»   » ಚಿತ್ರಗಳು: ಅಮೆರಿಕದಲ್ಲಿ ಬೇಸಿಗೆ ರಜೆ ಎಂಜಾಯ್ ಮಾಡುತ್ತಿರುವ ಉಪ್ಪಿ ಕುಟುಂಬ

ಚಿತ್ರಗಳು: ಅಮೆರಿಕದಲ್ಲಿ ಬೇಸಿಗೆ ರಜೆ ಎಂಜಾಯ್ ಮಾಡುತ್ತಿರುವ ಉಪ್ಪಿ ಕುಟುಂಬ

Posted By:
Subscribe to Filmibeat Kannada

ಈಗಂತೂ ಮಕ್ಕಳಿಗೆ ಬೇಸಿಗೆ ರಜೆಯ ಸಂಭ್ರಮ. ಮಕ್ಕಳಿಗೆ ಶಾಲೆಗೆ ರಜೆ ಇರೋದ್ರಿಂತ ಫ್ಯಾಮಿಲಿಗೂ ಒಂಥರಾ ರಜಾ ಸಮಯ ಆದಂತಾಗಿದೆ. ಈ ಸಂದರ್ಭದಲ್ಲಿ ಎಲ್ಲರೂ ತಮ್ಮ ತಮ್ಮ ಮಕ್ಕಳನ್ನು ಕರೆದುಕೊಂಡು ಟ್ರಿಪ್ ಹೊರಟು ಬಿಡುತ್ತಾರೆ.

ಇದಕ್ಕೆ ಸ್ಯಾಂಡಲ್ ವುಡ್ ನ ರಿಯಲ್ ಸ್ಟಾರ್ ಉಪೇಂದ್ರ ಅವರೂ ಹೊರತಾಗಿಲ್ಲ. ಹೌದು ಉಪೇಂದ್ರ ಅವರು ತಮ್ಮ ಶೂಟಿಂಗ್ ಗೆ ಬ್ರೇಕ್ ಹಾಕಿ, ಬಿಡುವು ಮಾಡಿಕೊಂಡು ಇಡೀ ಕುಟುಂಬ ಸಮೇತ ಅಮೇರಿಕಕ್ಕೆ ಹಾರಿದ್ದಾರೆ.[ಫೋಟೋ ಗ್ಯಾಲರಿ: ರಿಯಲ್ ಉಪ್ಪಿ 'ಕಲ್ಪನಾ 2' ಶೂಟಿಂಗ್ ಸ್ಟಿಲ್ಸ್]

ಮಕ್ಕಳ ಬೇಸಿಗೆ ರಜೆಯನ್ನು ವ್ಯರ್ಥ ಮಾಡದೆ ರಿಯಲ್ ಉಪ್ಪಿ ಮತ್ತು ಪತ್ನಿ ಪ್ರಿಯಾಂಕ ಉಪೇಂದ್ರ ಅವರು ಅಮೆರಿಕದಲ್ಲಿ ಸಖತ್ತಾಗಿ ಎಂಜಾಯ್ ಮಾಡುತ್ತಿದ್ದಾರೆ.

ಅಂದಹಾಗೆ ರಿಯಲ್ ಸ್ಟಾರ್ ಉಪೇಂದ್ರ ಅವರು 'ಮುಕುಂದ ಮುರಾರಿ' ಮತ್ತು 'ಕಲ್ಪನಾ 2' ಚಿತ್ರಗಳ ಶೂಟಿಂಗ್ ನಿಂದ ಬಿಡುವು ಮಾಡಿಕೊಂಡು ಫ್ಯಾಮಿಲಿಗಾಗಿ ತಮ್ಮ ಸಮಯವನ್ನು ವಿನಿಯೋಗಿಸುತ್ತಿದ್ದಾರೆ.[ಚಿತ್ರಗಳಲ್ಲಿ: 'ವಂಡರ್ ಲಾ'ದಲ್ಲಿ ರಿಯಲ್ ಉಪ್ಪಿ ಮೋಜು-ಮಸ್ತಿ]

ಚಿತ್ರದ ಶೂಟಿಂಗ್ ನ ವಿಚಾರದಲ್ಲಿ ತುಂಬಾ ಡೆಡಿಕೇಟೆಡ್ ಆಗಿರುವ ಉಪ್ಪಿ ಅವರು ಹಾಗೆ ತಮ್ಮ ಫ್ಯಾಮಿಲಿಗೂ ತುಂಬಾನೇ ಮಹತ್ವ ಕೊಡುತ್ತಾರೆ. ಅನ್ನೋದಕ್ಕೆ ಇದು ಉತ್ತಮ ನಿದರ್ಶನ.[ರಿಯಲ್ ಉಪೇಂದ್ರರ ಮನೆಯಲ್ಲಿ ಕಲರ್ ಫುಲ್ ಹೋಳಿ ಸಂಭ್ರಮ]

ಸದ್ಯಕ್ಕೆ ಬೆಂಗಳೂರಿನ ಈ ಬಿರು ಬಿಸಿಲಿನಿಂದ ತಪ್ಪಿಸಿಕೊಂಡು ಅಮೆರಿಕದ ಸಿಟಿಯಲ್ಲಿ ತಮ್ಮ ಪತ್ನಿ ಪ್ರಿಯಾಂಕ ಉಪೇಂದ್ರ ಮತ್ತು ಮಕ್ಕಳಾದ ಐಶ್ವರ್ಯ ಮತ್ತು ಆಯುಷ್ಮಾನ್ ಜೊತೆ ಕೂಲ್ ಆಗಿ ಎಂಜಾಯ್ ಮಾಡುತ್ತಿರುವ ಉಪೇಂದ್ರ ಮತ್ತವರ ಫ್ಯಾಮಿಲಿ ಫೋಟೋ ಗ್ಯಾಲರಿ ಇಲ್ಲಿದೆ ನೋಡಿ..

-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
ಚಿತ್ರಗಳು: ಅಮೆರಿಕದಲ್ಲಿ ಬೇಸಿಗೆ ರಜೆ ಎಂಜಾಯ್ ಮಾಡುತ್ತಿರುವ ಉಪ್ಪಿ ಕುಟುಂಬ

ಚಿತ್ರಗಳು: ಅಮೆರಿಕದಲ್ಲಿ ಬೇಸಿಗೆ ರಜೆ ಎಂಜಾಯ್ ಮಾಡುತ್ತಿರುವ ಉಪ್ಪಿ ಕುಟುಂಬ

-
-
-
-
English summary
Knnada Actor Upendra is out of the country on a much-deserved break with his family. The actor, along with his actress-wife Priyanka and his two children are no doubt having a ball of a time on their summer break in the US.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada