ಉಪೇಂದ್ರ ನಡುರಸ್ತೆಯಲ್ಲಿ ತನ್ನ ಕಾರು ಬಿಟ್ಟು ಪೊಲೀಸ್ ಜೀಪ್ ಹತ್ತಿದ್ದೇಕೆ.?
Recommended Video

ನಟ, ನಿರ್ದೇಶಕ ರಿಯಲ್ ಸ್ಟಾರ್ ಉಪೇಂದ್ರ ಅವರು ಪೊಲೀಸ್ ಜೀಪ್ ನಲ್ಲಿ ಹೋಗಿದ್ದನ್ನ ಕಂಡ ಹಲವರು, ಉಪ್ಪಿಯನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ ಎಂದು ಆಶ್ಚರ್ಯಗೊಂಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನ ಕೂಡ ಹಾಗೆ ತಿಳಿದುಕೊಂಡರು.
ಉಪೇಂದ್ರ ಅವರನ್ನ ಯಾಕೆ ಅರೆಸ್ಟ್ ಮಾಡಲಾಯಿತು, ಅವರು ಅಂಥಹ ತಪ್ಪೇನು ಮಾಡಿದ್ರು ಎಂಬ ಚರ್ಚೆಗಳು ಶುರುವಾಯಿತು. ನಿರ್ಮಾಪಕ ಕೆ ಮಂಜು ಅವರು ಕೂಡ ಉಪೇಂದ್ರ ಜೊತೆಯಲ್ಲಿದ್ದರಿಂದ ಏನೋ ಆಗಿದೆ ಎಂಬ ಅನುಮಾನ ಕಾಡಿತ್ತು. ಆದ್ರೆ, ಅಲ್ಲಿ ಆಗಿದ್ದೇ ಬೇರೆ.
ಉಪೇಂದ್ರ ಅವರು ಅರೆಸ್ಟ್ ಆಗಲಿಲ್ಲ. ಟ್ರಾಫಿಕ್ ಜಾಂ ಆಗಿದ್ದರಿಂದ ಉಪ್ಪಿ ಅವರು ಕಾರು ನಿಂತ ಸ್ಥಳದಿಂದ ಮೂವ್ ಮಾಡಲು ಆಗಲಿಲ್ಲ. ಹಾಗಾಗಿ, ಚಿತ್ರೀಕರಣಕ್ಕೆ ಸಮಯ ಆಗಿದ್ದರಿಂದ ಪೊಲೀಸ್ ಜೀಪ್ ನಲ್ಲಿ ಡ್ರಾಪ್ ಮಾಡಿಸಿಕೊಂಡಿದ್ದಾರೆ.

ಈ ಬಗ್ಗೆ ಸ್ಪಷ್ಟನೆ ನೀಡಿದ ನಿರ್ಮಾಪಕ ಕೆ ಮಂಜು, ಬೆಂಗಳೂರಿನ ಬಿಜಿಎಸ್ ಕಾಲೇಜಿನ ಕಾರ್ಯಕ್ರಮದಲ್ಲಿ ಉಪೇಂದ್ರ ಭಾಗಿಯಾಗಿದ್ದರು. ಮುಖ್ಯಮಂತ್ರಿ ಕುಮಾರಸ್ವಾಮಿ, ಸದಾನಂದಗೌಡ ಜೊತೆ ಉಪೇಂದ್ರ ಅತಿಥಿಯಾಗಿ ಬಂದಿದ್ದರು. ಕಾರ್ಯಕ್ರಮ ಮುಗಿದ ನಂತರ ಐ ಲವ್ ಯೂ ಶೂಟಿಂಗ್ ಗೆ ಹೋಗಬೇಕಿತ್ತು. ಬಟ್, ಉಪ್ಪಿ ಕಾರು ಟ್ರಾಫಿಕ್ ನಲ್ಲಿ ಸ್ಟಕ್ ಆಗಿತ್ತು. ಶೂಟಿಂಗ್ ಗೆ ಲೇಟ್ ಆಗ್ತಿದ್ದ ಕಾರಣ ಉಪೇಂದ್ರ ಅವರು, ಪೊಲೀಸರ ಬಳಿ ಮನವಿ ಮಾಡಿಕೊಂಡು ಡ್ರಾಪ್ ಮಾಡಿಸಿಕೊಂಡರು'' ಎಂದು ತಿಳಿಸಿದ್ದಾರೆ.
ಆದ್ರೆ, ಉಪೇಂದ್ರ ಮಾಡಿದ್ದು ಸರಿನಾ ಎಂಬ ಚರ್ಚೆ ಈಗ ಕೇಳಿಬರುತ್ತಿದೆ. ಪ್ರಜಾಕೀಯದ ಮೂಲಕ ಜನರಿಗೆ ಸಿದ್ಧಾಂತ, ಕಾನೂನು ಹೇಳುವ ಉಪೇಂದ್ರ ಅವರು, ಸರ್ಕಾರಿ ವಾಹನದಲ್ಲಿ ಶೂಟಿಂಗ್ ಸ್ಪಾಟ್ ಗೆ ಡ್ರಾಪ್ ಮಾಡಿಸಿಕೊಂಡಿದ್ದು ಸರಿನಾ ಎಂದು ಸೋಶಿಯಲ್ ಮೀಡಿಯಾದಲ್ಲಿ ಡಿಬೇಟ್ ಆಗ್ತಿದೆ.
ಇದೀಗ, ಈ ಬಗ್ಗೆ ಸ್ವತಃ ಉಪೇಂದ್ರ ಅವರೇ ಸ್ಪಷ್ಟನೆ ನೀಡಬೇಕಿದೆ. ಉಪ್ಪಿ ಮಾಡಿದ್ದು ಸರಿನಾ ಅಥವಾ ಸಂದರ್ಭ ಹಾಗೆ ಮಾಡಿಸಿತು ಎಂದು ಸಮರ್ಥಿಸಿಕೊಳ್ಳುತ್ತಾರಾ ಕಾದುನೋಡಬೇಕಿದೆ.


Click it and Unblock the Notifications











