'ಗುರಿ ತೋರಿಸಿಕೊಟ್ಟ ಗುರುಗಳಿಗೆ' ಶುಭಾಶಯ ಹೇಳಿದ ಸ್ಯಾಂಡಲ್ ವುಡ್ ತಾರೆಯರು
ಸೆಪ್ಟಂಬರ್ 5 ಶಿಕ್ಷಕರ ದಿನಾಚರಣೆ. ಶಾಲಾ ದಿನಗಳಲ್ಲಿ ಪಾಠ ಹೇಳಿಕೊಟ್ಟು ಬದುಕು ರೂಪಿಸಿದ ಗುರುಗಳನ್ನು ಇಂದು ಎಲ್ಲರೂ ನೆನಪಿಸಿಕೊಳ್ಳುತ್ತಿದ್ದಾರೆ. ವಿದ್ಯ, ಬುದ್ದಿ ಕಲಿಸಿದ ಗುರುಗಳಿಗೆ ಇಂದು ಶುಭಾಶಯ ತಿಳಿಸುತ್ತಿದ್ದಾರೆ.
ಸ್ಯಾಂಡಲ್ ವುಡ್ ತಾರೆಯರು ಸಹ ನೆಚ್ಚಿನ ಗುರುಗಳಿಗೆ ಹಾಗೂ ವಿದ್ಯ ಬುದ್ದಿ ಕಲಿಸಿ ಗುರಿತೋರಿದ ಶಿಕ್ಷಕರನ್ನು ನೆನೆದು ಶುಭಾಶಯ ತಿಳಿಸುತ್ತಿದ್ದಾರೆ. ಕಿಚ್ಚ ಸುದೀಪ್, ಉಪೇಂದ್ರ, ಜಗ್ಗೇಶ್ ಸೇರಿದಂತೆ ಅನೇಕ ಸ್ಯಾಂಡಲ್ ವುಡ್ ತಾರೆಯರು ಗುರುಗಳನ್ನು ನೆನಪಿಸಿಕೊಂಡು ಶುಭಕೋರಿದ್ದಾರೆ.

ಗುರಿ ತೋರಿಸಿಕೊಟ್ಟ ಗುರುಗೆ ಸುದೀಪ್ ಶುಭಾಶಯ
ಶಿಕ್ಷಕರ ದಿನಾಚರಣೆಯ ದಿನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಎಲ್ಲಾ ಗುರುಗಳಿಗೆ ಶುಭಾಶಯ ತಿಳಿಸಿದ್ದಾರೆ. "ಪಾಠ ಹೇಳಿಕೊಟ್ಟು, ಬದುಕು ರೂಪಿಸಿ, ಗುರಿ ತೋರಿಸಿಕೊಟ್ಟ ಎಲ್ಲಾ ಗುರುಗಳಿಗೆ, ಶಿಕ್ಷಕರ ದಿನಾಚರಣೆಯ ಶುಭಾಶಯಗಳು" ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಶಿಕ್ಷಕರನ್ನು ನೆನೆದ ಉಪೇಂದ್ರ
"ನಿನ್ನ ಒಳಗಿನ ವಿದ್ಯಾರ್ಥಿ ಕಲಿಯಲು ಸಿದ್ದನಾದರೆ, ನಿನಗೆ ಎಲ್ಲವೂ ಎಲ್ಲರೂ ಶಿಕ್ಷಕರೇ" ಎಂದು ಶಿಕ್ಷಕರ ದಿನಾಚರಣೆಯ ಬಗ್ಗೆ ಹೇಳುತ್ತ ಜೀವನದ ಬಗ್ಗೆಯು ಒಂದು ಪೋಸ್ಟ್ ಮಾಡಿದ್ದಾರೆ. "ಜೀವನ ಎನ್ನುವುದು ಬಿರುಗಾಳಿಗೆ ಸಿಕ್ಕಿ ಹೋಗುವಂತಹದ್ದು ಅಲ್ಲ. ಮಳೆ ಹನಿಯಂತೆ ನಲಿಯುತ್ತ ಕಲಿಯೋದು" ಅಂತ ಪೋಸ್ಟ್ ಮಾಡಿದ್ದಾರೆ.

ಡಾ.ರಾಜ್ ಫೋಟೋ ಹಂಚಿಕೊಂಡ ಜಗ್ಗೇಶ್
ಶಿಕ್ಷಕರ ದಿನಾಚರಣೆಯ ದಿನ ನವರಸ ನಾಯಕ ಜಗ್ಗೇಶ್ ಡಾ.ರಾಜ್ ಕುಮಾರ್ ಫೋಟೋವನ್ನು ಹಂಚಿಕೊಂಡಿದ್ದಾರೆ. "ಗುರು ಬ್ರಹ್ಮ ಗುರು ವಿಷ್ಣು ಗುರುದೇವೋ ಮಹೇಶ್ವರ. ಶುಭದಿನ ಶುಭೋದಯ" ಎಂದು ಹೇಳಿದ್ದಾರೆ.

ಒಂದು ಅಕ್ಷರ ಕಲಿಸಿದಾದ ಗುರು
ನಿರ್ದೇಶಕ ಪವನ್ ಒಡೆಯರ್ ಸಹ ಸಾಮಾಜಿಕ ಜಾಲತಾಣದಲ್ಲಿ ಶಿಕ್ಷಕರ ದಿನಾಚರಣೆ ಶುಭಾಶಯ ತಿಳಿಸಿದ್ದಾರೆ. ಒಂದು ಅಕ್ಷರ ಕಲಿಸಿದಾತ ಗುರು ಎಂದು ಹೇಳಿರುವ ಪವನ್ "ಒಂದಕ್ಷರಮ್ ಕಲಿಸಿದಾತಂ ಗುರುಮ್. ನನ್ನ ಎಲ್ಲಾ ಗುರುಗಳಿಗೆ. ಹ್ಯಾಪಿ ಟೀಚರ್ಸ್ ಡೇ" ಎಂದು ಹೇಳಿದ್ದಾರೆ.


Click it and Unblock the Notifications











