ವಾರ್ನಿಂಗ್ ಮಾಡೋರಿಗೆ ಪೈಲ್ವಾನ್ ಕಿಚ್ಚನ ಖಡಕ್ ಮಾತು
Recommended Video
ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ವಾರ್ ತಾರಕ್ಕೇರಿದೆ. ಕಿಚ್ಚ ಮತ್ತು ದರ್ಶನ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಕಿತ್ತಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇಬ್ಬರು ನಟರ ಫ್ಯಾನ್ಸ್ ಪೇಜ್ ಗಳನ್ನು ನೋಡಿದ್ರೆ ನಿಜಕ್ಕು ಶಾಕ್ ಆಗುತ್ತೆ. ಇಬ್ಬರು ಸ್ಟಾರ್ ನಟರ ಅಭಿಮಾನಿಗಳು ಒಬ್ಬರಿಗೊಬ್ಬರು ಬೈದಾಡಿಕೊಳ್ಳುತ್ತಿದ್ದಾರೆ.
ಫ್ಯಾನ್ಸ್ ಮಾತ್ರ ಕಿತ್ತಾಡುತ್ತಿದ್ದ ವಾರ್ ಗೆ ಈಗ ಸ್ಟಾರ್ ನಟರೆ ಎಂಟ್ರಿ ಕೊಟ್ಟಿದ್ದಾರೆ. ಹೌದು, ಮೊದಲು ದರ್ಶನ್ ಅನ್ನದಾತರನ್ನು, ಸೆಲಬ್ರಿಟಿಗಳನ್ನು ಕೆಣಕಬೇಡಿ ಎಂದು ಟ್ವೀಟ್ ಮಾಡುವ ಮೂಲಕ ಅಭಿಮಾನಿಗಳ ಬೆನ್ನಿಗೆ ನಿಂತಿದ್ದಾರೆ.
ಇದರ ಬೆನ್ನಲ್ಲೆ ಈಗ ಕಿಚ್ಚ ಸುದೀಪ್ ಕೂಡ ಟ್ವೀಟ್ ಮಾಡಿದ್ದಾರೆ. ದೀರ್ಘವಾದ ಪತ್ರ ಬರೆದಿರುವ ಕಿಚ್ಚ "ಕೆಲವು ಮಾತುಗಳನ್ನು ಕೇಳಿಸಿಕೊಳ್ಳದಿರುವುದೇ ಉತ್ತಮ, ನಾನು ಏನು ಎನ್ನುವುದನ್ನು ಬೇರೆ ಯಾರಿಗೊ ಸಾಭೀತು ಮಾಡಿ ತೋರಿಸುವ ಅವಶ್ಯಕತೆ ಇಲ್ಲ" ಎಂದು ಹೇಳಿದ್ದಾರೆ.

"ಯಾವಾಗಲು ಸತ್ಯಕ್ಕೆ ಮೇಲುಗೈ. ಪೈರಸಿ ವಿಚಾರದಲ್ಲಿ ಯಾರು ಕೂಡ ನಾನು ಆಗಲಿ ಅಥವಾ ಪ್ರೊಡಕ್ಷನ್ ಟೀಂ ಆಗಲಿ ಯಾರೊಬ್ಬರು ಯಾವ ನಟನ ಮೇಲು ಬೆಟ್ಟು ಮಾಡಿ ತೋರಿಸಿಲ್ಲ. ಆದ್ರೆ ಅನೇಕರು ಪೈರಸಿ ಲಿಂಕ್ ಅನ್ನು ಅತೀ ವೇಗವಾಗಿ ಶೇರ್ ಮಾಡಿದ್ದಾರೆ. ಆದ್ರೆ ಈಗ ಸೈಬರ್ ಕ್ರೈಮ್ ಗೆ ದೂರು ನೀಡಲಾಗಿದೆ. ಅವರು ನೋಡಿಕೊಳ್ಳುತ್ತಾರೆ" ಎಂದು ಹೇಳಿದ್ದಾರೆ.
"ನಾನು ಚಿತ್ರರಂಗದಿಂದ ಪಡೆದ ಬೆಂಬಲ ಮತ್ತು ಸಹದ್ಯೋಗಿಗಳು ಒಳ್ಳೆತನದ ಬಗ್ಗೆ ಮಾತನಾಡುತ್ತಾರೆ. ನನ್ನ ಮೇಲೆ ಅವರು ಇಟ್ಟಿರುವ ಪ್ರೀತಿ, ಅವರೊಂದಿಗಿನ ನನ್ನ ಸಂಬಂಧ, ಎಲ್ಲಾ ಕಡೆಯಿಂದ ಬಂದ ಒಳ್ಳೆಯ ಅಂಶಗಳು ಮತ್ತು ಅವರು ತೋರುವ ಸಹಕಾರ ನನಗೆ ಹೆಚ್ಚು ಆಶೀರ್ವಾದ ನೀಡುತ್ತೆ. ಈ ಒಳ್ಳೆಯ ಜನರು ನನಗೆ ತುಂಬಾ ಪ್ರೀತಿ ತೋರುತ್ತಾರೆ. ಹೀಗಿರುವಾಗ ನಾನು ಏನು ಎನ್ನುವುದನ್ನು ನಿಜವಾಗಿಯೂ ಬೇರೆಯವರಿಗೆ ಸಾಭೀತು ಮಾಡುವ ಅವಶ್ಯಕತೆ ಇದೆಯೆ?" ಎಂದು ಕೇಳಿದ್ದಾರೆ.
"ಹೀಗೆ ಉದ್ದವಾದ ಪತ್ರಬರೆದಿರುವ ಸುದೀಪ್ ಕೊನೆಯದಾಗಿ ಜಗತ್ತನ್ನು ಗೆದ್ದ ಅಲೆಗ್ಸಾಂಡರ್ ಕೂಡ ಬರಿಗೈಯಲ್ಲಿ ಹೋದರು. ನಾವು ಈಜಗತ್ತಿಗೆ ನೆನಪುಗಳನ್ನು ಮಾತ್ರ ಬಿಟ್ಟು ಹೋಗೋಣ. ಈ ನೆನಪುಗಳು ಒಳ್ಳೆಯದಾಗಿರಬೇಕು. ಸುಂದರ ನೆನಪುಗಳು ಯಾವಾಗಲು ಜೀವಂತ ವಾಗಿರುತ್ತವೆ" ಎಂದು ಹೇಳಿದ್ದಾರೆ


Click it and Unblock the Notifications











