ಪೈರಸಿ ವೆಬ್ ಸೈಟ್ ಕುರಿತು ಆಘಾತಕಾರಿ ವಿಷಯ ಬಹಿರಂಗಪಡಿಸಿದ ಜಗ್ಗೇಶ್

ಸಿನಿಮಾ ಇಂಡಸ್ಟ್ರಿ ಅಂದ್ರೆ ಅದೊಂದು ಕಲರ್ ಫುಲ್ ಅಂತಾರೆ. ಆದರೆ ಈ ಕಲರ್ ಫುಲ್ ಇಂಡಸ್ಟ್ರಿಯಲ್ಲಿ ಯಾರಿಗೂ ಗೊತ್ತಿಲ್ಲದ ಅನೇಕ ವಿಚಾರಗಳು ನಡೆಯುತ್ತೆ. ಮೇಲ್ನೋಟಕ್ಕೆ ಸ್ಟಾರ್ ವಾರ್, ಫ್ಯಾನ್ಸ್ ವಾರ್, ಸಿನಿಮಾಗಳ ವಿವಾದ, ವೈಯಕ್ತಿಕ ವಿವಾದಗಳು ಹೆಚ್ಚು. ಆದರೆ ಇದೆಲ್ಲವನ್ನ ಮೀರಿದ ವಿಷಯದ ಬಗ್ಗೆ ಈಗ ಚರ್ಚೆಯಾಗುತ್ತಿದೆ.

ಅದು ಪೈರಸಿ. ಚಿತ್ರಜಗತ್ತಿನಲ್ಲಿ ಪೈರಸಿ ಎಂಬುದು ಈ ಹಿಂದಿನಿಂದಲೂ ಇದೆ. ಹಣಕ್ಕಾಗಿ ಯಾರೋ ಕೆಲವು ಕಿಡಿಗೇಡಿಗಳು ಕದ್ದುಮುಚ್ಚಿ ಚಿತ್ರಮಂದಿರದಲ್ಲಿ ಕೂತು ಪೈರಸಿ ಮಾಡುತ್ತಿದ್ದರು. ಈಗ, ಇದೊಂದು ಉದ್ಯಮವಾಗಿ ಬೆಳೆದು ನಿಂತಿದೆ. ತಂತ್ರಜ್ಞಾನವನ್ನ ಬಳಸಿಕೊಂಡು ಮೊದಲ ಶೋ ರಿಲೀಸ್ ಆಗುತ್ತಿದ್ದಂತೆ ಅಥವಾ ಸೆನ್ಸಾರ್ ಕಾಪಿಯನ್ನೆ ಲೀಕ್ ಮಾಡುತ್ತಿದ್ದಾರೆ.

ಉದ್ದೇಶಪೂರ್ವಕವಾಗಿ, ಇದೇ ಚಿತ್ರವನ್ನ, ಈ ನಟನ ಚಿತ್ರವನ್ನ ಪೈರಸಿ ಮಾಡುವುದು, ಆ ನಟನ ಸ್ಟಾರ್ ಗಿರಿ ಬೀಳಿಸುವುದು ಎಲ್ಲವೂ ಬಿಸಿನೆಸ್ ರೀತಿ ನಡೆಯುತ್ತಿದೆ ಎಂದು ಹಿರಿಯ ನಟ ಜಗ್ಗೇಶ್ ಆರೋಪಿಸಿದ್ದಾರೆ. ಮುಂದೆ ಓದಿ....

ಹಫ್ತಾ ಕೊಟ್ರೆ ಸ್ಟಾರ್ ಗಿರಿ ತಪ್ಪಿಸುತ್ತಾರೆ

ಹಫ್ತಾ ಕೊಟ್ರೆ ಸ್ಟಾರ್ ಗಿರಿ ತಪ್ಪಿಸುತ್ತಾರೆ

ವಿಶ್ವ ಸಿನಿಮಾರಂಗಕ್ಕೆ ಈ ಪೈರಸಿ ವೆಬ್ ಸೈಟ್ ತಲೆನೋವಾಗಿದೆ. ದುಡ್ಡಿಗಾಗಿ ಯಾರ ಸ್ಟಾರ್ ಗಿರಿಯನ್ನ ಬೇಕಾದರೂ ತಪ್ಪಿಸುತ್ತಾರೆ ಎಂದು ಹಿರಿಯ ನಟ ಜಗ್ಗೇಶ್ ಕಿಡಿಕಾರಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಜಗ್ಗಣ್ಣ ''ಒಬ್ಬ ಸಾಮಾನ್ಯ ತಮಿಳುನಾಡಿನ ಯುವಕ ಸಣ್ಣದಾಗಿ ಈಕೆಲಸ ಶುರು ಮಾಡಿ ಮಲೇಶಿಯಾಗೆ ಶಿಫ್ಟ್ ಆಗಿ ಇಂದು ವಿಶ್ವಸಿನಿಮಾರಂಗಕ್ಕೆ ತಲೆ ನೋವಾಗಿದ್ದಾನೆ! ದೊಡ್ಡಸ್ಟಾರ್ ಗಿರಿ ತಪ್ಪಿಸಲು ಇವನಿಗೆ ಹಫ್ತಾ ನೀಡಿದರೆ ಸಾಕು ಮಾಡಿ ಮುಗಿಸುತ್ತಾನೆ'' ಎಂದಿದ್ದಾರೆ.

ಲಂಚಕೊಟ್ಟ ಕಾಲಿಗೆ ಬೀಳುತ್ತಾರೆ

ಲಂಚಕೊಟ್ಟ ಕಾಲಿಗೆ ಬೀಳುತ್ತಾರೆ

''ಇವನನ್ನು ಸೇಡಿಗೆ ಬಳಸಿಕೊಂಡವರೆ ಇವನಿಂದ ಸಂಕಷ್ಟಕ್ಕೆ ಈಡಾಗಿ ಇವನಿಗೆ ಲಂಚ ಕೊಟ್ಟು ತೊಂದರೆ ಕೊಡದಂತೆ ಕಾಲಿಗೆ ಬೀಳುತ್ತಾರೆ'' ಎಂದು ಜಗ್ಗೇಶ್ ಬಹಿರಂಗಪಡಿಸಿದ್ದಾರೆ. ಸಿನಿಮಾ ಇಂಡಸ್ಟ್ರಿಯನ್ನ ಈ ಮಟ್ಟಕ್ಕೆ ಇವರು ಕಾಡುತ್ತಿದ್ದಾರಾ ಎನ್ನುವುದು ನಿಜಕ್ಕೂ ಆಘಾತಕಾರಿ ವಿಷಯ.

ಈ ತರದ ವ್ಯವಹಾರವೂ ಇದೆಯೇ?

ಈ ತರದ ವ್ಯವಹಾರವೂ ಇದೆಯೇ?

ದುಡ್ಡು ಕೊಟ್ಟು ಸ್ಟಾರ್ ಗಿರಿ ತಪ್ಪಿಸುವುದು, ನಮ್ಮ ಸಹವಾಸಕ್ಕೆ ಬರಬೇಡಿ ಎಂದು ಕೇಳಿಕೊಳ್ಳುವಷ್ಟು ಮಟ್ಟಕ್ಕೆ ವ್ಯವಹಾರ ಇದೆಯೇ ಎಂಬ ವಿಷಯ ಸಾಮಾನ್ಯರಿಗೆ ನಂಬಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಅಭಿಮಾನಿಗಳು ಕೂಡ ಅಚ್ಚರಿಯಾಗಿದ್ದಾರೆ. ''ಈ ತರದ ವ್ಯವಹಾರವೂ ಇದೆಯೇ. ಅನ್ಯಾಯ. ಚಿತ್ರರಂಗ ಒಗ್ಗಾಟ್ಟಾಗಿ ಇದನ್ನು ನಿಲ್ಲಿಸಬೇಕು. ಎಷ್ಟು ಜನರ ಕಷ್ಟದ ದುಡಿಮೆಗೆ ಕಲ್ಲು ಹಾಕುತ್ತಿದೆ. ಈ piracy ಭೂತ'' ಎಂದು ಶಾಪ ಹಾಕುತ್ತಿದ್ದಾರೆ ನೆಟ್ಟಿಗರು.

ಯಾಕೆ ಯಾರೊಬ್ಬರು ಪ್ರತಿಭಟಿಸುತ್ತಿಲ್ಲ

ಯಾಕೆ ಯಾರೊಬ್ಬರು ಪ್ರತಿಭಟಿಸುತ್ತಿಲ್ಲ

ಜಗ್ಗೇಶ್ ಅವರ ಈ ಮಾತು ಕೇಳಿದ್ಮೇಲು ಅನಿಸುತ್ತಿದೆ, ಯಾಕೆ ಯಾರೊಬ್ಬರು ಈ ಪೈರಸಿ ವೆಬ್ ಸೈಟ್ ವಿರುದ್ಧ ಧ್ವನಿ ಎತ್ತುತ್ತಿಲ್ಲ ಎಂದು. ರಜನಿಕಾಂತ್, ಕಮಲ್ ಹಾಸನ್ ಅಂತಹ ಗ್ಲೋಬರ್ ಸ್ಟಾರ್ ನಟರ ಚಿತ್ರಗಳು ಬಿಡುಗಡೆಯಾದಾಗಲೂ ಓಪನ್ ಚಾಲೆಂಜ್ ಹಾಕಿ ಮೊದಲ ಶೋ ಮುಗಿದ ತಕ್ಷಣ ಪೈರಸಿ ಮಾಡಿರುವ ಉದಾಹರಣೆಗಳು ಇದೆ.

More from Filmibeat

English summary
Kannada actor Jaggesh revealed some of the inside facts about piracy website.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X