India
  For Quick Alerts
  ALLOW NOTIFICATIONS  
  For Daily Alerts

  ನಿರ್ಮಾಪಕ ಆದ್ರು ವಿನೋದ್ ಪ್ರಭಾಕರ್, ಸಾಥ್ ಕೊಟ್ರು ನಟ ದರ್ಶನ್!

  By Bhagya.s
  |

  ಕನ್ನಡ ಸಿನಿಮಾ ರಂಗದಲ್ಲಿ ಹಿರಿಯ ನಟ ಟೈಗರ್ ಪ್ರಭಾಕರ್ ಪುತ್ರ ವಿನೋದ್ ಪ್ರಭಾಕರ್ ಹಲವು ವರ್ಷಗಳಿಂದ ಸಕ್ರಿಯವಾಗಿದ್ದಾರೆ. ಟೈಗರ್ ಪ್ರಭಾಕರ್ ಮರಿ ಟೈಗರ್ ಅಂತಲೇ ಖ್ಯಾತಿ ಪಡೆದಿರುವ ನಟ. ತಮ್ಮ ಸಿನಿಮಾ ಜರ್ನಿಯಲ್ಲಿ ಏಳುಬೀಳುಗಳನ್ನು ಕಂಡ ಟೈಗರ್ ಪ್ರಭಾಕರ್ ತಮ್ಮದೇ ಆದಂತಹ ಹವಾ ಸೃಷ್ಟಿ ಮಾಡಿದ್ದಾರೆ.

  ಹಲವು ಸಿನಿಮಾಗಳನ್ನು ಮಾಡುವ ಮೂಲಕ ಮರಿ ಟೈಗರ್ ವಿನೋದ್ ಪ್ರಭಾಕರ್ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಮಾಸ್ ಸಿನಿಮಾಗಳಿಗೆ ಹೇಳಿ ಮಾಡಿಸಿದ ಮೈಕಟ್ಟು ವಿನೋದ್ ಪ್ರಭಾಕರ್ ಅವರದ್ದು. ಸಾಲು-ಸಾಲು ಮಾಸ್ ಸಿನಿಮಾಗಳನ್ನು ಮಾಡಿ ಜನ ಮನಗೆದ್ದಿದ್ದಾರೆ ವಿನೋದ್ ಪ್ರಭಾಕರ್.

  ಇದೀಗ ತಮ್ಮ ಸಿನಿಮಾರಂಗದ ಜರ್ನಿಯಲ್ಲಿ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದಾರೆ. ವಿನೋದ್ ಪ್ರಭಾಕರ್ ನಾಯಕ ನಟ ಎನ್ನುವುದರ ಜೊತೆಗೆ ನಿರ್ಮಾಪಕನ ಪಟ್ಟವನ್ನು ಏರುತ್ತಿದ್ದಾರೆ. ಹೌದು ನಟ ವಿನೋದ್ ಪ್ರಭಾಕರ್ ನಿರ್ಮಾಪಕನಾಗಿ ಹೊಸ ನಿರ್ಮಾಣ ಸಂಸ್ಥೆಯನ್ನು ಹುಟ್ಟು ಹಾಕಲು ಮುಂದಾಗಿದ್ದಾರೆ. ಇದಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಾಥ್ ಕೊಟ್ಟಿದ್ದಾರೆ.

  ಟೈಗರ್ ಟಾಕೀಸ್ ಸ್ಥಾಪಿಸಿದ ವಿನೋದ್ ಪ್ರಭಾಕರ್!

  ಟೈಗರ್ ಟಾಕೀಸ್ ಸ್ಥಾಪಿಸಿದ ವಿನೋದ್ ಪ್ರಭಾಕರ್!

