'ಈ ಕಡೆ ತಕ್ಷಣ ಗಮನಿಸಿ' : ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಸುದೀಪ್ ಪತ್ನಿ ಆಕ್ರೋಶ
Recommended Video
ಕಿಚ್ಚ ಸುದೀಪ್ ಪತ್ನಿ ಪ್ರಿಯಾ ಸುದೀಪ್ ಸಾಮಾನ್ಯವಾಗಿ ಸಾಮಾಜಿ ಜಾಲತಾಣಗಳಲ್ಲಿ ಬೇಸರ ವ್ಯಕ್ತಪಡಿಸಿವುದು ತೀರ ಅಪರೂಪ. ಸಿನಿಮಾ ವಿಚಾರವಾಗಿ ಅಥವಾ ಒಂದಿಷ್ಟು ವಿಶೇಷ ಸನ್ನಿವೇಶಗಳನ್ನು ಮಾತ್ರ ಹಂಚಿಕೊಳ್ಳುತ್ತಿದ್ದ ಪ್ರಿಯಾ ಈಗ ದಿಢೀರನೆ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ರೊಚ್ಚಿಗೆದಿದ್ದಾರೆ.
ಸುದೀಪ್ ಪತ್ನಿ ಈ ಪರಿ ಕೋಪ ಮಾಡಿಕೊಂಡಿದ್ದಾರೆ ಅಂದ್ರೆ ಅಲ್ಲಿ ಏನೊ ದೊಡ್ಡ ಸಮಸ್ಯೆ ಆಗಿರುವುದಂತು ಪಕ್ಕ. ಹೌದು, ತೀರಾ ಹದಗೆಟ್ಟಿರುವ ರಸ್ತೆಯನ್ನು ದುರಸ್ಥಿ ಮಾಡದೆ ದಿವ್ಯ ನಿರ್ಲಕ್ಷ್ಯ ವಹಿಸಿದವರ ವಿರುದ್ಧ ಪ್ರಿಯಾ ಸಿಡಿದೆದ್ದಿದ್ದಾರೆ. ಬೆಂಗಳೂರಿನ ಹಲನಾಯಕನಹಳ್ಳಿ, ಕಸವನಹಳ್ಳಿ, ದೊಡ್ಡಕನ್ನೇಲಿ, ಜುನ್ನಸಾಂದ್ರ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿ ಹೋಗಿದೆ.
ಇತ್ತೀಚಿಗೆ ಸುರಿದ ಬಾರಿ ಮಳೆಯಿಂದ ಇದ್ದ ರಸ್ತೆಯು ಕೊಚ್ಚಿಹೋಗಿದೆ. ಆದ್ರೆ ಈ ಬಗ್ಗೆ ಅಧಿಕಾರಿಗಳು ಮಾತ್ರ ಗಮನ ಹರಿಸುತ್ತಿಲ್ಲ. ಇದೆ ರಸ್ತೆಯಲ್ಲಿ ಶಾಲಾ ಮಕ್ಕಳು, ದ್ವಿಚಕ್ರವಾಹನಗಳು ಓಡಾಡುತ್ತಿವೆ. ಜನಸಂದಣಿ ಇರುವ ಈ ಪ್ರದೇಶದಲ್ಲಿ ಜನರು ನಿತ್ಯ ನರಕ ಅನುಭವಿಸುತ್ತಿದ್ದರು ಅಧಿಕಾರಿಗಳು ಮಾತ್ರ ಈ ಕಡೆ ತಿರುಗಿ ನೋಡುತ್ತಿಲ್ಲ.

ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಕಂಡು ಪ್ರಿಯಾ ಸುದೀಪ್ ಕಿಡಿಕಾರಿದ್ದಾರೆ. "ಈ ಜನರ ಸಮಸ್ಯೆಗಳನ್ನು ನಾನೆ ಕಣ್ಣಾರೆ ಕಂಡಿದ್ದೀನಿ. ಅಧಿಕಾರಿಗಳಿಗೆ ಅವರ ಕರ್ತವ್ಯವನ್ನು ನೆನಪಿಸಬೇಕಾಗಿರುವುದು ವಿಷಾದಕರ. ದಯವಿಟ್ಟು ಈ ಕಡೆ ತಕ್ಷಣ ಗಮನಿಸಿ" ಎಂದು ಟ್ವೀಟ್ ಮಾಡುವ ಮೂಲಕ ಸಂಬಂಧಪಟ್ಟ ಅಧಿಕಾರಿಗಳಿಗೆ ಅವರ ಕರ್ತವ್ಯವನ್ನು ನೆನಪಿಸಿಕೊಟ್ಟಿದ್ದಾರೆ.


Click it and Unblock the Notifications











