ವಿಕ್ರಮ್ ರವಿಚಂದ್ರನ್ ಅಭಿನಯದ ಮೊದಲ ಚಿತ್ರಕ್ಕೆ ನಾಯಕಿ ಸಿಕ್ಕಳು

ಕ್ರೇಜ್ ಸ್ಟಾರ್ ರವಿಚಂದ್ರನ್ ಎರಡನೆ ಪುತ್ರ ವಿಕ್ರಮ್ ರವಿಚಂದ್ರನ್ ಚೊಚ್ಚಲ ಚಿತ್ರಕ್ಕೆ ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೆ ಪ್ರಿಪ್ರೊಡಕ್ಷನ್ ಕೆಲಸ ಮುಗಿಸಿ ಚಿತ್ರೀಕರಣಕ್ಕೆ ಸಿದ್ಧರಾಗಿರುವ ವಿಕ್ರಮ್ ಮತ್ತು ತಂಡಕ್ಕೆ ನಾಯಕಿಯ ಎಂಟ್ರಿಯಾಗಿದೆ.

ವಿಕ್ರಮ್ ರವಿಚಂದ್ರನ್ ಅಭಿನಯದ ತ್ರಿಮಿಕ್ರಮ ಚಿತ್ರಕ್ಕೆ ಸಹನಾ ಮೂರ್ತಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸ್ಟಾರ್ ನಟನ ಪುತ್ರನನ್ನು ಸ್ಯಾಂಡಲ್ ವುಡ್ ಗೆ ಪರಿಚಯಿಸುತ್ತಿರುವ ಜವಾಬ್ದಾರಿಯನ್ನು ಹೊತ್ತುಕೊಂಡಿರುವ ಸಹನಾ ಮೂರ್ತಿ ಈ ಬಾರಿ ಒಂದು ರೋಮ್ಯಾಂಟಿಕ್ ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ.

ವಿಕ್ರಮ್ ರವಿವಂದ್ರನ್ ಮೊದಲ ಸಿನಿಮಾಗೆ ನಾಯಕಿ ಹುಡುಕಾಟದಲ್ಲಿದ್ದ ಚಿತ್ರತಂಡಕ್ಕೀಗ ನಾಯಕಿ ಸಿಕ್ಕಿದ್ದಾರೆ. ಕನ್ನಡದ ಹುಡುಗಿಯೆ ಬೇಕು ಎನ್ನುತ್ತಿದ್ದ ಚಿತ್ರತಂಡವೀಗ ಮುಂಬೈ ಬೆಡಗಿಯನ್ನು ಕರೆದುಕೊಂಡು ಬಂದಿದ್ದಾರೆ.

ವಿಕ್ರಮ್ ಜೊತೆ ಆಕಾಂಕ್ಷ ಶರ್ಮ ಡ್ಯುಯೆಟ್

ವಿಕ್ರಮ್ ಜೊತೆ ಆಕಾಂಕ್ಷ ಶರ್ಮ ಡ್ಯುಯೆಟ್

ವಿಕ್ರಮ್ ಗೆ ನಾಯಕಿಯಾಗಿ ಆಕಾಂಕ್ಷ ಶರ್ಮ ಕಾಣಿಸಿಕೊಳ್ಳುತ್ತಿದ್ದಾರೆ. ಮುಂಬೈ ಮೂಲಕ ಆಕಾಂಕ್ಷ ಮಾಡಲಿಂಗ್ ನಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಅಲ್ಲದೆ ದೊ ದಿನ್ ಎನ್ನುವ ಆಲ್ಬಂ ಸಾಂಗ್ ನಲ್ಲಿ ಮಿಂಚಿದ್ದಾರೆ. ಕಳೆದ ವರ್ಷ ತೆರೆಕಂಡ ಈ ಹಾಡು ದೊಡ್ಡ ಮಟ್ಟಕ್ಕೆ ಸದ್ದು ಮಾಡಿತ್ತು. ಈ ಹಾಡಿನಲ್ಲಿ ಆಕಾಂಕ್ಷ ನಟ ದರ್ಶನ್ ರಾವಲ್ ಜೊತೆ ಹೆಜ್ಜೆ ಹಾಕಿದ್ದರು. ಈಗ ವಿಕ್ರಮ್ ಜೊತೆ ಅಭಿನಯಿಸುವ ಮೂಲಕ ಕನ್ನಡಕ್ಕೆ ಕಾಲಿಟ್ಟಿರುವ ಆಕಾಂಕ್ಷ ಕನ್ನಡ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ.

