ಅಂದು ಯಶ್ ಹೇಳಿದ್ದ ಒಂದೊಂದು ಮಾತು ಇಂದು ನಿಜ ಆಗ್ತಿದೆ.!

Recommended Video

ಅಂದು ಯಶ್ ಹೇಳಿದ್ದ ಒಂದೊಂದು ಮಾತು ಇಂದು ನಿಜ ಆಗ್ತಿದೆ..! | FILMIBEAT KANNADA

ರಾಕಿಂಗ್ ಸ್ಟಾರ್ ಯಶ್ ಇಂದು ನ್ಯಾಷನಲ್ ಸ್ಟಾರ್ ಆಗಿ ಮಿಂಚ್ತಿದ್ದಾರೆ. ಹಿಂದಿ, ತೆಲುಗು, ತಮಿಳು ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದಾರೆ. ಕೆಜಿಎಫ್ ಎಂಬ ದೊಡ್ಡ ಸಿನಿಮಾ ಮಾಡಿ, ಇಡೀ ಭಾರತವೇ ಕನ್ನಡ ಚಿತ್ರರಂಗದ ಕಡೆ ನೋಡುವಂತೆ ಮಾಡಿದ್ದಾರೆ.

ಯಶ್ ಅಭಿನಯದ ಕೆಜಿಎಫ್ ಚಿತ್ರದ ಬರಿ ಟ್ರೈಲರ್ ನೋಡಿಯೇ ಪರಭಾಷಿಗರು ವಾವ್ ಎಂದು ನೋಡುವಂತಾಗಿದೆ. 'ಯಾರು ಇದು ಯಶ್' ಎಂದು ಗೂಗಲ್ ನಲ್ಲಿ ಹುಡುಕುತ್ತಿದ್ದಾರೆ. ಅಂತವರಿಗೆಲ್ಲಾ ಸ್ವತ ಯಶ್ ಅವರೇ 'ದಿ ನೇಮ್ ಈಸ್ ಯಶ್, ಐ ಯಾಮ್ ಫ್ರಮ್ ಕರ್ನಾಟಕ' ಎಂದು ಹೆಮ್ಮೆಯಿಂದ ಹೇಳುತ್ತಿದ್ದಾರೆ.

ಚಿತ್ರರಂಗಕ್ಕೆ ಬಂದಾಗನಿಂದಲೂ ಯಶ್ ಅವರಲ್ಲಿ ಒಂದು ಛಲ, ಒಂದು ಗುರಿ. ಇಡೀ ಭಾರತ ಮಾತ್ರವಲ್ಲ ಜಗತ್ತು ನಮ್ಮ ಕನ್ನಡ ಚಿತ್ರರಂಗದತ್ತ ನೋಡುವಂತೆ ಮಾಡಬೇಕು. 'ಇದು ಜಸ್ಟ್ ಬಿಗಿನಿಂಗ್' ಎಂದು 2015ರ ಸೈಮಾ ಅವಾರ್ಡ್ ಸಮಾರಂಭದಲ್ಲಿ ಪ್ರಶಸ್ತಿ ಪಡೆದಾಗ ಹೇಳಿದ್ದರು. ಹೀಗೆ, ಯಶ್ ಹೇಳಿದ ಒಂದೊಂದು ಡೈಲಾಗ್ ಗಳು ಕೂಡ ಇಂದಿನ ಸಂದರ್ಭಕ್ಕೆ ಸೂಕ್ತವಾಗಿದೆ. ಅದರಲ್ಲಿ ಕೆಲವನ್ನ ನೋಡೋಣ. ಮುಂದೆ ಓದಿ.....

ಹವಾ ಅಂದ್ರೆ ಇದೇ ಇರ್ಬೇಕು

ಹವಾ ಅಂದ್ರೆ ಇದೇ ಇರ್ಬೇಕು

''ನಾನು ಬರೋವರ್ಗು ಮಾತ್ರ ಬೇರೆಯವರ ಹವಾ, ನಾನು ಬಂದ್ಮೇಲೆ ನಂದೆ ಹವಾ''. ಈ ಡೈಲಾಗ್ ಯಶ್ ವೃತ್ತಿ ಜೀವನವನ್ನೇ ಬದಲಿಸಿತು ಅಂದ್ರೆ ತಪ್ಪಾಗಲಾರದು. ಅಂದು ಈ ಡೈಲಾಗ್ ವಿರುದ್ಧ ಅನೇಕರು ಕಿಡಿಕಾರಿದ್ದರು. ಆದ್ರೆ, ಇಂದು ಈ ಡೈಲಾಗ್ ಆಗ ಹೇಳಿದ್ದು ಈಗ ಸಾರ್ಥಕವಾಗಿದೆ ಎನ್ನುವಂತಾಗಿದೆ. ಹೌದು, ಕನ್ನಡ ಸಿನಿಮಾದ ತಾಕತ್ತನ್ನ ಬೇರೆ ಇಂಡಸ್ಟ್ರಿಗೆ ಪರಿಚಯ ಮಾಡಿಸೋಕೆ ಯಶ್ ಮತ್ತು ಕೆಜಿಎಫ್ ಒಂದು ರೀತಿ ಮೆಟ್ಟಿಲಾದರು.

