twitter
    For Quick Alerts
    ALLOW NOTIFICATIONS  
    For Daily Alerts

    ಅತ್ಯಾಚಾರಿಗಳ ಎನ್ ಕೌಂಟರ್: ಉಪೇಂದ್ರ ಟ್ವೀಟ್ ವಿರುದ್ಧ ನೆಟ್ಟಿಗರ ಆಕ್ರೋಶ

    |

    Recommended Video

    Social media users outrage against Upendra | Oneindia Kannada

    ಹೈದರಾಬಾದ್ ನ ಪಶು ವೈದ್ಯೆಯ ರೇಪ್ ಮತ್ತು ಹತ್ಯೆ ಪ್ರಕರಣದ ಆರೋಪಿಗಳನ್ನು ಎನ್ ಕೌಂಟರ್ ಮಾಡಿ ಸುಟ್ಟು ಬಿಸಾಡಿದ ಪೊಲೀಸರ ಕಾರ್ಯವೈಕರಿಗೆ ಇಡೀ ದೇಶವೆ ಮೆಚ್ಚುಗೆ ವ್ಯಕ್ತಪಡಿಸುತ್ತಿದೆ. ಕಾಮ ಪಿಪಾಸುಗಳಿಗೆ ತಕ್ಷಣ ಶಿಕ್ಷೆಯಾಗಬೇಕು ಎನ್ನುವುದು ಸಾರ್ವಜನಿಕರ ಒತ್ತಾಯವಾಗಿತ್ತು. ಇಡೀ ದೇಶದ ಒತ್ತಾಸೆಯಂತೆ ರೇಪಿಸ್ಟ್ ಗಳನ್ನು ಒಂದು ವಾರದಲ್ಲೆ ಎನ್ ಕೌಂಟರ್ ಮಾಡಿ ಸಂತ್ರಸ್ತೆಯ ನ್ಯಾಯ ಒದಗಿಸಿಕೊಟ್ಟಿದ್ದಾರೆ.

    ಪೊಲೀಸರ ಎನ್ ಕೌಂಟರ್ ಗೆ ಸ್ಯಾಂಡಲ್ ವುಡ್ ನ ಅನೇಕ ಕಲಾವಿದರು ಶ್ಲಾಘನೆ ಮಾಡಿದ್ದಾರೆ. ಆದರೆ ರಿಯಲ್ ಸ್ಟಾರ್ ಉಪೇಂದ್ರ ಈ ಎನ್ ಕೌಂಟರ್ ಬಗ್ಗೆ ಒಂದಿಷ್ಟು ಪ್ರಶ್ನೆಗಳನ್ನು ಎತ್ತಿದ್ದಾರೆ. ಈ ನಾಲ್ಕು ಹುಡುಗರೆ ರೇಪ್ ಮಾಡಿ ಸುಟ್ಟು ಹಾಕಿದ್ದಾರೊ ಇಲ್ಲ ಇದರ ಹಿಂದೆ ಪ್ರಮುಖ ವ್ಯಕ್ತಿಗಳ ಕೈವಾಡವಿದೆಯೊ ಎಂದು ಕೇಳಿದ್ದಾರೆ. ಇನ್ನು ಈ ರೀತಿಯ ಎನ್ ಕೌಂಟರ್ ಪ್ರಮುಖ ವ್ಯಕ್ತಿಗಳ ಕೇಸ್ ನಲ್ಲಿ ಯಾಕಾಗುವುದಿಲ್ಲ? ಕೋರ್ಟನಲ್ಲಿ ವಿಚಾರಣೆಗೂ ಮುನ್ನ ನಡೆದ ಈ ಎನ್ ಕೌಂಟರ್ ಇನ್ನು ಮುಂದೆ ಪ್ರಭಾವಶಾಲೀ ಭ್ರಷ್ಟ ರೇಪಿಷ್ಟ್ ಗಳಿಗೆ ರತ್ನಗಂಬಳಿಯಾಗುವುದೇ? ಎಂದು ಪ್ರಶ್ನಿಸಿದ್ದಾರೆ.

    ದಿಶಾ ಸುಟ್ಟ ಸ್ಥಳದಲ್ಲೇ ಕಾಮಪಿಪಾಸುಗಳನ್ನು ಸುಟ್ಟ ಪೊಲೀಸರಿಗೆ ಸೆಲ್ಯೂಟ್ ಎಂದ ತಾರೆಯರು.!ದಿಶಾ ಸುಟ್ಟ ಸ್ಥಳದಲ್ಲೇ ಕಾಮಪಿಪಾಸುಗಳನ್ನು ಸುಟ್ಟ ಪೊಲೀಸರಿಗೆ ಸೆಲ್ಯೂಟ್ ಎಂದ ತಾರೆಯರು.!

