ಪೋಲ್ಯಾಂಡ್ ನಲ್ಲಿರುವ 'ಕೋಟಿಗೊಬ್ಬನ' ಮೊದಲ ದರ್ಶನ
Recommended Video
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸದ್ಯ 'ಕೋಟಿಗೊಬ್ಬ-3' ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಮೊನ್ನೆ ಮೊನ್ನೆಯಷ್ಟೆ ಚಿತ್ರೀಕರಣಕ್ಕೆಂದು ಪೋಲ್ಯಾಂಡ್ ಗೆ ತೆರಳಿದ್ದಾರೆ ಕಿಚ್ಚ ಅಂಡ್ ಟೀಂ. ಕೋಟಿಗೊಬ್ಬ-3 ಚಿತ್ರೀಕರಣದಲ್ಲಿ ನಿರತರಾಗಿರುವ ಕಿಚ್ಚನ ಮೊದಲ ಫೋಟೋ ಈಗ ಬಹಿರಂಗವಾಗಿದೆ.
ಕೋಟಿಗೊಬ್ಬ-3 ಚಿತ್ರೀಕರಣ ಸದ್ಯ ಪೋಲ್ಯಾಂಡ್ ನ ವಾರ್ಸಾದಲ್ಲಿ ನಡೆಯುತ್ತಿದೆ. ಚಿತ್ರದ ಹೈ ವೋಲ್ಟೇಜ್ ಚೇಸಿಂಗ್ ದೃಶ್ಯವನ್ನು ಸೆರೆಹಿಡಿಯಲಾಗುತ್ತಿದೆ. ಚಿತ್ರದ ಮೊದಲಾರ್ಧ ಚಿತ್ರೀಕರಣ ಬೆಲ್ ಗ್ರೆಡ್ ನಲ್ಲಿ ಚಿತ್ರೀಕರಣ ಮಾಡಲಾಗಿದೆಯಂತೆ. ಈಗಾಗಲೆ ಸಾಕಷ್ಟು ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಈಗ ಕೊನೆಯ ಹಂತದ ಚಿತ್ರೀಕರಣ ಮಾಡುತ್ತಿದೆ. ಸದ್ಯ ಪೋಲ್ಯಾಂಡ್ ನಿಂದ ಬಂದಿರುವ ಫೋಟೋದಲ್ಲಿ ಸುದೀಪ್ ಜೊತೆ ನಟ ರವಿಶಂಕರ್ ಕೂಡ ಕಾಣಿಸಿಕೊಂಡಿದ್ದಾರೆ.
ಅಂದ್ಹಾಗೆ ಕೋಟಿಗೊಬ್ಬ-3 ಚಿತ್ರಕ್ಕೆ ಶಿವ ಕಾರ್ತಿಕ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ನಿರ್ಮಾಪಕ ಸೂರಪ್ಪ ಬಾಬು ಬಂಡವಾಳ ಹೂಡಿದ್ದಾರೆ. ಸುದೀಪ್ ಗೆ ನಾಯಕಿಯಾಗಿ ಮಡೊನ್ನಾ ಸೆಬಾಸ್ಟಿಯನ್ ಕಾಣಿಸಿಕೊಳ್ಳುತ್ತಿದ್ದಾರೆ. ಮಲಯಾಳಂನ ಈ ಸುಂದರಿ ಮೊದಲ ಬಾರಿಗೆ ಕನ್ನಡ ಸಿನಿಮಾ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.

ವಿಶೇಷ ಅಂದ್ರೆ ಸುದೀಪ್ ಪೋಲ್ಯಾಂಡ್ ಗೆ ತೆರಳುವ ಫೈಟ್ ನಲ್ಲಿಯೆ ಧಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ ಕೂಡ ಪ್ರಯಾಣ ಬೆಳೆಸಿತ್ತು. ಒಂದೆ ಫೈಟ್ ನಲ್ಲಿ ಪ್ರಯಾಣ ಬೆಳೆಸಿದ ಖುಷಿಯನ್ನು ಸುದೀಪ್ ಕ್ರಿಕೆಟ್ ತಂಡದ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿ ಹಂಚಿಕೊಂಡಿದ್ದರು.


Click it and Unblock the Notifications