  ನಟ ವಿನೋದ್ ಪ್ರಭಾಕರ್ ತಮ್ಮದೇ ಆದಂತಹ ನಿರ್ಮಾಣ ಸಂಸ್ಥೆಯನ್ನು ಶುರು ಮಾಡುತ್ತಿದ್ದಾರೆ. ಈ ನಿರ್ಮಾಣ ಸಂಸ್ಥೆಗೆ ವಿನೋದ್ ಪ್ರಭಾಕರ್ 'ಟೈಗರ್ ಟಾಕೀಸ್' ಎನ್ನುವ ಹೆಸರನ್ನು ಇಟ್ಟಿದ್ದಾರೆ. ಸದ್ಯ ಈ ಟೈಗರ್ ಟಾಕೀಸ್ ಲೋಗೋ ಲೋಕಾರ್ಪಣೆಗೊಂಡಿದ್ದು, ಅಧಿಕೃತವಾಗಿ ಲಾಂಚ್ ಆಗಿದೆ. ತಮ್ಮ ಪತ್ನಿ ನಿಶಾ ವಿನೋದ್ ಪ್ರಭಾಕರ್ ಸಹಯೋಗದೊಂದಿಗೆ ನಿರ್ಮಾಣ ಸಂಸ್ಥೆಯನ್ನು ಸ್ಥಾಪನೆ ಮಾಡಿದ್ದಾರೆ.

  ಟೈಗರ್ ಟಾಕೀಸ್‌ನಲ್ಲಿ ಹೊಸಬರಿಗೆ ಅವಕಾಶ!

  ಟೈಗರ್ ಟಾಕೀಸ್‌ನಲ್ಲಿ ಹೊಸಬರಿಗೆ ಅವಕಾಶ!

  ಇನ್ನು ಟೈಗರ್ ಟಾಕೀಸ್‌ನಲ್ಲಿ ಸಿನಿಮಾಗಳನ್ನು ನಿರ್ಮಾಣ ಮಾಡಲಾಗುತ್ತದೆ. ವಿನೋದ್ ಪ್ರಭಾಕರ್ ತಮ್ಮ ಸಿನಿಮಾಗಳನ್ನು ಬೇರೆಯವರಿಗೆ ತಮ್ಮ ನಿರ್ಮಾಣದ ಅಡಿಯಲ್ಲಿ ಅವಕಾಶ ಮಾಡಿಕೊಡಲಿದ್ದಾರೆ. ಹಾಗಾಗಿ ಬಹುತೇಕ ಹೊಸಬರಿಗೆ ಟೈಗರ್ ಟಾಕೀಸ್ ಸಿನಿಮಾ ಆಸರೆಯಾಗಲಿ. ಈ ನಿರ್ಮಾಣ ಸಂಸ್ಥೆಯಲ್ಲಿ ಹಲವಾರು ಹೊಸ ಸಿನಿಮಾಗಳು ಕೂಡ ಮೂಡಿಬರಲಿವೆ. ಈ ಮೂಲಕ ವಿನೋದ್ ಪ್ರಭಾಕರ್ ಮತ್ತು ಅವರ ಪತ್ನಿ ನಿಶಾ ವಿನೋದ್ ಪ್ರಭಾಕರ್ ಧ್ಯೇಯವನ್ನು ಹೊಂದಿದ್ದಾರೆ.

  ಲೋಗೋ ಲಾಂಚ್ ಮಾಡಿದ ನಟ ದರ್ಶನ್!

  ಲೋಗೋ ಲಾಂಚ್ ಮಾಡಿದ ನಟ ದರ್ಶನ್!

