂಗತಿಯನ್ನು ಹಂಚಿಕೊಂಡಿದ್ದಾರೆ.

ಅವರ ಮಕ್ಕಳಿಗೆ ಸಿಗದ ಅದೃಷ್ಟ ಸಿಕ್ಕಿದೆ
"ರವಿ ಸರ್ ಮಕ್ಕಳಿಗೆ ಸಿಗದೆ ಇರುವ ಅದೃಷ್ಟ ನನಗೆ ಸಿಕ್ಕಿದೆ. ಆಡಿಯೋದಲ್ಲಿ ದುಡ್ಡು ಮಾಡಬಹುದು, ಗ್ಲಾಮರ್ ಅಂದ್ರೆ ಏನು, ಚಿಕ್ಕ ಹಾಡನ್ನು ಹೀಗೂ ಮಾಡಬಹುದು ಎನ್ನುವುದನ್ನು ತೋರಿಸಿದವರು ಅವರು. ಅನೇಕರಿಗೆ ರವಿ ಸರ್ ಸ್ಫೂರ್ತಿ ಆಗಿದ್ದಾರೆ. ಅವರ ನಿರ್ದೇಶನದಲ್ಲಿ ಕೆಲಸ ಮಾಡುವುದು ನನ್ನ ಪುಣ್ಯ" ಎಂದು ಹೇಳಿದ್ದಾರೆ.

ನ್ಯಾಯ ಕೇಳೋಣ ಅಂತ ಅನಿಸುತ್ತೆ
ಕೆಲವು ಟೈಂನಲ್ಲಿ ನ್ಯಾಯ ಕೇಳೋನ ಅಂತ ಅನಿಸುತ್ತೆ. ಸರಿಯಾಗಿ ಅಂತಹ ಪಾತ್ರ ಕೊಟ್ಟಿದ್ದಾರೆ. ಎಂದು ತಮಾಷೆ ಮಾಡುತ್ತ ವರ್ಷಗಳ ಬಳಿಕ ಕರಿ ಕೋಟು ಧರಿಸಿದ ಬಗ್ಗೆ ಹೇಳಿಕೊಂಡಿದ್ದಾರೆ. "ಇದು ರವಿ ಸರ್ ಕನಸು. ಅವರು ಹೇಗೆ ತೋರಿಸಬೇಕು ಅಂತ ಅಂದಕೊಂಡಿದ್ದಾರೊ ನಾನು ಹಾಗೆ ಮಾಡುತ್ತೇನೆ". ಎಂದು ಸುದೀಪ್ ಹೇಳಿದ್ದಾರೆ.

ಏಕಾಂಗಿ ಎಲ್ಲಾ ಬಿಟ್ಟಾಗಿ
"ರವಿ ಸರ್ ಮತ್ತೆ ಹಳೆಯ ರವಿ ಸರ್ ಆಗಬೇಕು ಎನ್ನುವುದು ನಮ್ಮೆಲರ ಉದ್ದೇಶ. ಅವರನ್ನು ಹಿಂದಿನ ರವಿ ಸರ್ ತರ ನೋಡಲು ಬಯಸುತ್ತೇನೆ. ನಿಮ್ಮತರ ಸ್ಟೈಲ್ ನಲ್ಲಿ ಸಿನಿಮಾ ಮಾಡಿ. ಏಕಾಂಗಿ ಎಲ್ಲಾ ಬಿಟ್ಟಾಗಿ" ಎಂದು ರವಿಚಂದ್ರನ್ ಗೆ ಸುದೀಪ್ ಹೇಳಿದ್ದಾರೆ. ಗ್ಲಾಮರ್ ಮಾಡಿಕೊಂಡು ಹಾಡುಗಳನ್ನು ಹಾಕಿಕೊಂಡು ಸಿನಿಮಾ ಮಾಡಿ. ರವಿ ಸರ್ ಏನಕ್ಕೆ ಖ್ಯಾತಿ ಅಂತ ಗೊತ್ತಲ್ಲ ಎಂದು ಕಾಲೆಳೆಯುತ್ತ ಮತ್ತೆ ರೋಮ್ಯಾಂಟಿಕ್ ಸಿನಿಮಾಗಳನ್ನು ಮಾಡಿ ಎಂದು ಸುದೀಪ್ ಹೇಳಿದ್ದಾರೆ.

ರವಿ ಸರ್ ತುಂಬ ರೋಮ್ಯಾಂಟಿಕ್
ರವಿ ಸರ್ ಸ್ಟೈಲ್ ನಲ್ಲಿ ನೀವು ಸಿನಿಮಾ ಮಾಡುತ್ತೀರಾ? ಎಂದು ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಸುದೀಪ್ ಅವರ ಥರ ಸ್ಟೈಲ್ ನಲ್ಲಿ ಸಿನಿಮಾ ಮಾಡಿದ್ರೆ ಖಂಡಿತ ಫೇಲ್ ಆಗ್ತೀನಿ. ರವಿ ಸರ್ ತುಂಬಾ ರೋಮ್ಯಾಟಿಂಕ್, ಆದ್ರೆ ನಾವು ಹಾಗಲ್ಲ. ದೃಶ್ಯಕ್ಕೆ ಏನು ಬೇಕೊ ಅದನ್ನು ಮಾಡೇ ಮಾಡ್ತಾರೆ. ಅವರು ಮನಸು ಮಾಡಿದ್ರೆ ಈಗಲು ಅಂತಹ ಸಿನಿಮಾಗಳನ್ನು ಮಾಡಬಹುದು. ಮಾಡುತ್ತಾರೆ" ಎಂದು ರವಿಚಂದ್ರನ್ ಬಗ್ಗೆ ಹೇಳಿದ್ದಾರೆ.


Click it and Unblock the Notifications











