For Quick Alerts
  ALLOW NOTIFICATIONS  
  For Daily Alerts

  ತಾಯಿಯ ತ್ಯಾಗ ನೆನೆದ ಸ್ಯಾಂಡಲ್ ವುಡ್ ಸ್ಟಾರ್ಸ್

  |

  ಇಂದು ಅಮ್ಮಂದಿರ ದಿನ. ಅಮ್ಮನಿಗೆ ಮಕ್ಕಳೇ ಎಲ್ಲ. ಅಮ್ಮನಿಲ್ಲದೆ ಮಕ್ಕಳೇ ಇಲ್ಲ. ಮಗ ಎಷ್ಟೇ ದೊಡ್ಡವನಾದರೂ, ಸಮಾಜದಲ್ಲಿ ಯಾವುದೇ ಹುದ್ದೆಯಲ್ಲಿ ಇದ್ದರೂ, ಅಮ್ಮನಿಗೆ ಆತ ಮಗನಷ್ಟೇ.

  ತಾಯಂದಿರ ದಿನ ಕನ್ನಡ ಚಿತ್ರರಂಗದ ನಟ, ನಟಿ, ನಿರ್ದೇಶಕರುಗಳು ತಮ್ಮ ತಾಯಿಯನ್ನು ನೆನೆದಿದ್ದಾರೆ. ಅವರ ಜೊತೆಗಿನ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

  ವಿಡಿಯೋ : 'ಜೋಗಿ' ಪ್ರೇಮ್ ಗಾಯನದ ತಾಯಿಯ ಹೊಸ ಹಾಡು ಕೇಳಿ ವಿಡಿಯೋ : 'ಜೋಗಿ' ಪ್ರೇಮ್ ಗಾಯನದ ತಾಯಿಯ ಹೊಸ ಹಾಡು ಕೇಳಿ

  ನಟ ಸುದೀಪ್, ಜಗ್ಗೇಶ್, ರಮೇಶ್ ಅರವಿಂದ್, ನಟಿ ಆಶಿಕಾ ರಂಗನಾಥ್ ಹರಿಪ್ರಿಯಾ ರಶ್ಮಿಕಾ ಮಂದಣ್ಣ ರಕ್ಷಿತಾ ಪ್ರೇಮ್, ನಿರ್ದೇಶಕ ರಘುರಾಮ್, ತರುಣ್ ಸುಧೀರ್, ಎಪಿ ಅರ್ಜುನ್ ಹೀಗೆ ಸಾಕಷ್ಟು ಚಿತ್ರರಂಗದ ಗಣ್ಯರು ತಮ್ಮ ತಾಯಿಗೆ ನಮನ ಸಲ್ಲಿಸಿದ್ದಾರೆ. ಮುಂದೆ ಓದಿ...

  ನಿಮ್ಮ ತ್ಯಾಗ ಕೊನೆ ಇಲ್ಲದ್ದು - ಸುದೀಪ್

  ''ಪ್ರತಿ ತಾಯಿಗೆ ತಾಯಂದಿರ ದಿನದ ಶುಭಾಶಯಗಳು. ನಿಮ್ಮ ಪ್ರೀತಿ ಹಾಗೂ ನಿಮ್ಮ ತ್ಯಾಗ ಎಂದಿಗೂ ಕೊನೆ ಇಲ್ಲದ್ದು. ಹ್ಯಾಪಿ ಮದರ್ಸ್ ಡೇ ಟು ಯು ಅಮ್ಮ'' ಎಂದು ನಟ ಕಿಚ್ಚ ಸುದೀಪ್ ತಮ್ಮ ತಾಯಿ ಹಾಗೂ ಎಲ್ಲ ತಾಯಂದಿರಿಗೆ ಶುಭಾಶಯವನ್ನು ತಿಳಿಸಿದ್ದಾರೆ.

  ಪರಿಸರದಲ್ಲಿ ಲೀನವಾಗುವ ದೇವರು - ಜಗ್ಗೇಶ್

  ''ಉದರದಲ್ಲಿ ಬಚ್ಚಿಟ್ಟು ನವಮಾಸ ಉಳಿಸಿ ರಕ್ತ ಉಸಿರು ಜೀವ ದೇಣಿಗೆ ನೀಡಿ! ತನ್ನದೆಲ್ಲಾ ತ್ಯಾಗ ಮಾಡಿ ಭಜದೆತ್ತರದ ನೆರಳು ನೀಡುವ ಮರವಾಗಿ ಬೆಳಸಿ! ಪರರು ಆ ಮರದ ನೆರಳು ಆಶ್ರಯಿಸಿ ಕೂತರು ಯಾವ ನೋವು ತೋರ್ಪಡಿಸದೆ ತನ್ನದು ಪರರ ಪಾಲಾದರು ಶುಭ ಹಾರೈಸುವ ತ್ಯಾಗಿ ಒಬ್ಬಳೆ ಅಮ್ಮ ವಂಶಕ್ಕೆ ಬೆಳಕು ನೀಡಿ ತಾನು ಕರಗಿ ಪರಿಸರದಲ್ಲಿ ಲೀನವಾಗುವ ದೇವರು.'' - ಜಗ್ಗೇಶ್, ನಟ

  ತಾಯಿ ಬಗ್ಗೆ ಇದುವರೆಗೆ ಕಾಯ್ಕಿಣಿ ಹಾಡು ಬರೆದಿಲ್ಲ, ಯಾಕೆ? ತಾಯಿ ಬಗ್ಗೆ ಇದುವರೆಗೆ ಕಾಯ್ಕಿಣಿ ಹಾಡು ಬರೆದಿಲ್ಲ, ಯಾಕೆ?