  ನಟ ವಿನೋದ್ ಪ್ರಭಾಕರ್‌ಗೆ ದರ್ಶನ್ ಆಪ್ತ ಸ್ನೇಹಿತ. ಜೊತೆಗೆ ವೆಲ್ವಿಶರ್ ಕೂಡ. ಹಾಗಾಗಿ ವಿನೋದ್ ಪ್ರಭಾಕರ್ ಟೈಗರ್ ಟಾಕೀಸ್‌ಗೆ ನಟ ದರ್ಶನ್ ಕೂಡ ಸಾಥ್ ಕೊಟ್ಟಿದ್ದಾರೆ. ಟೈಗರ್ ಟಾಕೀಸ್ ಲೋಗೋವನ್ನು ಲಾಂಚ್ ಮಾಡುವುದರ ಮೂಲಕ ವಿನೋದ್ ಪ್ರಭಾಕರ್ ಮತ್ತು ಅವರ ಪತ್ನಿ ನಿಶಾ ಅವ್ರಿಗೆ ಶುಭಕೋರಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್. ಈ ಮೂಲಕ ವಿನೋದ್ ಪ್ರಭಾಕರ್ ಈ ಬ್ಯಾನರ್ ಅಡಿಯಲ್ಲಿ ಹೊಸಬರಿಗೆ ಹೆಚ್ಚಿನ ಅವಕಾಶ ಸಿಗಲಿ ಎಂದು ದರ್ಶನ್ ಅಪೇಕ್ಷಿಸಿದ್ದಾರೆ. ವಿಡಿಯೋ ಮೂಲಕ ಟೈಗರ್ ಟಾಕೀಸ್ ಲೋಗೊ ಲಾಂಚ್ ಮಾಡಿ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

  ಟೈಗರ್ ಪ್ರಭಾಕರ್ ನೆನೆದ ದರ್ಶನ್!

  ಟೈಗರ್ ಟಾಕೀಸ್ ಲೋಗೋ ಲಾಂಚು ವೇಳೆ ನಟ ದರ್ಶನ್ ಹಿರಿಯ ನಟ ದಿವಂಗತ ಟೈಗರ್ ಪ್ರಭಾಕರ್ ಅವರನ್ನ ನೆನಪಿಸಿಕೊಂಡಿದ್ದಾರೆ. "ನಮ್ಮ ಮನೆಯಲ್ಲಿ ಮೂರು ಜನ ಮಕ್ಕಳು ವಿನೋದ್ ಮನೆಯಲ್ಲಿ ಕೂಡ ಮೂರು ಜನ ಮಕ್ಕಳು. ಆದರೆ ನಮ್ಮ ಮನೆಯಲ್ಲಿ ಇಬ್ಬರು ಗಂಡುಮಕ್ಕಳು ಒಬ್ಬರೇ ಹೆಣ್ಣುಮಗಳು. ಅವರ ಮನೆಯಲ್ಲಿ ಇಬ್ಬರು ಹೆಣ್ಣುಮಕ್ಕಳು ಇವನೊಬ್ಬನೇ ಹುಡುಗ. ನಾವು ಚಿಕ್ಕವರಿದ್ದಾಗ ಟೈಗರ್ ಪ್ರಭಾಕರ್ ಅವರು ನಾವು ಮಲಗಿದರೂ ಕೂಡ ಬಂದು ಮುದ್ದಾಡಿ ಹೋಗುತ್ತಿದ್ದರಂತೆ. ನಾನು ಮೊದಲು ಅವರನ್ನ ನೋಡಿದ್ದು ನನ್ನ ತಂದೆ ನಿಧನ ಹೊಂದಿದಾಗ. ಎಲ್ಲರೂ ಬಂದು ಹೋದರು ಟೈಗರ್ ಪ್ರಭಾಕರ್ ಹೆಚ್ಚು ಕಾಲ ಅಲ್ಲೇ ಇದ್ದರು. ಅವರು ಬಾಸ್ ಬಾಸ್ ಎನ್ನುತ್ತಿದ್ದ ಶಬ್ಧ ಈಗಲೂ ನನ್ನ ಕಿವಿಯಲ್ಲಿ ಗುಂಯ್ ಗುಡುತ್ತಿದೆ." ಎಂದಿದ್ದಾರೆ ನಟ ದರ್ಶನ್.

  English summary
  Kannada Actor Vinod Prabhakar Become Producer, Launched New Production House Called tiger Talkies

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X