    ಉಪೇಂದ್ರ ಈ ಟ್ವೀಟ್ ಗೆ ನೆಟ್ಟಿಗರು ಸರಿಯಾಗೆ ತರಾಟೆಗೆ ತೆಗೆದುಕಂಡಿದ್ದಾರೆ. ಇಡೀ ದೇಶ ಶ್ಲಾಘನೆ ವ್ಯಕ್ತಪಡಿಸುತ್ತಿದ್ದರೆ ರಿಯಲ್ ಸ್ಟಾರ್ 'ರಿಯಾಲಿಟಿ ಚೆಕ್'ಗೆ ಹೊರಟಿರುವುದರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತಿದ್ದಾರೆ. ಬುದ್ಧಿವಂತಿಕೆ ಒಳ್ಳೆಯದು ಆದರೆ ಅತೀ ಬಿದ್ದಿವಂತಿಕೆ ಒಳ್ಳೆಯದಲ್ಲ ಎಂದು ಹೇಳುತ್ತಿದ್ದಾರೆ.

    Kannada Actor Upendra Questioned About Hyderabad Rapist Encounter

    ಇನ್ನು ಕೆಲವರು ಉಪೇಂದ್ರ ಸರಿಯಾಗಿ ಹೇಳಿದ್ದೀರಿ ಎಂದು ಹೇಳುತ್ತಿದ್ದಾರೆ. "ಪ್ರಭಾವಿ ಶಾಲಿಗಳಾಗಿದ್ದರೆ ಈ ರೀತಿಯ ಎನ್ ಕೌಂಟರ್ ನಡೆಯುತ್ತಿತ್ತಾ, ಸಾಮಾನ್ಯರು ಎನ್ನುವ ಕಾರಣಕ್ಕೆ ತಕ್ಷಣ ಎನ್ ಕೌಂಟರ್ ಮಾಡಿ ಬಿಸಾಡಿದ್ದಾರೆ" ಎಂದು ಪ್ರತಿಕ್ರಿಯಿಸುತ್ತಿದ್ದಾರೆ.

    ಹೆಣ್ಣಾಗಿ ಹುಟ್ಟಿದ್ದು ತಪ್ಪೇ?: ಕಣ್ಣೀರು ಹಾಕಿದ ನಟಿ ಅದಿತಿಹೆಣ್ಣಾಗಿ ಹುಟ್ಟಿದ್ದು ತಪ್ಪೇ?: ಕಣ್ಣೀರು ಹಾಕಿದ ನಟಿ ಅದಿತಿ

    Kannada Actor Upendra Questioned About Hyderabad Rapist Encounter

    ಇದರ ಬೆನ್ನಲೆ ಉಪೇಂದ್ರ ಮತ್ತೊಂದು ಟ್ವೀಟ್ ಮಾಡಿ ಮೊದಲು ನೀಡಿರುವ ಹೇಳಿಕೆ ಸ್ಪಷ್ಟನೆ ಕೊಡುವ ಪ್ರಯತ್ನ ಮಾಡಿದ್ದಾರೆ. ಮತ್ತೆ ಟ್ವೀಟ್ ಮಾಡಿರುವ ಉಪೇಂದ್ರ "ಒಂದು ಕಾಲದಲ್ಲಿ ಇದೇ ರೀತಿ ಎನ್ಕೌಂಟರ್ ಮಾಡಿ ರೌಡಿಸಂಗೆ ಕಡಿವಾಣ ಹಾಕಿದ ಹಾಗೆ, ನಿಷ್ಠಾವಂತ ಪೋಲೀಸ್ ಅಧಿಕಾರಿಗಳು ಮನಸು ಮಾಡಿದರೆ ಎನ್ಕೌಂಟರ್ ಮೂಲಕ ಈ ಅತ್ಯಾಚಾರದ ಪಿಡುಗನ್ನು ನಿರ್ಮೂಲ ಮಾಡಬಹುದು. ಆದರೆ ಇದನ್ನು ಹಣವಂತರು, ಪ್ರಭಾವಿಗಳು ದುರುಪಯೋಗ ಮಾಡದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು" ಎಂದು ಹೇಳಿದ್ದಾರೆ.

    Read more about: upendra ಉಪೇಂದ್ರ
    English summary
    Kannada actor Upendra questioned about rapist encounter. Netizens outraged against Upendra.
    Saturday, December 7, 2019, 12:33
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X