  ನನ್ನ ಸಾಧನೆಗೆ ಕಾರಣ ತಾಯಿ, ತಂದೆ - ರಮೇಶ್

  ''ನಾನು ಇಂದು ಏನಾಗಿದ್ದೇನೇ ಅದು ನನ್ನ ತಂದೆ ಮತ್ತು ತಾಯಿಯಿಂದ. ಹ್ಯಾಪಿ ಮದರ್ಸ್ ಡೇ.'' ಎಂದು ಹೇಳುವ ಮೂಲಕ ನಟ ರಮೇಶ್ ಅರವಿಂದ್ ತಮ್ಮ ಸಾಧನೆಗೆ ಕಾರಣವಾದ ತಾಯಿ ಹಾಗೂ ತಂದೆಯನ್ನು ನೆನೆದಿದ್ದಾರೆ.

  ತಾಯಿಯ ಜೊತೆ ಆಶಿಕಾ ರಂಗನಾಥ್

  ನಟಿ ಆಶಿಕಾ ರಂಗನಾಥ್ ತಮ್ಮ ತಾಯಿಯ ಜೊತೆಗಿನ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ತಮ್ಮ ತಾಯಿ ಹಾಗೂ ಎಲ್ಲ ತಾಯಂದಿರಿಗೆ ಶುಭಾಶಯವನ್ನು ತಿಳಿಸಿದ್ದಾರೆ.

  ಹ್ಯಾಪಿ ಮದರ್ಸ್ ಡೇ ಅಮ್ಮ - ಹರಿಪ್ರಿಯಾ

  ''ಹ್ಯಾಪಿ ಮದರ್ಸ್ ಡೇ ಅಮ್ಮ. ತಾಯಿಯ ಪ್ರೀತಿಯನ್ನು ವಿವರಿಸಲು ಪದಗಳು ಸಾಲುವುದಿಲ್ಲ. ಎಲ್ಲ ತಾಯಿಯರಿಗೂ ತಾಯಂದಿರ ದಿನಾಚರಣೆಯ ಶುಭಾಶಯಗಳು'' ಎಂದು ನಟಿ ಹರಿಪ್ರಿಯಾ ವಿಶ್ ಮಾಡಿದ್ದಾರೆ.

  ರಕ್ಷಿಸಿ, ಪರಿಚಯಿಸಿ, ದಂಡಿಸಿ, ಪ್ರೋತ್ಸಾಹಿಸಿದ ತಾಯಿ - ರಘುರಾಮ್

  ''ತನ್ನ ಗರ್ಭ ಗುಡಿಯಲ್ಲಿ ನನ್ನ ರಕ್ಷಿಸಿ, ಈ ಸುಂದರಲೋಕವನ್ನು ಪರಿಚಯಿಸಿ, ತಪ್ಪು ಮಾಡಿದಾಗ ದಂಡಿಸಿ, ನಾನು ಸೋತಾಗ ಪ್ರೋತ್ಸಾಹಿಸಿ, ನನಗೆ ಸದಾ ಒಳ್ಳೆಯದನ್ನೆ ಬಯಸಿ ,ಈಗ ನನನ್ನು ಏಕಾಂಗಿಯಾಗಿಸಿ ನನ್ನ ಮಕ್ಕಳಲ್ಲಿ ಅವರನ್ನ ನೋಡುವ ಹಾಗೆ ಮಾಡಿರುವ ನನ್ನ ಅಮ್ಮನಿಗೆ ಹಾಗು ವಿಶ್ವದ ಎಲ್ಲಾ ತಾಯಂದರಿಗೆ ಹ್ಯಾಪಿ ಮದರ್ಸ್ ಡೇ.'' - ರಘುರಾಮ್, ನಿರ್ದೇಶಕ

  ತಾಯಿಯನ್ನು ನೆನೆದ ತರುಣ್, ರಕ್ಷಿತಾ

  ''ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಮಹಿಳೆ ಇರುತ್ತಾಳೆ. ನನ್ನ ಜೀವನದಲ್ಲಿ ಅದು ನನ್ನ ತಾಯಿ ಆಗಿದ್ದಾಳೆ'' ಎಂದು ನಿರ್ದೇಶಕ ತರುಣ್ ಸುಧೀರ್,ತಮ್ಮ ತಾಯಿ ಜೊತೆಗಿನ ಫೋಟೋವನ್ನು ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನಟಿ ರಕ್ಷಿತಾ ಪ್ರೇಮ್ ಸಹ ತಮ್ಮ ತಾಯಿಯ ಫೋಟೋವನ್ನು ಹಂಚಿಕೊಳ್ಳುವ ಮೂಲಕ ತಮ್ಮ ತಾಯಿಗೆ ವಿಶ್ ಮಾಡಿದ್ದಾರೆ.

  English summary
  Mothers day 2019 : Kannada actor wishes for mothers day.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X