'ತ್ರಿವಿಕ್ರಮ'-ಹೈ ವೋಲ್ಟೇಜ್ ಲವ್ ಸ್ಟೋರಿ

'ತ್ರಿವಿಕ್ರಮ'-ಹೈ ವೋಲ್ಟೇಜ್ ಲವ್ ಸ್ಟೋರಿ

ನಿರ್ದೇಶಕ ಸಹನಾ ಮೂರ್ತಿ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ತ್ರಿವಿಕ್ರಮ ಸಿನಿಮಾಗೆ 'ಹೈ ವೋಲ್ಟೇಜ್ ಲವ್ ಸ್ಟೋರಿ' ಎಂದು ಟ್ಯಾಗ್ ಲೈನ್ ನೀಡಿದ್ದಾರೆ. ಹೆಸರೇ ಹೇಳುವ ಹಾಗೆ ಇದೊಂದು ಇದೊಂದು ಪಕ್ಕಾ ಲವ್ ಸ್ಟೋರಿಯ ಸಿನಿಮಾ. ಈ ಹಿಂದೆ ರೋಸ್' ಮತ್ತು 'ಮಾಸ್ ಲೀಡರ್' ನಿರ್ದೇಶನ ಮಾಡಿದ್ದ ಸಹನಾ ಮೂರ್ತಿ ಈಗ ತ್ರಿವಿಕ್ರಮ ಮೂಲಕ ಮೋಡಿ ಮಾಡುತ್ತಾರಾ ಎನ್ನುವುದು ಕಾದು ನೋಡಬೇಕು.

ವರಮಹಾಲಕ್ಷ್ಮಿ ಹಬ್ಬಕ್ಕೆ ಮುಹೂರ್ತ

ವರಮಹಾಲಕ್ಷ್ಮಿ ಹಬ್ಬಕ್ಕೆ ಮುಹೂರ್ತ

ವಿಕ್ರಮ್ ಮೊದಲ ಚಿತ್ರ ವರಮಹಾಲಕ್ಷ್ಮಿ ಹಬ್ಬದಂದು ಸೆಟ್ಟೇರಲಿದೆ. ಆಗಸ್ಟ್ 10ರಂದು ದೊಡ್ಡ ಸಮಾರಂಭದ ಮೂಲಕ ರವಿಮಾಮನ ಎರಡನೆ ಪುತ್ರ ಅದ್ಧೂರಿಯಾಗಿ ಚಿತ್ರರಂಗದಕ್ಕೆ ಕಾಲಿಡಲಿದ್ದಾರೆ. ಈ ಬಗ್ಗೆ ಸಧ್ಯದಲ್ಲೇ ಅಧಿಕೃತವಾಗಿ ಬಹಿರಂಗ ಪಡಿಸಲಿದೆ ಚಿತ್ರತಂಡ.

ಪ್ರಭುದೇವ ನೃತ್ಯ ಸಂಯೋಜನೆ?

ಪ್ರಭುದೇವ ನೃತ್ಯ ಸಂಯೋಜನೆ?

ತ್ರಿವಿಕ್ರಮ ಸಿನಿಮಾಗೆ ಖ್ಯಾತ ನೃತ್ಯ ನಿರ್ದೇಶಕ ಮತ್ತು ನಿರ್ದೇಶಕ ಪ್ರಭುದೇವ ನೃತ್ಯ ಸಂಯೋಜನೆ ಮಾಡುವ ಸಾಧ್ಯತೆ ಇದೆ. ಈಗಾಗಲೆ ಪ್ರಭುದೇವ ಜೊತೆ ಮಾತುಕತೆ ನಡೆಸಿರುವ ಚಿತ್ರತಂಡಕ್ಕೆ ಪ್ರಭುದೇವ ಕಡೆ ಗ್ರೀನ್ ಸಿಗ್ನಲ್ ಸಿಗಬೇಕಾಗಿದೆ. ತ್ರಿವಿಕ್ರಮ ಗೌರಿ ಎಂಟಟೈನರ್ಸ್ ಬ್ಯಾನರ್ ನಲ್ಲಿ ಸೋಮಣ್ಣ ಮತ್ತು ಸುರೇಶ್ ಬಂಡವಾಳ ಹೂಡಿದ್ದಾರೆ.

ರೋಮ್ಯಾಂಟಿಕ್ ಚಿತ್ರಕ್ಕೆ ಲೊಕೇಶನ್ ಫಿಕ್ಸ್

ರೋಮ್ಯಾಂಟಿಕ್ ಚಿತ್ರಕ್ಕೆ ಲೊಕೇಶನ್ ಫಿಕ್ಸ್

ತ್ರಿವಿಕ್ರಮ ಸಿನಿಮಾವನ್ನು ಚಿತ್ರೀಕರಣ ಮಾಡಲು ಅದ್ಭುತವಾದ ಲೊಕೇಶನ್ ಅನ್ನು ಹುಡುಕಿಕೊಂಡಿದೆ ಚಿತ್ರತಂಡ. ಬೆಂಗಳೂರಿನಿಂದ ಪ್ರಾರಂಭಿಸುವ ಚಿತ್ರತಂಡ ನಂತರ ದಾಂಡೇಲಿ, ರಾಜಸ್ಥಾನ್ ಮತ್ತು ಸಿಂಗಾಪುರ್ ನ ಸುಂದರ ತಾಣಗಳಲ್ಲಿ ಚಿತ್ರೀಕರಣ ಮಾಡಲಿದೆ ಚಿತ್ರತಂಡ. ಈಗಾಗಲೆ ಎಲ್ಲಾ ತಯಾರಿಗಳನ್ನು ಮಾಡಿಕೊಂಡಿರುವ ಚಿತ್ರತಂಡ ಆಗಸ್ಟ್ 10ರ ನಂತರ ಚಿತ್ರೀಕರಣಕ್ಕೆ ಹೊರಡಲಿದೆ.

More from Filmibeat

English summary
Kannada actor Vikram Ravichandran starter Trivikram will mark Akanksha Sharma. She is top model and dancer.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X