ಬಾಕ್ಸಿಂಗ್ ಅಖಾಡಕ್ಕೆ ಇಳಿದ ವಿನಯ್ ಮುಂದಿನ ಚಿತ್ರಕ್ಕೆ ಟೈಟಲ್ ಫಿಕ್ಸ್
Recommended Video
ಸ್ಯಾಂಡಲ್ ವುಡ್ ನಲ್ಲಿ ಕ್ರೀಡಾ ಅಧಾರಿತ ಚಿತ್ರಗಳ ಸಂಖ್ಯೆ ಕಡಿಮೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಕ್ರೀಡಾ ಸಿನಿಮಾಗಳ ಸಂಖ್ಯೆ ನಿಧಾನವಾಗಿ ಜಾಸ್ತಿಯಾಗುತ್ತಿದೆ. ಸದ್ಯ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡುತ್ತಿದೆ. ಈ ಚಿತ್ರದಲ್ಲಿ ಕುಸ್ತಿಯ ಜೊತೆಗೆ ಕಿಚ್ಚ ಬಾಕ್ಸರ್ ಆಗಿಯು ಮಿಂಚಿದ್ದಾರೆ.
ಇದರ ಬೆನ್ನಲ್ಲೆ ಈಗ ಮತ್ತೊಂದು ಬಾಕ್ಸಿಂಗ್ ಸಿನಿಮಾ ತಾಯಾರಾಗುತ್ತಿದೆ. ನಟ ರಾಘವೇಂದ್ರ ರಾಜ್ ಕುಮಾರ್ ಪುತ್ರ ವಿನಯ್ ರಾಜ್ ಕುಮಾರ್ ಬಾಕ್ಸಿಂಗ್ ಅಖಾಡಕ್ಕೆ ಇಳಿದ್ದಾರೆ. ವಿನಯ್ ಹೊಸ ಸಿನಿಮಾದ ಮುಹೂರ್ತ ಕೂಡ ನಡೆದಿದೆ.
ಈಗಾಗಲೆ ಚಿತ್ರೀಕರಣ ಪ್ರಾರಂಭಿಸಿರುವ ಚಿತ್ರತಂಡ ಟೈಟಲ್ ಇನ್ನು ಫೈನಲ್ ಮಾಡಿರಲಿಲ್ಲ. ಆದ್ರೀಗ ಚಿತ್ರಕ್ಕೆ 'ಟೆನ್' ಎಂದು ಹೆಸರಿಟ್ಟಿದ್ದಾರೆ. ಈ ಸಿನಿಮಾ ಸಂಪೂರ್ಣವಾಗಿ ಬಾಕ್ಸಿಂಗ್ ಸುತ್ತನೆ ಸುತ್ತುವ ಚಿತ್ರವಾಗಿದೆಯಂತೆ. ಹಾಗಾಗಿ ಟೆನ್ ಹೆಸರು ಸೂಕ್ತ ಎಂದು ಟೈಟಲ್ ಫಿಕ್ಸ್ ಮಾಡಲಾಗಿದೆಯಂತೆ.

ಬಾಕ್ಸಿಂಗ್ ನಲ್ಲಿ ಎದುರಾಳಿ ನೆಲಕ್ಕೆ ಬಿದ್ದಾಗ ರೆಫ್ರಿ 10ವರೆಗು ಕೌಂಟ್ ಮಾಡುತ್ತಾರೆ. ಅಷ್ಟರೊಳಗೆ ಬಿದ್ದ ಬಾಕ್ಸರ್ ಎದ್ದು ಕಾದಾಡಲು ಸಜ್ಜಾಗದಿದ್ದರೆ ಆತ ಸೋತಂತೆ. ಹಾಗಾಗಿ 10 ಶೀರ್ಷಿಕೆ ಇಟ್ಟಿದ್ದಾರಂತೆ. ಚಿತ್ರದಲ್ಲಿ ವಿನಯ್ ಸಂಪೂರ್ಣ ಹೊಸ ಗೆಟಪ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೆ ವಿನಯ್ ಸುಮಾರು ಐದು ತಿಂಗಳಿಂದ ಬಾಕ್ಸಿಂಗ್ ತರಬೇತಿ ಪಡೆದುಕೊಳ್ಳುತ್ತಿದ್ದಾರೆ.
ಅಂದ್ಹಾಗೆ 'ಟೆನ್' ಸಿನಿಮಾಗೆ ಕರಮ್ ಚಾವ್ಲ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಪುಷ್ಕರ್ ಮಲ್ಲಿಕಾರ್ಜನಯ್ಯ ನಿರ್ಮಾಣದಲ್ಲಿ ಚಿತ್ರ ಮೂಡಿ ಬರುತ್ತಿದೆ. 'ಟೆನ್' ಬಾಕ್ಸಿಂಗ್ ಸುತ್ತ ಸುತ್ತುವ ಚಿತ್ರವಾದರು ಲವ್ ಸ್ಟೋರಿ, ಎಮೋಷನ್ ಎಲ್ಲಾ ಚಿತ್ರದಲ್ಲಿರಲಿದೆಯಂತೆ. ವಿನಯ್ ನಾಯಕಿಯಾಗಿ ಅನುಷಾ ರಂಗನಾಥ್ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದ ಮುಂದಿನ ವರ್ಷ ತೆರೆಗೆ ಬರುವ ಸಾಧ್ಯತೆ ಇದೆ.


Click it and Unblock the Notifications











