50 ದಿನಗಳನ್ನು ಪೂರೈಸಿ ಸೆಂಚುರಿಯತ್ತ ಮುನ್ನುಗ್ಗುತ್ತಿದೆ 'ಪೈಲ್ವಾನ್'

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ಯಶಸ್ವಿಯಾಗಿ 50 ದಿನಗಳನ್ನು ಪೂರೈಸಿ ಸೆಂಚುರಿಯತ್ತ ಮುನ್ನುಗ್ಗುತ್ತಿದೆ. ಪೈರಸಿ ಹಾವಳಿ ನಡುವೆಯು ಪೈಲ್ವಾನ್ 50 ದಿನಗಳನ್ನು ಪೂರೈಸಿ ಮುನ್ನುಗ್ಗುತ್ತಿರುವುದು ಚಿತ್ರತಂಡಕ್ಕೆ ಸಂತಸ ತಂದಿದೆ.

ಚಿತ್ರಕ್ಕಾಗಿ ಸುದೀಪ್ ದೇಹ ಹುರಿಗೊಳಿಸಿ 6 ಪ್ಯಾಕ್ ನಲ್ಲಿ ಕಾಣಿಸಿಕೊಂಡಿದ್ದರು. ಮೊದಲ ಬಾರಿಗೆ ಕಟ್ಟುಮಸ್ತಾದ ದೇಹ ಪ್ರದರ್ಶಿಸುತ್ತ ಕುಸ್ತಿ ಅಖಾಡಕ್ಕೆ ಇಳಿದಿದ್ದರು. ಕಿಚ್ಚನ ಈ ಶ್ರಮಕ್ಕೆ ಚಿತ್ರಪ್ರಿಯರು ಫುಲ್ ಮಾರ್ಕ್ಸ್ ನೀಡಿ ಚಿತ್ರವನ್ನು ಸೂಪರ್ ಹಿಟ್ ಮಾಡಿದ್ದರೆ. ಪೈರಸಿ ಪ್ರಿಂಟ್ ಎಲ್ಲಾ ಕಡೆ ಹರದಾಡುತ್ತಿದ್ದರು ಚಿತ್ರಪ್ರಿಯರು ಚಿತ್ರಮಂದಿರಕ್ಕೆ ಹೋಗಿ ಪೈಲ್ವಾನ್ ನೋಡಿ ಹರಿಸಿದ್ದಾರೆ.

50 ದಿನಗಳನ್ನು ಪೂರೈಸಿ ನೂರನೇ ದಿನದತ್ತ ಓಟ ಆರಂಭಿಸಿರುವ ಪೈಲ್ವಾನ್ ಬಗ್ಗೆ ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದಾರೆ. "ಪೈಲ್ವಾನ್ ಮತ್ತು ತಂಡ ಯಾವಾಗಲು ನನಗೆ ತುಂಬ ಹತ್ತಿರವಾಗಿರುತ್ತೆ. ಇದೊಂದು ತುಂಬಾ ವಿಶೇಷವಾದ ಮತ್ತು ಅದ್ಭುತವಾದ ಪಯಣ. ಪ್ರತಿಯೊಂದು ಕ್ಷಣವನ್ನು ನಾನು ಎಂಜಾಯ್ ಮಾಡಿದ್ದೀನಿ. ಈ ಪಯಣಕ್ಕೆ ಕಾರಣರಾದ ಕೃಷ್ಣ ಮತ್ತು ಸ್ವಪ್ನ ಕೃಷ್ಣ ಅವರಿಗೆ ಧನ್ಯವಾದಗಳು. ಈ ಯಶಸ್ಸಿಗೆ ಕಾರಣರಾದ ಸಹೋದರ ದೇವು ಅವರಿಗೆ ಮತ್ತು ಎಲ್ಲಾ ಸ್ನೇಹಿತರಿಗೆ ಧನ್ಯವಾದಗಳು" ಎಂದು ಹೇಳಿದ್ದಾರೆ.

Kannada Actor Sudeep Starrer Pailwaan Movie Completed 50 Days

ಇತ್ತೀಚಿಗಷ್ಟೆ ಪೈಲ್ವಾನ್ ತಂಡ ಚಿತ್ರಾಭಿಮಾನಿಗಳಿಗೆ ವಿಶೇಷ ಆಫರ್ ನೀಡಿತ್ತು. ಟಿಕೆಟ್ ಧರದಲ್ಲಿ ರಿಯಾಯಿತಿ ನೀಡುವ ಮೂಲಕ ಅಭಿಮಾನಿಗಳಿಗೆ ದೀಪಾವಳಿಯ ಗಿಫ್ಟ್ ನೀಡಿತ್ತು ಚಿತ್ರತಂಡ. ಸದ್ಯ 50 ದಿನಗಳನ್ನು ಪೂರೈಸಿರುವ ಪೈಲ್ವಾನ್ ಶತಕದ ಸಂಭ್ರಮ ಆಚರಿಸಲಿ ಎನ್ನುವುದು ಅಭಿಮಾನಿಗಳ ಆಶಯ.

More from Filmibeat

English summary
Kannada actor Sudeep starrer Pailwaan movie completed 50 days. This movie is directed by Krishna.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X