ಅಭಿಮಾನಿಗಳ ಜೊತೆ ಕುಳಿತು 'ಪೈಲ್ವಾನ್' ಸಿನಿಮಾ ವೀಕ್ಷಿಸಿದ ಸುದೀಪ್ ಪುತ್ರಿ
Recommended Video
ಅಭಿನಯ ಚಕ್ರವರ್ತಿ ಕಿಚ್ಚು ಸುದೀಪ್ ಅಭಿನಯದ ಬಹುನಿರೀಕ್ಷೆಯ ಪೈಲ್ವಾನ್ ಸಿನಿಮಾ ಅದ್ದೂರಿಯಾಗಿ ತೆರೆಗೆ ಬಂದಿದೆ. ಸಿಕ್ಸ್ ಪ್ಯಾಕ್ ನಲ್ಲಿ ಕುಸ್ತಿ ಅಖಾಡಕ್ಕೆ ಇಳಿದಿರುವ ಸುದೀಪ್ ನನ್ನು ಅಭಿಮಾನಿಗಳು ಗ್ರ್ಯಾಂಡ್ ಆಗಿ ವೆಲ್ ಕಮ್ ಮಾಡಿದ್ದಾರೆ.
ವಿಶೇಷ ಅಂದ್ರೆ ಕಿಚ್ಚನನ್ನು ಚಿತ್ರಮಂದಿರಕ್ಕೆ ಸ್ವಾಗತ ಮಾಡಲು ಮಗಳು ಸಾನ್ವಿ ಕೂಡ ಆಗಮಿಸಿದ್ದರು. ಸುದೀಪ್ ಮತ್ತು ಮಗಳು ಸಾನ್ವಿ ಇಬ್ಬರು ಬೆಂಗಳೂರಿನ ಸಂತೋಷ್ ಚಿತ್ರಮಂದಿರದಲ್ಲಿ ಅಭಿಮಾನಿಗಳ ಜೊತೆ ಕುಳಿತು ಸಿನಿಮಾ ನೋಡಿದ್ದಾರೆ.
ಬೆಳಗ್ಗೆಯೆ ಸುದೀಪ್ ಮತ್ತು ಮಗಳು ಸಾನ್ವಿ ಚಿತ್ರಮಂದಿರಕ್ಕೆ ಎಂಟ್ರಿ ಕೊಟ್ಟಿದ್ದರು. ಮಗಳು ಸಾನ್ವಿ ಫಸ್ಟ್ ಡೇ ಫಸ್ಟ್ ಶೋ ಅಭಿಮಾನಿಗಳ ಜೊತೆ ಕುಳಿತು ನೋಡುವುದು ತೀರ ಅಪರೂಪ. ಆದ್ರೆ ಪೈಲ್ವಾನ್ ಸಿನಿಮಾವನ್ನು ವೀಕ್ಷಿಸಿ ಸಂತಸ ಪಟ್ಟಿದ್ದಾರೆ.

ಈ ಮೊದಲು ಪೈಲ್ವಾನ್ ಫಸ್ಟ್ ಲುಕ್ ರಿಲೀಸ್ ಆದಾಗ ಸಾನ್ವಿ ಅಚ್ಚರಿಪಟ್ಟಿದ್ದರಂತೆ. ಇದು ನಿಜಕ್ಕು ಅಪ್ಪನಾ ಎಂದು ಶಾಕ್ ಆಗಿ ಕೇಳಿದ್ದರಂತೆ. ಈ ಬಗ್ಗೆ ಸುದೀಪ್ ಇತ್ತೀಚಿಗೆ ನಡೆದ ಮಾಧ್ಯಮಗೋಷ್ಠಿಯಲ್ಲಿ ಹೇಳಿಕೊಂಡಿದ್ದರು. ಈಗ ಅಪ್ಪನ ಜೊತೆ ಕುಳಿತು ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಬಂದಿದ್ದಾರೆ.
ಪೈಲ್ವಾನ್ ಸಿನಿಮಾಗೆ ಎಲ್ಲಾ ಕಡೆಯಿಂದ ಉತ್ತಮವಾದ ಪ್ರತಿಕ್ರಿಯೆ ಬರುತ್ತಿದೆ. ಸುಮಾರು 3000ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಪೈಲ್ವಾನ್ ಅಬ್ಬರಿಸುತ್ತಿದೆ. ಐದು ಭಾಷೆಯಲ್ಲಿ ಪೈಲ್ವಾನ್ ತೆರೆಗೆ ಬರುತ್ತಿದೆ.


Click it and Unblock the Notifications