»   » ಡಿಫರೆಂಟ್ ಉಪ್ಪಿಗೆ, ಡಿಫರೆಂಟ್ ಗಿಫ್ಟ್ ನೀಡಿದ ಡಿಫರೆಂಟ್ ಫ್ಯಾನ್ಸ್!

ಡಿಫರೆಂಟ್ ಉಪ್ಪಿಗೆ, ಡಿಫರೆಂಟ್ ಗಿಫ್ಟ್ ನೀಡಿದ ಡಿಫರೆಂಟ್ ಫ್ಯಾನ್ಸ್!

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನ ಡಿಫರೆಂಟ್ ಸ್ಟಾರ್ ಉಪೇಂದ್ರ ಅವರು ಎಲ್ಲವನ್ನು ಡಿಫರೆಂಟಾಗಿ ಮಾಡೋದು ಅಂತ ನಿಮಗೆ ತಿಳಿದಿರೋ ವಿಚಾರ. ಅದಕ್ಕೆ ಅಲ್ವಾ ಕ್ರಿಸ್ಟಿನಾ ಅಖೀವಾ ಅವರು 'ಇವನ್ಯಾರೋ ಡಿಫರೆಂಟು, ವೆರಿ ವೆರಿ ಡಿಫರೆಂಟು' ಅಂದಿದ್ದು.

ಅದೇನೇ ಇರಲಿ ಇದೀಗ ಡಿಫರೆಂಟ್ ಉಪ್ಪಿ ಅವರ ಡಿಫರೆಂಟ್ ಫ್ಯಾನ್ಸ್ ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ಒಂದು ಡಿಫರೆಂಟ್ ಆದ ಗಿಫ್ಟ್ ಮಾಡಿದ್ದಾರೆ. ಸದ್ಯಕ್ಕೆ ತಮ್ಮ ಫ್ಯಾನ್ಸ್ ಮಾಡಿರುವ ವಿಭಿನ್ನವಾದ ಹೊಸ ಪ್ರಯತ್ನಕ್ಕೆ ಸ್ವತಃ ಉಪ್ಪಿ ಅವರೇ ಬೆರಗಾಗಿದ್ದಾರಂತೆ.

Kannada Actor Upendra's 'Uppi Anthem' By Hip-Hop Kannadigaru

ತಮ್ಮನ್ನು ತಾವು 'ಹಿಪ್ ಹಾಪ್ ಕನ್ನಡಿಗರು' ಅಂತ ಕರೆಸಿಕೊಳ್ಳೋ ಅಭಿಮಾನಿ ಬಳಗವೊಂದು ತಮ್ಮ ಅಭಿಮಾನವನ್ನು ತಮ್ಮದೇ ಶೈಲಿಯಲ್ಲಿ, 'ಈಗ ಮುಂದಿನ ಹಾಡು ಉಪ್ಪಿ ಆಂಥಮ್' ಎಂಬ ಡಿಫರೆಂಟ್ ವಿಡಿಯೋವನ್ನು ಉಪ್ಪಿ ಅವರ ಫ್ಯಾನ್ಸ್, ರಿಯಲ್ ಸ್ಟಾರ್ ಗೆ ಹಾಗೂ ಇಡೀ ಪ್ರಪಂಚದಲ್ಲಿರುವ ಉಪ್ಪಿ ಅವರ ಅಭಿಮಾನಿಗಳಿಗೆ ತಮ್ಮ ಹಿಪ್ ಹಾಪ್ ಶೈಲಿಯಲ್ಲಿಯೇ ಪ್ರೀತಿಯಿಂದ ಅರ್ಪಿಸಿದ್ದಾರೆ.

ರಿಯಲ್ ಸ್ಟಾರ್ ಉಪೇಂದ್ರ ಅವರ ಬಗ್ಗೆ ಒಂದು ಹಾಡನ್ನು ರಚಿಸಿ, ಅದಕ್ಕೆ ಹಿಪ್ ಹಾಪ್ ಸ್ಟೈಲ್ ನಲ್ಲಿ ಸಂಗೀತ ನೀಡಿರುವ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. ಸಖತ್ ಸ್ಟೈಲಿಷ್ ಆಗಿರುವ ಈ ವಿಡಿಯೋವನ್ನು ನೋಡಿ ಮೆಚ್ಚಿಕೊಂಡ ಉಪ್ಪಿ ಅವರು ಅವರದೇ ಸ್ಟೈಲ್ ನಲ್ಲಿ 'ಐ ಲೈಕ್ ಇಟ್, ಐ ಲೈಕ್ ಇಟ್' ಎಂದು ಡೈಲಾಗ್ ಹೊಡೆದಿದ್ದಾರೆ!.

ಅಲ್ಲದೇ ಈ ವಿಡಿಯೋ ಸಾಂಗ್ ಅನ್ನು ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ 'ಮಜಾ ಟಾಕೀಸ್' ವೇದಿಕೆಯಲ್ಲಿ ನಟ ಉಪೇಂದ್ರ ಅವರ ಎದುರಿಗೆ ಮಾಡಿ ತೋರಿಸಿದ್ದು, ವಿಶೇಷವಾಗಿತ್ತು.

ಡಿಫರೆಂಟ್ ಹಿಪ್ ಹಾಪ್ ತಂಡ, ಡಿಫರೆಂಟ್ ಹೀರೋಗೆ ಅರ್ಪಿಸಿರುವ, ಡಿಫರೆಂಟು 'ಉಪ್ಪಿ ಆಂಥೆಮ್' ವಿಡಿಯೋ ಇಲ್ಲಿದೆ ನೋಡಿ..

Fans dedicate Kannada hip hop song to #Upendra - https://www.youtube.com/watch?v=Sjn6ZZXs1OI&feature=youtu.be

Posted by Uppi 2 on Saturday, November 7, 2015
English summary
Kannada Actor Upendra fans giving to different gift for the Upendra. This song was published by Official Uppi anthem by 'HIP HOP KANNADIGARU'. And this song was performed in front of Dr.Upendra in 'Maja Talkies.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada