»   » ಕನ್ನಡ ಚಿತ್ರರಂಗದ ಹಿರಿಯ ಕಲಾವಿದ ವೇಣುಗೋಪಾಲ್ ವಿಧಿವಶ!

ಕನ್ನಡ ಚಿತ್ರರಂಗದ ಹಿರಿಯ ಕಲಾವಿದ ವೇಣುಗೋಪಾಲ್ ವಿಧಿವಶ!

Posted By:
Subscribe to Filmibeat Kannada
ಕನ್ನಡದ ಹಿರಿಯ ನಟ ವೇಣುಗೋಪಾಲ್ ವಿಧಿವಶ | Filmibeat Kannada

ಕನ್ನಡದ ಸಾಕಷ್ಟು ಸಿನಿಮಾಗಳಲ್ಲಿ ಪೋಷಕ ನಟನಾಗಿ, ಖಳನಟನಾಗಿ ಅಭಿನಯಿಸಿದ್ದ ಹಿರಿಯ ಕಲಾವಿದ ವೇಣುಗೋಪಾಲ್ ವಿಧಿವಶರಾಗಿದ್ದಾರೆ.

ಇಂದು ಬೆಳ್ಳಗೆ 8.30ರ ಸುಮಾರಿಗೆ ಕತ್ರಿಗುಪ್ಪೆಯ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ವೇಣುಗೋಪಾಲ್ ನಿಧನರಾಗಿದ್ದಾರೆ. ಐವತ್ತಕ್ಕೂ ಹೆಚ್ಚು ಸಿನಿಮಾ ಮಾಡಿದ್ದ ವೇಣುಗೋಪಾಲ್ ಅವರು ಕೊನೆಯದಾಗಿ 'ಶುದ್ದಿ' ಚಿತ್ರದಲ್ಲಿ ನಟಿಸಿದ್ದರು.

kannada actor Venugopal passes away

ವೇಣುಗೋಪಾಲ್ ಅವರು 'ಸೂರಪ್ಪ', 'ರಾಜನರಸಿಂಹ', 'ಕೋಟಿಗೊಬ್ಬ' ಸೇರಿದಂತೆ ವಿಷ್ಣುವರ್ಧನ್ ಅವರ ಅನೇಕ ಚಿತ್ರಗಳಲ್ಲಿ ನಟಿಸಿದ ಖ್ಯಾತಿ ಹೊಂದಿದ್ದರು. ಸಿನಿಮಾದ ಜೊತೆಗೆ 'ಮನೆತನ', 'ಜನನಿ' ಸೇರಿದಂತೆ ಕೆಲ ಧಾರಾವಾಹಿಗಳಲ್ಲಿಯೂ ಕಾಣಿಸಿಕೊಂಡಿದ್ದರು.

ವೇಣುಗೋಪಾಲ್ ಅವರ ಸಂಬಂಧಿಗಳು ದೂರದ ಉರಿನಿಂದ ಅಂತಿಮ ದರ್ಶನಕ್ಕಾಗಿ ಬರಬೇಕಾಗಿದ್ದು, ನಾಳೆ ಅಂತ್ಯಸಂಸ್ಕಾರವನ್ನು ಮಾಡಲು ಕುಟುಂಬಸ್ಥರು ತೀರ್ಮಾನಿಸಿದ್ದಾರೆ. ವೇಣುಗೋಪಾಲ್ ಅವರಿಗೆ ಪವನ್ ಮತ್ತು ಹೇಮಂತ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ.

English summary
Kannada Actor Venugopal passes away.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X