ಎರಡು ಹಿಟ್ ಸಿನಿಮಾಗಳ ನಂತರ ವಿಕ್ಕಿ 3ನೇ ಚಿತ್ರ ಶುರು
'ಕೆಂಡಸಂಪಿಗೆ' ಹಾಗೂ 'ಕಾಲೇಜ್ ಕುಮಾರ್' ಸಿನಿಮಾಗಳ ನಂತರ ನಟ ವಿಕ್ಕಿ ವರುಣ್ ಮೂರನೇ ಸಿನಿಮಾ ಯಾವಾಗ ಮಾಡ್ತಾರೆ ಎಂಬ ನಿರೀಕ್ಷೆ ಇತ್ತು. ಅದೇ ರೀತಿ ಎರಡು ಹಿಟ್ ಚಿತ್ರಗಳ ಬಳಿಕ ಈಗ ವಿಕ್ಕಿ ಹೊಸ ಸಿನಿಮಾ ಶುರು ಆಗಿದೆ.
'ರಾಮಾ ರಾಮಾ ರೇ' ಚಿತ್ರದ ನಿರ್ದೇಶಕ ಡಿ.ಸತ್ಯ ಪ್ರಕಾಶ್ ಕಥೆಗೆ ವಿಕ್ಕಿ ಹೀರೋ ಆಗಿದ್ದಾರೆ. ಈ ಸಿನಿಮಾವನ್ನು ರಘು ಕಾನಡ್ಕ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ಜಾಹಿರಾತು ಗಳನ್ನು ನಿರ್ದೇಶನ ಮಾಡಿರುವ ಇವರು ಈಗ ಸಿನಿಮಾ ಮಾಡುತ್ತಿದ್ದಾರೆ.
ತಮ್ಮ ಎರಡು ಸಿನಿಮಾದಲ್ಲಿಯೂ ಕಥೆಗೆ ಪ್ರಾಮುಖ್ಯತೆ ನೀಡಿದ್ದ ವಿಕ್ಕಿ ಇಲ್ಲಿಯೂ ವಿಶೇಷ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇದೊಂದು ಕಮರ್ಷಿಯಲ್ ಹಾಗೂ ಪ್ರಯೋಗಾತ್ಮಕ ಎರಡು ಶೈಲಿಯ ಚಿತ್ರವಂತೆ. ಈ ಹಿಂದಿನ ಎರಡು ಪಾತ್ರವನ್ನು ಬಿಟ್ಟು ಹೊಸದನ್ನು ಟ್ರೈ ಮಾಡಿದ್ದೇನೆ ಎನ್ನುತ್ತಾರೆ ವಿಕ್ಕಿ.

ನಾರಾಯಣ್ ಎಂಬುವರು ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ದೊಡ್ಡ ಬಜೆಟ್ ನಲ್ಲಿ ಅದ್ದೂರಿಯಾಗಿ ಸಿನಿಮಾವನ್ನು ಮಾಡುವ ತಯಾರಿಯಲ್ಲಿ ಚಿತ್ರತಂಡ ಇದೆ. ಆಷಾಡ ಮುಗಿದ ಮೇಲೆ ಸಿನಿಮಾ ಸೆಟ್ಡೆರಲಿದ್ದು, ನಾಯಕಿಯ ಆಯ್ಕೆ ಸದ್ಯಕ್ಕೆ ಆಗಿಲ್ಲ.


Click it and Unblock the Notifications











