ಧ್ರುವ ಸರ್ಜಾ 'ಪೊಗರು' ಟ್ರೈಲರ್ ನೋಡಿ ಸುದೀಪ್ ಹೇಳಿದ್ದೇನು?

Recommended Video

Sudeep tweet about to Dhruva Sarja starrer Pogaru Trailer | FILMIBEAT KANNADA

ಸ್ಯಾಂಡಲ್ ವುಡ್ ನ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಪೊಗರು ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಟ್ರೈಲರ್ ರಿಲೀಸ್ ಆಗುತ್ತಿದ್ದಂತೆ ಲಕ್ಷಗಟ್ಟಲೆ ವೀಕ್ಷಣೆಯಾಗಿ ಟ್ರೆಂಡಿಂಗ್ ನಲ್ಲಿದೆ. ಪೊಗರು ಡೈಲಾಗ್ ಟ್ರೈಲರ್ ರಿಲೀಸ್ ಆಗಿ ಕೆಲವೆ ಗಂಟೆಯಲ್ಲಿ ಒಂದು ಮಿಲಿಯನ್ ವೀಕ್ಷಣೆಯಾಗಿದೆ.

ಧ್ರುವ ಸರ್ಜಾ ಪಂಚಿಂಗ್ ಡೈಲಾಗ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಸಾಕಷ್ಟು ಜನ ಪೊಗರು ಟ್ರೈಲರ್ ನೋಡಿ ಮೆಚ್ಚಿಕೊಂಡಿದ್ದಾರೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕೂಡ ಪೊಗರು ತುಂಬಿರೊ ಟ್ರೈಲರ್ ನೋಡಿ ಟ್ವೀಟ್ ಮಾಡಿದ್ದಾರೆ.

"ಕಿಲ್ಲರ್ ಧ್ರುವ ಸರ್ಜಾ ರಾಕ್ ಆನ್. ಡೈಲಾಗ್ ಟ್ರೈಲರ್ ಅದ್ಭುತವಾಗಿದೆ. ಒಳ್ಳೆಯದಾಗಲಿ ನಂದಕಿಶೋರ್ ಮತ್ತು ಇಡೀ ತಂಡಕ್ಕೆ" ಎಂದು ಹೇಳಿದ್ದಾರೆ. ಈ ಹಿಂದೆ ಕೂಡ ಸುದೀಪ್ ಧ್ರುವ ಸರ್ಜಾ ಕಾರು ಅಪಘಾತವಾದಾಗ ಧ್ರುವ ಸರ್ಜಾಗೆ ಟ್ವೀಟ್ ಮಾಡಿ ಆರೋಗ್ಯ ವಿಚಾರಿಸಿದ್ದರು. ಈಗ ಟ್ರೈಲರ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Kannada Actor Sudeep Tweet About To Dhruva Sarja Starrer Pogaru Trailer

ಪೊಗರು ಪಂಚಿಂಗ್ ಡೈಲಾಗ್ಸ್ ಕೇಳಿ ಧ್ರುವ ಅಭಿಮಾನಿಗಳು ಕುಣಿದು ಕುಪ್ಪಳಿಸುತ್ತಿದ್ದಾರೆ. ಚಿತ್ರದಲ್ಲಿ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ. "ಮಾತೃಭಾಷೆ ಬಿಟ್ಟವರು ಮೂರು ಬಿಟ್ಟರು" ಡೈಲಾಗ್ ಕೇಳಿ ನೆಟ್ಟಿಗರು ರಶ್ಮಿಕಾ ಮಂದಣ್ಣ ಕಾಲೆಳೆಯುತ್ತಿದ್ದಾರೆ. ಅದೇನೆ ಇದ್ದರು ಸದ್ಯ ರಿಲೀಸ್ ಆಗಿರುವ ಪೊಗರು ಟ್ರೈಲರ್ ಹವಾ ನೋಡುತ್ತಿದ್ದರೆ ಇನ್ನು ಸಿನಿಮಾ ಹೇಗಿರಲಿದೆ ಎನ್ನುವ ಕುತೂಹಲ ಹೆಚ್ಚಾಗಿದೆ.

More from Filmibeat

English summary
Kannada actor Sudeep tweet about to Dhruva Sarja starrer Pogaru trailer.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X