'ಕಲ್ಪನಾ 2' ಸಿನಿಮಾ ಉಪ್ಪಿಗೆ, ಬಿಗ್ ಚಾಲೆಂಜ್ ಅಂತೆ..!

By Suneetha

ತಮಿಳು ಚಿತ್ರರಂಗದಲ್ಲಿ ನಟ ಕಮ್ ನಿರ್ದೇಶಕ ರಾಘವ ಲಾರೆನ್ಸ್ ಅವರು ನಟಿಸಿ-ನಿರ್ದೇಶಿಸಿದ್ದ 'ಕಾಂಚನಾ ಭಾಗ 1' 'ಕಾಂಚನಾ ಭಾಗ 2' ಚಿತ್ರಗಳು ಹಿಟ್ ಆಗಿದ್ದು, ಪ್ರೇಕ್ಷಕರನ್ನು ಮೋಡಿ ಮಾಡಿದ್ದು ನಿಮಗೆ ತಿಳಿದೇ ಇದೆ.

ಇದೀಗ ಇದರಿಂದ ಸ್ಪೂರ್ತಿಗೊಂಡ ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ ಅವರು 'ಕಲ್ಪನಾ' ಎಂಬ ಸಿನಿಮಾ ಮಾಡಿದ್ದರು. ಅದು ಪ್ರೇಕ್ಷಕರಿಂದ ಮೆಚ್ಚುಗೆ ಪಡೆದುಕೊಂಡ ಮೇಲೆ ಇದೀಗ ಮತ್ತೊಮ್ಮೆ 'ಕಲ್ಪನಾ 2' ಚಿತ್ರದ ಮೂಲಕ ಮತ್ತೆ ಬಂದಿದ್ದಾರೆ.

ಈಗಾಗಲೇ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ರೆಸ್ಪಾನ್ಸ್ ಗಿಟ್ಟಿಸಿಕೊಳ್ಳುತ್ತಿದೆ. 'ಕಲ್ಪನಾ 2' ತಮಿಳಿನ 'ಕಾಂಚನ 2' ರಿಮೇಕ್. ರಾಘವ ಲಾರೆನ್ಸ್ ಅವರ ಮೂಲಕ್ಕಿಂತಲೂ ವಿಭಿನ್ನವಾಗಿ ಮಾಡುವುದು ನಿರ್ದೇಶಕ ಅರ್ ಅನಂತ್ ರಾಜು ಅವರಿಗೆ ಸವಾಲಿನ ಕೆಲಸವಂತೆ.[ಕಿಚ್ಚನ ನೋಡಿ 'ಓ ಮೈ ಗಾಡ್' ಅಂದ ಉಪ್ಪಿ.!]

'ಲಾರೆನ್ಸ್ ಅವರಿಗೆ ದೊಡ್ಡ ನಟರನ್ನು ನಿಭಾಯಿಸುವ ಕಷ್ಟವಿರಲಿಲ್ಲ. ಅವರು ಪಾತ್ರದ ಜೊತೆ ಸಾಮಾನ್ಯವಾಗಿ ಆಟವಾಡಿದರು. ಇಲ್ಲಿ ಉಪೇಂದ್ರ ಇರುವುದರಿಂದ ಸನ್ನಿವೇಶ ಬದಲಾಗಿದೆ' ಎನ್ನುತ್ತಾರೆ ನಿರ್ದೇಶಕರು.

ರಿಯಲ್ ಸ್ಟಾರ್ ಉಪೇಂದ್ರ ಅವರ ಇಮೇಜ್ ಮತ್ತು ಪಾತ್ರವನ್ನು ಸರಿದೂಗಿಸುವುದು ಪ್ರಮುಖ ಸವಾಲು ಎನ್ನುವ ನಿರ್ದೇಶಕ 'ಉಳಿದಂತೆ ಪಾತ್ರವರ್ಗದ ಪರಿಕಲ್ಪನೆ ಅದೇ ಆಗಿರುತ್ತದೆ'. ಜೊತೆಗೆ ದ್ವಿತೀಯಾರ್ಧದ ಕಥೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿರುವುದಾಗಿ ತಿಳಿಸಿದ್ದಾರೆ. ಇನ್ನು ಚಿತ್ರದಲ್ಲಿ ನಿರ್ದೇಶಕ ಅನಂತ್ ಅವರು 'ಮೂಲದಲ್ಲಿ ಒಂದೇ ದಿನದಲ್ಲಿ ನಡೆಯುವ ಹಲವಾರು ಘಟನೆಗಳನ್ನು ತೋರಿಸಿದ್ದಾರೆ.

'ಇಲ್ಲಿ ನಮ್ಮ ಪ್ರೇಕ್ಷಕರಿಗೆ ಅದು ಕರಗತವಾಗುವುದು ಸ್ವಲ್ಪ ಕಷ್ಟ. ಇಲ್ಲಿ ಕ್ರಮಬದ್ಧವಾಗಿ ಸ್ಪಷ್ಟತೆಯನ್ನು ಕೋರುತ್ತಾರೆ. ಹಾಗೆಯೇ ಕೆಲವು ಬದಲಾವಣೆಗಳನ್ನು ಮಾಡಿಕೊಂಡಿದ್ದೇನೆ' ಎನ್ನುತ್ತಾರೆ ನಿರ್ದೇಶಕರು.[ಉಪ್ಪಿ ಜೊತೆ 'ರಂಗಿ' ಬೆಡಗಿ ಅವಂತಿಕಾ ಶೆಟ್ಟಿ ಡ್ಯುಯೆಟ್ ಹಾಡ್ತಾರಾ?]

ಇದೇ ಮೊದಲ ಬಾರಿಗೆ ನಟಿ ಪ್ರಿಯಾಮಣಿ ಹಾಗೂ 'ರಂಗಿತರಂಗ' ಬೆಡಗಿ ಅವಂತಿಕಾ ಶೆಟ್ಟಿ ಅವರು ಉಪೇಂದ್ರ ಅವರಿಗೆ ನಾಯಕಿಯರಾಗಿ ತೆರೆ ಹಂಚಿಕೊಂಡಿದ್ದು, ಖಳನಾಯಕನಾಗಿ ಪ್ರಕಾಶ್ ಹೆಬ್ಬೋಡು, ಪ್ರೆಟ್ರೋಲ್ ಪ್ರಸನ್ನ ಮತ್ತು ವಿಕ್ಟರಿ ವಾಸು ಪ್ರಮುಖ ತಾರಾಗಣದಲ್ಲಿದ್ದಾರೆ. ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ.

More from Filmibeat

English summary
Raghava Lawerence’s Kanchana series created a league of its own in Tamil cinema which inspired many, especially Upendra, who has tried to come out with his own creative imagination.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X