ಪದ್ಯ ಓದುವ ಸವಾಲ್ ಎಸೆದ ರಾಕಿಂಗ್ ಸ್ಟಾರ್ ಯಶ್

Recommended Video

Yash accept poem reading challenge | FILMIBEAT KANNADA

ಸವಾಲ್ ಎಸೆಯುವ ವಿಚಾರದಲ್ಲಿ ಸ್ಟಾರ್ ನಟರು ಆಗಾಗ ಸುದ್ದಿಯಾಗುತ್ತಿರುತ್ತಾರೆ. ಇತ್ತೀಚಿಗೆ ಫಿಟ್ ನೆಸ್ ಚಾಲೆಂಜ್, ಬಾಟಲ್ ಕ್ಯಾಪ್ ಚಾಲೆಂಜ್ ಹೀಗೆ ಸಾಕಷ್ಟು ಚಾಲೆಂಜ್ ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ರಾಕಿಂಗ್ ಸ್ಟಾರ್ ಕಡೆಯಿಂದ ಈಗ ಹೊಸ ಚಾಲೆಂಜ್ ಶುರುವಾಗಿದೆ.

ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಸಾಮಾಜಿಕ ಜಾಲತಾಣದಲ್ಲಿ ಪದ್ಯ ಅಥವಾ ಕವನ ಓದುವ ಸವಾಲಿನ ಅಭಿಯಾನದಲ್ಲಿ ರಾಕಿಂಗ್ ಸ್ಟಾರ್ ಯಶ್ ಭಾಗಿಯಾಗಿದ್ದಾರೆ. ಹಿರಿಯ ಪತ್ರಕರ್ತರೊಬ್ಬರು ಹಾಕಿದ ಸವಾಲ್ ಸ್ವೀಕರಿಸಿ ಯಶ್ ಪದ್ಯ ಓದಿದ್ದಾರೆ. ಯಶ್ ಅವರಿಗೆ ತುಂಬ ಇಷ್ಟವಾದ ಕುವೆಂಪು ಅವರ ಪದ್ಯ ಓದಿದ್ದಾರೆ.

Kannada Actor Yash Accept Poem Reading Challenge

ರಾಷ್ಟ್ರ ಕವಿ ಕುವೆಂಪು ಅವರ ವಿಶ್ವ ಮಾನವ ಸಂದೇಶ ಸಾರಿರುವ ಅನಿಕೇತನ ಪದ್ಯವನ್ನು ಓದಿ ತಮ್ಮ ಫೇಸ್ ಬುಕ್ ನಲ್ಲಿ ಅಪ್ ಲೋಡ್ ಮಾಡಿದ್ದಾರೆ. ಈ ಸವಾಲ್ ಸ್ವೀಕರಿಸುವಂತೆ. ಯಶ್ ಗುರುಗಳಾದ ನಾಗಾಭರಣ, ಸಾಹಿತಿಗಳಾದ ಡಾ.ವಿ ನಾಗೇಂದ್ರ ಪ್ರಸಾದ್, ಗೌಸ್ ಪೀಸ್ ಮತ್ತು ಕಾಮಿಡಿ ನಟರಾದ ಚಿಕ್ಕಣ್ಣ ಹಾಗೂ ರವಿಶಂಕರ್ ಗೌಡ ಮತ್ತು ಅರುಮುಗಂ ರವಿಶಂಕರ್ ಅವರಿಗೆ ಪದ್ಯ ಓದುವ ಸವಾಲ್ ನೀಡಿದ್ದಾರೆ.

ನವೆಂಬರ್ ತಿಂಗಳು ಅಂದರೆ ಕನ್ನಡದ ಹಬ್ಬ. ಕನ್ನಡಿಗರು ಹೆಮ್ಮೆಯಿಂದ ಆಚರಿಸುವ ಹಬ್ಬ. ಈ ಬಾರಿ ಕನ್ನಡ ರಾಜ್ಯೋತ್ಸವವನ್ನು ಮತ್ತಷ್ಟು ವಿಶಿಷ್ಟವಾಗಿ ಆಚರಿಸಲು ಸ್ಯಾಂಡಲ್ ವುಡ್ ಸ್ಟಾರ್ ಸಿದ್ಧರಾಗಿದ್ದಾರೆ. ಇಷ್ಟವಾದ ಪದ್ಯವನ್ನು ಓದಿ ಇನ್ನೊಬ್ಬರಿಗೆ ಸವಾಲ್ ಎಸೆಯುವ ಅಭಿಯಾನ ಇದಾಗಿದೆ. ಕನ್ನಡದ ಈ ಸವಾಲ್ ಎಸೆಯುವ ಅಭಿಯಾನ ಎಷ್ಟರ ಮಟ್ಟಿಗೆ ಸದ್ದು ಮಾಡಲಿದೆ ಎನ್ನುವ ಕುತೂಹಲ ಮೂಡಿಸಿದೆ.

More from Filmibeat

English summary
Kannada actor Yash accept poem reading challenge and challenge to V Nagendra Prasad, Nagabharana.
Read more about: yash ಯಶ್
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X