ಖ್ಯಾತ ಖಳ ನಟ ಸುಧೀರ್ ಅಗಲಿ ಇಂದಿಗೆ 20 ವರ್ಷ
ಕನ್ನಡ ಚಿತ್ರರಂಗದ ಖ್ಯಾತ ಖಳನಟ ಸುಧೀರ್ ಅಭಿಮಾನಿಗಳನ್ನು ಬಿಟ್ಟು ಹೋಗಿ ಇಂದಿಗೆ 20 ವರ್ಷ ಕಳೆದಿದೆ. ಜೂನ್ 13, 1999 ರಲ್ಲಿ ಸುಧೀರ್ ಇಹಲೋಕ ತ್ಯಜಿಸಿದ್ದರು.
ಅಪ್ಪ ಅಗಲಿದ ದಿನ ತಮ್ಮ ನೋವನ್ನು ನಿರ್ದೇಶಕ ತರುಣ್ ಸುಧೀರ್ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. "ನೀನು ಇರುವ ಧೈರ್ಯದಲ್ಲಿ ಯಾರೊಂದಿಗೂ ನಾ ಸೋಲಲ್ಲ.. ನಿನ್ನ ಪ್ರೀತಿ ಮುಂದೆ ಏನಿಲ್ಲ.. ಅಪ್ಪ I love u pa..." ಎಂದು 'ಚೌಕ' ಚಿತ್ರದ ಹಾಡಿನ ಮೂಲಕ ಅವರಿಗೆ ನಮಿಸಿದ್ದಾರೆ.
''ಅಪ್ಪ ನೀನು ನಮ್ಮನ್ನು ಬಿಟ್ಟು ಹೋಗಿ ಇಂದಿಗೆ 20 ವರ್ಷ. ನಾನು ಇಂದು ಏನೇ ಆಗಿದ್ದರು ಅದು ನಿನ್ನ ಆಶೀರ್ವಾದದಿಂದ ಮಾತ್ರ.'' ಎಂದು ತನ್ನ ಸಾಧನೆಯನ್ನು ತಂದೆಗೆ ಅರ್ಪಿಸಿದ್ದಾರೆ.

ಸುಧೀರ್ 200ಕ್ಕೂ ಹೆಚ್ಚು ಸಿನಿಮಾದಲ್ಲಿ ನಟಿಸಿ ಕನ್ನಡದ ಜನಪ್ರಿಯ ಖಳನಟರಾಗಿದ್ದರು. ಅವರ ಇಬ್ಬರು ಪುತ್ರರು ಇಂದು ಕನ್ನಡ ಚಿತ್ರರಂಗದ ಸ್ಟಾರ್ ಡೈರೆಕ್ಟರ್ಸ್ ಆಗಿದ್ದಾರೆ. ತರುಣ್ ಸುಧೀರ್ 'ಚೌಕ' ಸಿನಿಮಾದ ಬಳಿಕ 'ರಾಬರ್ಟ್' ಸಿನಿಮಾ ಶುರು ಮಾಡಿದ್ದಾರೆ.

ಮತ್ತೊಬ್ಬ ಮಗ ನಂದ ಕಿಶೋರ್ ಈಗಾಗಲೇ ಆರು ಚಿತ್ರದ ನಿರ್ದೇಶನ ಮಾಡಿ ಈಗ ಏಳನೇ ಸಿನಿಮಾದ ತಯಾರಿಯಲ್ಲಿ ಇದ್ದಾರೆ. 'ಪೊಗರು' ಅವರ ಮುಂದಿನ ಸಿನಿಮಾವಾಗಿದೆ.


Click it and Unblock the Notifications











