»   » 'ಮಾಸ್ತಿಗುಡಿ' ವಿಲನ್ ಉದಯ್ ಬದುಕಿದ್ದರೇ 29ನೇ ಹುಟ್ಟುಹಬ್ಬ

'ಮಾಸ್ತಿಗುಡಿ' ವಿಲನ್ ಉದಯ್ ಬದುಕಿದ್ದರೇ 29ನೇ ಹುಟ್ಟುಹಬ್ಬ

Posted By:
Subscribe to Filmibeat Kannada

'ಮಾಸ್ತಿಗುಡಿ' ಚಿತ್ರದ ದುರಂತದಲ್ಲಿ ಸಾವುಗೀಡಾಗಿದ್ದ ಉದಯ್ ಗೆ ಇಂದು (ಜನವರಿ 16) ಹುಟ್ಟುಹಬ್ಬ. ಕನ್ನಡದ ಉದಯೋನ್ಮುಖ ಖಳನಟನಾಗಿದ್ದ ಉದಯ್ ಇಂದು ನಮ್ಮೊಂದಿಗೆ ಇದ್ದಿದ್ದರೇ, 29ನೇ ಬರ್ತ್ ಡೇಯನ್ನ ಆಚರಣೆ ಮಾಡಿಕೊಳ್ಳುತ್ತಿದ್ದರು.

ಆದ್ರೆ, ವಿಧಿಯಾಟಕ್ಕೆ ಬಲಿಯಾದ ಯುವ ಪ್ರತಿಭೆ ಉದಯ್, 'ಮಾಸ್ತಿಗುಡಿ' ಚಿತ್ರದ ಚಿತ್ರೀಕರಣದ ವೇಳೆ ದುರಂತ ಸಾವುಗೀಡಾಗಿ ಇಹಲೋಕವನ್ನ ತ್ಯಜಿಸಿದ್ದರು.['ಮಾಸ್ತಿ ಗುಡಿ' ಖಳನಟರ ದುರಂತ ಸಾವು: ದುರ್ಘಟನೆಯ ಸಂಪೂರ್ಣ ವಿವರ]

Kannada Actor Uday 39th Birthday

ಉದಯ್ ತುಂಬಾ ಕಷ್ಟಪಟ್ಟು ಚಿತ್ರರಂಗ ಪ್ರವೇಶ ಮಾಡಿದ್ದರು. ಆರಂಭದಲ್ಲಿ ಕೇವಲ ಫೈಟರ್ ಆಗಿದ್ದ ಉದಯ್, ನಂತರ ಚಿಕ್ಕ ಚಿಕ್ಕ ಪಾತ್ರಗಳನ್ನ ಮಾಡುತ್ತಿದ್ದರು. ಆಗ ಉದಯ್ ಅವರ ಪ್ರತಿಭೆಯನ್ನ ಗುರುತಿಸಿದ ದುನಿಯಾ ವಿಜಯ್ 'ಜಯಮ್ಮನ ಮಗ' ಚಿತ್ರದಲ್ಲಿ ಮುಖ್ಯ ಖಳನಾಟನಾಗಿ ಅವಕಾಶ ನೀಡಿದರು. ಆಗಲೇ ನೋಡಿ ಉದಯ್ ಜೀವನದಲ್ಲಿ ಗೆಲುವಿನ ಉದಯವಾಗಿದ್ದು.[ನಿಮಗೆಲ್ಲಾ ಗೊತ್ತಿಲ್ಲದ 'ಮಾಸ್ತಿ ಗುಡಿ' ವಿಲನ್ ಉದಯ್ ಅಸಲಿ ಕಹಾನಿ]

ಉದಯ್ ಇದುವರೆಗೂ, ದುನಿಯಾ ವಿಜಯ್ ರವರ 'ಯುಗ', ದರ್ಶನ್ ಅಭಿನಯದ 'ಇಂದ್ರ', ಪುನೀತ್ ಅಭಿನಯದ 'ವಂಶಿ', ಶಿವಣ್ಣನ 'ಮಾದೇಶ' ಸೇರಿದಂತೆ ಹಲವು ಸಿನಿಮಾಗಳಲ್ಲಿ ಸ್ಟಂಟ್ ಮ್ಯಾನ್ ಆಗಿ ಕೆಲಸ ಮಾಡಿದ್ದಾರೆ. 'ಜಯಮ್ಮನ ಮಗ', 'ರಾಟೇ', 'ಡಾರ್ಲಿಂಗ್', 'ಅಂಬರೀಶ್', 'ಐರಾವತ', 'ವಿಜಯಾಧಿತ್ಯ', 'ಡೇಂಜರ್ ಝೂನ್', 'ದೊಡ್ಮನೆ ಹುಡ್ಗ' ದಂತಹ ದೊಡ್ಡ ಚಿತ್ರಗಳಲ್ಲಿ ಉದಯ್ ಖಳನಾಯಕನಾಗಿ ತಮ್ಮ ಖದರ್ ತೋರಿಸಿದ್ದಾರೆ.

Kannada Actor Uday 39th Birthday

ಉದಯ್ ಸಾಯುವುದಕ್ಕೂ ಮುಂಚೆ, ದುನಿಯಾ ವಿಜಯ್ ಅಭಿನಯದ 'ಮಾಸ್ತಿಗುಡಿ' ಚಿತ್ರದಲ್ಲಿ ಖಳನಟನಾಗಿ ಅಭಿನಯಿಸುತ್ತಿದ್ದರು. ಈ ಚಿತ್ರಕ್ಕಾಗಿ ತಿಂಗಳುಗಳ ಕಾಲ ತಯಾರಿ ನಡೆಸಿದ್ದರು. ಆದ್ರೆ, ದುರಾದೃಷ್ಟವಶಾತ್ ನವೆಂಬರ್ 8 ರಂದು ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣ ವೇಳೆ ಚಾಪರ್ ನಿಂದ ಕೆರೆಗೆ ಹಾರಿ ಉದಯ್ ಹಾಗೂ ಅನಿಲ್ ಇಬ್ಬರು ನೀರು ಪಾಲಾಗಿದ್ದರು.['ಮಾಸ್ತಿ ಗುಡಿ' ಶೂಟಿಂಗ್ ವೇಳೆ ಕೆರೆಗೆ ಹಾರಿದ ಖಳನಾಯಕ ಅನಿಲ್, ಉದಯ್ ಸಾವು]

English summary
Today ( January 16th ), It is the 29th birth Anniversary of the Late Kannada Actor Uday. Who Died in 'MaasthiGudi' Movie Accident. he Was Born on January 16th, 1978, in Bangalore.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada