»   » ಶೆಟ್ರ ಸ್ಫೂರ್ತಿಯಾಗಿರೋ 'ಈ' ನಟನಿಂದ 'ಕಿರಿಕ್ ಪಾರ್ಟಿ' ಟ್ರೈಲರ್ ರಿಲೀಸ್

ಶೆಟ್ರ ಸ್ಫೂರ್ತಿಯಾಗಿರೋ 'ಈ' ನಟನಿಂದ 'ಕಿರಿಕ್ ಪಾರ್ಟಿ' ಟ್ರೈಲರ್ ರಿಲೀಸ್

Posted By:
Subscribe to Filmibeat Kannada

ಕನ್ನಡ ನಟ-ನಿರ್ದೇಶಕ ಕಮ್ ನಿರ್ಮಾಪಕ ರಕ್ಷಿತ್ ಶೆಟ್ಟಿ ನಟನೆಯ ಮತ್ತೊಂದು ಬಹು ನಿರೀಕ್ಷಿತ ಸಿನಿಮಾ 'ಕಿರಿಕ್ ಪಾರ್ಟಿ' ಶೂಟಿಂಗ್ ಪೂರ್ತಿಗೊಳಿಸಿದೆ. 'ರಿಕ್ಕಿ' ಚಿತ್ರದ ಯಶಸ್ಸಿನ ನಂತರ ರಕ್ಷಿತ್ ಶೆಟ್ಟಿ ಮತ್ತು ರಿಶಬ್ ಶೆಟ್ಟಿ ಅವರು ಮತ್ತೆ 'ಕಿರಿಕ್ ಪಾರ್ಟಿ' ಚಿತ್ರದ ಮೂಲಕ ಒಂದಾಗಿದ್ದಾರೆ.

ಈ ಚಿತ್ರದಲ್ಲಿ ನಟ ರಕ್ಷಿತ್ ಶೆಟ್ಟಿ ಅವರು ಮತ್ತೆ ತಮ್ಮ ಕಾಲೇಜು ದಿನಗಳತ್ತ ಜಾರಿದ್ದಾರೆ. ಇದೀಗ ಚಿತ್ರದ ಟ್ರೈಲರ್ ಬಿಡುಗಡೆಗೆ ಸಜ್ಜಾಗಿದ್ದು, ಕನ್ನಡ ಚಿತ್ರರಂಗದ ವಿಭಿನ್ನ ನಟ ರಿಯಲ್ ಸ್ಟಾರ್ ಉಪೇಂದ್ರ ಅವರು ಟ್ರೈಲರ್ ಬಿಡುಗಡೆ ಮಾಡಲಿದ್ದಾರೆ.[ಮೊದಲ ಹಂತದ ಶೂಟಿಂಗ್ ಮುಗಿಸಿದ ಸಂಭ್ರಮದಲ್ಲಿ ಶೆಟ್ರ 'ಕಿರಿಕ್' ಬಳಗ]


Kannada Actor Upendra to release the Trailer of 'Kirik Party'

ಇಂದು (ಅಕ್ಟೋಬರ್ 27) ಬೆಳಗ್ಗೆ ರಿಯಲ್ ಸ್ಟಾರ್ ಉಪೇಂದ್ರ ಅವರ ಅಮೃತ ಹಸ್ತದಿಂದ 'ಕಿರಿಕ್ ಪಾರ್ಟಿ' ಚಿತ್ರದ ಕಲರ್ ಫುಲ್ ಟ್ರೈಲರ್ ಬಿಡುಗಡೆ ಆಗಲಿದೆ. ನಟ ಕಮ್ ನಿರ್ದೇಶಕ ಉಪೇಂದ್ರ ಅವರು ರಕ್ಷಿತ್ ಶೆಟ್ಟಿ ಅವರ ಸ್ಫೂರ್ತಿ ಅಂತೆ, ಆದ್ದರಿಂದ ಅವರ ಕೈಯಲ್ಲೇ ಟ್ರೈಲರ್ ಬಿಡುಗಡೆ ಮಾಡಿಸಬೇಕು ಅನ್ನೋ ಆಸೆ ಇತ್ತು ಎನ್ನುತ್ತಾರೆ.[ರಕ್ಷಿತ್ ಶೆಟ್ಟಿಗೆ ಹುಡುಗಿ ಹುಡುಕುತ್ತಿದ್ದಾರೆ ಜಗ್ಗೇಶ್]


Kannada Actor Upendra to release the Trailer of 'Kirik Party'

ನಟ ರಕ್ಷಿತ್ ಶೆಟ್ಟಿ ಅವರು ಕಥೆ ಬರೆದು, 'ಪರಂವಾ ಸ್ಟುಡಿಯೋಸ್' ಮೂಲಕ ನಿರ್ಮಾಣ ಮಾಡಿ, ನಾಯಕನಾಗಿ ನಟಿಸುತ್ತಿರುವ 'ಕಿರಿಕ್ ಪಾರ್ಟಿ' ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಅವರ ಇಂಜಿನಿಯರಿಂಗ್ ಕಾಲೇಜು ಜೀವನ ತೆರೆದುಕೊಳ್ಳಲಿದೆ. ಹಾಸನದ ಮಲ್ನಾಡ್ ಕಾಲೇಜಿನಲ್ಲಿ, ಕಾಲೇಜು ಭಾಗದ ಶೂಟಿಂಗ್ ಮಾಡಲಾಗಿದೆ.[ಚಿತ್ರಗಳು: 'ಕಿರಿಕ್ ಪಾರ್ಟಿ' ಮುಹೂರ್ತ ಆಯ್ತು, ಇನ್ನು ಶೂಟಿಂಗ್ ಹಬ್ಬ]


Kannada Actor Upendra to release the Trailer of 'Kirik Party'

ನವ ನಟಿಯರಾದ ನಟಿ ರಶ್ಮಿಕ ಮಂದಣ್ಣ ಮತ್ತು ನಟಿ ಸಂಯುಕ್ತ ಹೆಗಡೆ ಅವರು ಇದೇ ಮೊದಲ ಬಾರಿಗೆ ನಟ ರಕ್ಷಿತ್ ಶೆಟ್ಟಿ ಅವರ ಜೊತೆ ಡ್ಯುಯೆಟ್ ಹಾಡಿದ್ದಾರೆ. ನಟ ಅಚ್ಯುತ್ ಕುಮಾರ್ ಈ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

English summary
Kannada Actor Upendra will be releasing the trailer of his latest film 'Kirik Party' on Thursday (October 27th) morning. Kannada Actor Rakshit Shetty, Actress Rashmika Mandanna, Actress Samyuktha Hegde in the lead role. The movie is directed by Rishab Shetty.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada