ಐಟಿ ಕಚೇರಿಗೆ ಬಂದಿದ್ದ ಕಿಚ್ಚ ಸುದೀಪ್ ಹೇಳಿದ್ದೇನು?

Recommended Video

ತಪ್ಪು ಮಾಡಿರುವುದನ್ನು ಒಪ್ಪಿಕೊಂಡ ಸುದೀಪ್..! | FILMIBEAT KANNADA

ಸ್ಯಾಂಡಲ್ ವುಡ್ ನಟ ನಿರ್ಮಾಪಕರ ಮನೆ ಮೇಲೆ ನಡೆದಿದ್ದ ಐಟಿ ದಾಳಿ ಹಿನ್ನೆಲೆ ನಟ ಸುದೀಪ್ ಇಂದು ಕ್ವೀನ್ಸ್ ರಸ್ತೆಯಲ್ಲಿರುವ ಆದಾಯ ತೆರಿಗೆ ಇಲಾಖೆ ಕಚೇರಿಗೆ ಭೇಟಿ ನೀಡಿದ್ದರು.

ಐಟಿ ಅಧಿಕಾರಿಗಳು ನೀಡಿದ್ದ ನೋಟಿಸ್ ಕಾರಣ ಸುದೀಪ್ ವಿಚಾರಣೆಗೆ ಹಾಜರಾಗಿದ್ದರು. ವಿಚಾರಣೆ ಅನ್ನೋದಕ್ಕಿಂತ ರೀ-ಕನ್ಫರ್ಮ್ಮೇಶನ್ (re confirmation) ಗಾಗಿ ಬಂದಿದ್ದರು. ಅಂದ್ರೆ, ಐಟಿ ರೇಡ್ ನಡೆದ ದಿನ ನೀಡಿರುವ ಹೇಳಿಕೆಗಳು ಸರಿಯಾಗಿದೆಯಾ ಅಥವಾ ಹೇಳಿಕೆ ಬದಲಾಗಬೇಕಾ ಎಂಬುದನ್ನ ದೃಢಿಕರೀಸಲು ಸುದೀಪ್ ಅವರಿಗೆ ತಿಳಿಸಲಾಗಿತ್ತು, ಹಾಗಾಗಿ, ಬಂದಿದ್ದರು.

ಐಟಿ ಕ‍ಚೇರಿಯಿಂದ ವಾಪಸ್ ಆದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಸುದೀಪ್ ''ಕೆಲವು ಅಳಿಲು ತಪ್ಪು ಆಗಿರಬಹುದು ಅಥವಾ ದೊಡ್ಡ ತಪ್ಪು ಆಗಿರಬಹುದು. ಯಾವುದು ಉದ್ದೇಶಪೂರ್ವಕವಾಗಿಲ್ಲ. ಅದನ್ನ ಸರಿಪಡಿಸಿಕೊಳ್ಳಬಹುದು. ಅದಕ್ಕೊಂದು ಎಚ್ಚರಿಕೆ ಅಷ್ಟೇ'' ಎಂದು ಸುದೀಪ್ ಪ್ರತಿಕ್ರಿಯಿಸಿದ್ದಾರೆ.

Kannada actor visits IT Office

''ಐಟಿ ವಿಚಾರಣೆ ಸದ್ಯಕ್ಕೆ ಮುಗಿಯುದಿಲ್ಲ. ಇನ್ನೂ 5-6 ತಿಂಗಳು ವಿಚಾರಣೆ ನಡೆಯುತ್ತದೆ. ಐಟಿ ದಾಳಿ ನಡೆದಾಗ 'ಪೈಲ್ವಾನ್' ಶೂಟಿಂಗ್ ನಡೆಯುತ್ತಿತ್ತು. ಅದನ್ನ ಬಿಟ್ಟು ಬಂದಿದ್ದೆ. ಇವತ್ತು ಕೂಡ 'ಸೈರಾ' ಶೂಟಿಂಗ್ ಇತ್ತು. ಆದರೆ ಅವರ ಬಳಿಕ ಅವಕಾಶ ಕೇಳಿಕೊಂಡು ಬಂದಿದ್ದೇನೆ. ಸದ್ಯಕ್ಕೆ ಇವತ್ತಿನ ವಿಚಾರಣೆ ಮುಗಿಯಿತು. ಅಗತ್ಯವಿದ್ದಾಗ ನಮ್ಮ ಆಡಿಟರ್ ವಿಚಾರಣೆ ಹಾಜರಾಗ್ತಾರೆ'' ಎಂದು ಸುದೀಪ್ ಹೇಳಿದರು.

ಬೇರೆ ನಟರಿಗೆ ಸಂಬಂಧಿಸಿದಂತೆ ಮಾತನಾಡಿದ ಸುದೀಪ್, ''ಸಾರ್ವಜನಿಕರ ಜೀವನದಲ್ಲಿ ಇರುವುದಿಂದ ಎಲ್ಲರು ಪ್ರಶ್ನೆ ಮಾಡುತ್ತಾರೆ. ಅವರುಗಳಿಗೆ ಏನು ಸಮಸ್ಯೆ, ಕಿರಿಕಿರಿ ಆಗಿದೆ ಗೊತ್ತಿಲ್ಲ. ಅವರ ಸ್ಥಾನದಲ್ಲಿ ನಾನು ನಿಂತು ಹೇಳಲು ಸಾಧ್ಯವಿಲ್ಲ. ನನ್ನ ಪರ ಅವರು, ಅವರ ಪರ ನಾನು ಮಾತನಾಡಲು ಆಗುವುದಿಲ್ಲ'' ಎಂದರು.

More from Filmibeat

English summary
Kannada actor kiccha sudeep visits IT Office, Bengaluru for enquiry.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X