50ನೇ ಸಿನಿಮಾದ ಎಕ್ಸ್ ಕ್ಲೂಸಿವ್ ವಿಚಾರ ಬಿಚಿಟ್ಟ ಉಪ್ಪಿ

ರಿಯಲ್ ಸ್ಟಾರ್ ಉಪೇಂದ್ರ ಅವರ 50ನೇ ಸಿನಿಮಾ ವಿಚಾರವಾಗಿ ಭಾರಿ ಚರ್ಚೆಗಳು ನಡೆಯುತ್ತಲೇ ಇವೆ. ಉಪ್ಪಿ ಹಾಫ್ ಸೆಂಚುರಿ ಸಿನಿಮಾ ಯಾವುದು?, ಆ ಚಿತ್ರ ಹೇಗಿರಲಿದೆ..? ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಬಹಳ ಹೆಚ್ಚಾಗಿದೆ.

ಆಗಾಗ ಉಪೇಂದ್ರ ಅವರ 50ನೇ ಸಿನಿಮಾ ವಿಚಾರ ಸದ್ದು ಮಾಡುತ್ತಲೇ ಇರುತ್ತೆ. ಆದರೆ, ಇದುವರೆಗೂ ಉಪೇಂದ್ರ 50ನೇ ಸಿನಿಮಾದ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ. ಈ ಹಿಂದೆ ರಿಯಲ್ ಸ್ಟಾರ್ 50ನೇ ಸಿನಿಮಾದ ಕತೆಯನ್ನು ಯುವ ಪ್ರತಿಭೆ ಸಂತು ಅವರು ಬರೆಯುತ್ತಿದ್ದಾರೆ ಎಂದು ಹೇಳಲಾಗಿತ್ತು. ಆದರೀಗ ಕತೆ ವಿಚಾರದಲ್ಲಿದ್ದ ಗೊಂದಲಕ್ಕೆ ಉಪ್ಪಿ ತೆರೆ ಎಳೆದಿದ್ದಾರೆ .

ಹೌದು, 'ಫಿಲ್ಮಿಬೀಟ್ ಕನ್ನಡ' ಜೊತೆ ಮಾತನಾಡಿದ ರಿಯಲ್ ಸ್ಟಾರ್ 50ನೇ ಸಿನಿಮಾದ ಬಗ್ಗೆ ಎಕ್ಸ್ ಕ್ಲೂಸಿವ್ ಮಾಹಿತಿ ಹೊರಹಾಕಿದ್ದಾರೆ. ಉಪೇಂದ್ರ ಅವರ 50ನೇ ಸಿನಿಮಾದ ಕತೆಯನ್ನು ಅವರೇ ಬರೆಯುತ್ತಿದ್ದಾರಂತೆ. ಕತೆ, ನಿರ್ದೇಶನ ಮತ್ತು ನಟನೆ ಎಲ್ಲವೂ ಉಪೇಂದ್ರ ಅವರದ್ದೇ ಆಗಿರುತ್ತೆ ಎಂದು ಉಪ್ಪಿ ತಿಳಿಸಿದ್ದಾರೆ.

kannada actor upendra reveals about his 50th movie

ಉಪೇಂದ್ರ ಮುಂದಿನ ನಿರ್ದೇಶನದ ಸಿನಿಮಾ ಅವರ 50ನೇ ಸಿನಿಮಾದ ಕೂಡ ಎನ್ನುವುದು ವಿಶೇಷ. ಸದ್ಯ, ಪ್ರಜಾಕೀಯದಲ್ಲಿ ಬ್ಯುಸಿ ಇರುವ ಕಾರಣ ಲೋಕಸಭಾ ಚುನಾವಣೆ ಬಳಿಕ ರಿಯಲ್ ಸ್ಟಾರ್ 50ನೇ ಸಿನಿಮಾದ ಸ್ಕ್ರಿಪ್ಟ್ ಕೆಲಸಕ್ಕೆ ಕೈ ಹಾಕುವ ಸಾದ್ಯತೆ ಇದೆ.

ಅಲ್ಲದೆ ಉಪೇಂದ್ರ ಅಭಿನಯದ 'ಹೋಮ್ ಮಿನಿಸ್ಟರ್' ಮತ್ತು 'ಐ ಲವ್ ಯು 'ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಜೊತೆಗೆ ಇನ್ನೂ ಮೂರು ಚಿತ್ರಗಳಿಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಹಾಗಾಗಿ ಈ ಎಲ್ಲಾ ಪ್ರಾಜೆಕ್ಟ್ ಗಳು ಮುಗಿದ ಬಳಿಕ ರಿಯಲ್ ಸ್ಟಾರ್ 50ನೇ ಸಿನಿಮಾ ಪ್ರಾರಂಭವಾಗುವ ಸಾಧ್ಯತೆ ಇದೆ.

More from Filmibeat

English summary
Real star Upendra reveals about his 50th movie. The actor told that his 50th movie story will be written by him self.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X