ಒಂದೇ ಸಾಲಿನಲ್ಲಿ ಹೃದಯದ ಪ್ರೀತಿ ಹೇಳಿದ ಕಿಚ್ಚ
ಸೂಪರ್ ಸ್ಟಾರ್ ರಜನಿಕಾಂತ್ ಕಂಡರೆ ಎಲ್ಲರಿಗೂ ಪ್ರೀತಿ. ಇಂದು ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು ಹಬ್ಬದ ರೀತಿ ಆಚರಣೆ ಮಾಡುತ್ತಿದ್ದಾರೆ. ಕಿಚ್ಚ ಸುದೀಪ್ ಕೂಡ ರಜನಿಗೆ ತಮ್ಮ ಶುಭಾಶಯ ತಿಳಿಸಿದ್ದಾರೆ.
ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಒಂದೇ ಒಂದು ಸಾಲಿನಲ್ಲಿ ಸುದೀಪ್ ತಮ್ಮ ಪ್ರೀತಿಯನ್ನು ತಿಳಿಸಿದ್ದಾರೆ. ''ನೀವು ನಮಗೆ ಇನ್ನಷ್ಟು ವರ್ಷ ಬೇಕು'' ಎಂದು ಸುದೀಪ್ ಬರೆದುಕೊಂಡಿದ್ದಾರೆ.

''ನೀವು ಆರೋಗ್ಯವಾಗಿ ಹಾಗೂ ಖುಷಿಯಾಗಿರಿ. ಈ ದಿನ ಒಂದೇ ಒಂದು ಸಾಲನ್ನ ಹೇಳುತ್ತಿದ್ದೇನೆ. ಎಂದು ಒಂದೇ ಸಾಲಿನಲ್ಲಿ ರಜನಿಗೆ ಕಿಚ್ಚ ವಿಶ್ ಮಾಡಿದ್ದಾರೆ.
ಸುದೀಪ್ ಕಾಲಿವುಡ್ ನಲ್ಲಿ ಸಿನಿಮಾ ಮಾಡಿದ್ದರೂ ರಜನಿಕಾಂತ್ ಅವರ ಜೊತೆಗೆ ತೆರೆ ಹಂಚಿಕೊಂಡಿಲ್ಲ. 'ಲಿಂಗ' ಸಿನಿಮಾದಲ್ಲಿ ಸುದೀಪ್ ನಟಿಸುತ್ತಾರೆ ಎಂಬ ಸುದ್ದಿ ಇತ್ತಾದರೂ, ಬಿಡುಗಡೆ ನಂತರ ಅವರು ಅದರಲ್ಲಿ ಇರಲಿಲ್ಲ.
More from Filmibeat
English summary
Kannada actor sudeep wishes for Superstar Rajinikanth's birthday. Rajinikanth turns 68 years today.


Click it and Unblock the Notifications