ಹೀರೋಗಳನ್ನ ಯಾರೂ ಹುಟ್ಟಾಕಲ್ಲ

ಹೀರೋಗಳನ್ನ ಯಾರೂ ಹುಟ್ಟಾಕಲ್ಲ

'ಅಣ್ತಮ್ಮ ಇಲ್ಲಿ ಹೀರೋಗಳನ್ನ ಯಾರೂ ಹುಟ್ಟಾಕಲ್ಲ. ನಮಗೆ ನಾವೇ ಹೀರೋ ಆಗ್ಬೇಕು'...ರಾಜಾಹುಲಿ ಚಿತ್ರದ ಫೇಮಸ್ ಡೈಲಾಗ್ ಇದು. ಈ ಡೈಲಾಗ್ ಈಗ ಬಾಲಿವುಡ್ ಗೆ ಸೂಕ್ತವಾಗುತ್ತೆ. ತಾನು ಪಟ್ಟ ಕಷ್ಟ, ಪರಿಶ್ರಮ ಈಗ ಬಾಲಿವುಡ್ ಗೆ ಕರೆದುಕೊಂಡು ಹೋಗಿದೆ. ತಮಗೆ ತಾವೇ 'ಹೀರೋ' ಆಗಲು ಹೊರಟಿದ್ದಾರೆ. ಅದಕ್ಕೆ ಜಯ ಸಿಗಲಿ ಎಂದಷ್ಟೇ ಹಾರೈಸಿಬೇಕಿದೆ.

ಸಲಾಂ ರಾಕಿ ಭಾಯ್

ಸಲಾಂ ರಾಕಿ ಭಾಯ್

''ಕಾಟನ್ ಪೇಟೆ ಹುಡುಗ್ರು ಕಿಲಾಡಿ ಅಂತಾರೆ, ಕತ್ರಿಗುಪ್ಪೆ ಹುಡುಗ್ರು ಕಿಂಗ್ ಅಂತಾರೆ, ಶಿವಾಜಿನಗರ ಹುಡುಗ್ರು ಭಾಯ್ ಅಂತಾರೆ, ಬಸವೇಶ್ವರನಗರದ ಹುಡುಗ್ರು ಬಾಸು ಅಂತಾರೆ'' ಎಂದು ಮಾಸ್ಟರ್ ಪೀಸ್ ನಲ್ಲಿ ಯಶ್ ಡೈಲಾಗ್ ಹೊಡೆದಿದ್ದರು. ಇದೀಗ, ಇಡೀ ಸೌತ್ ಇಂಡಸ್ಟ್ರಿ 'ಸಲಾಂ ರಾಕಿ ಭಾಯ್' ಎನ್ನುತ್ತಿದೆ.

ನಮ್ಮನ್ನ ಕಂಡು ಉರ್ಕೋಳ್ರೋ ಒಬ್ರಾ ಇಬ್ರಾ?

ನಮ್ಮನ್ನ ಕಂಡು ಉರ್ಕೋಳ್ರೋ ಒಬ್ರಾ ಇಬ್ರಾ?

''ನಮ್ಮನ್ನ ಕಂಡು ಉರ್ಕೋಳ್ರೋ ಒಬ್ರಾ ಇಬ್ರಾ? ದುಷ್ಮನ್ ಕಹಾ ಹೈ ಅಂದ್ರೆ ಊರ್ ತುಂಬಾ ಹೈ'' ಮಾಸ್ಟರ್ ಪೀಸ್ ಚಿತ್ರದ ಇನ್ನೊಂದು ಡೈಲಾಗ್ ಇದು. ಈ ಡೈಲಾಗ್ ನಂತೆ ಯಶ್ ಹಾಗೂ ಅವರ ಸಿನಿಮಾಗಳನ್ನ ಕಾಲೆಳೆಯುವ ವರ್ಗ ಇದ್ದೇ ಇರುತ್ತೆ. ಈಗಲೂ ಕೆಜಿಎಫ್ ಎಂಬ ಕನ್ನಡ ಸಿನಿಮಾ ಭಾರತದಲ್ಲಿ ಸದ್ದು ಮಾಡುತ್ತಿದೆ. ಹೀಗಿದ್ದರೂ ಸಣ್ಣ ಪುಟ್ಟ ವಿಷ್ಯಗಳಿಗೆ ಕೆಲವರು ವಿರೋಧ ವ್ಯಕ್ತಪಡಿಸ್ತಾರೆ.

ಇನ್ನೊಂದು ಲವೆಲ್ ಗೆ ಕರೆಕೊಂಡು ಹೋಗ್ಬೇಕು

ಇನ್ನೊಂದು ಲವೆಲ್ ಗೆ ಕರೆಕೊಂಡು ಹೋಗ್ಬೇಕು

ಇಷ್ಟೆಲ್ಲಾ ಡೈಲಾಗ್ ಗಳ ಜೊತೆ 2015ರಲ್ಲಿ ಸೈಮಾ ಸಮಾರಂಭದಲ್ಲಿ ಯಶ್ ಹೇಳುತ್ತಿದ್ದ ಮಾತು ಒಂದೇ. 'ಕನ್ನಡ ಇಂಡಸ್ಟ್ರಿಯನ್ನ ಇನ್ನೊಂದು ಲವೆಲ್ ಗೆ ಕರೆದುಕೊಂಡು ಹೋಗ್ಬೇಕು, ಹೋಗ್ತೀನಿ. ಇದು ಜಸ್ಟ್ ಬಿಗಿನಿಂಗ್' ಎಂದಿದ್ದರು. ಅಂದು ಯಶ್ ಹೇಳಿದ ಮಾತು ಈಗ ಆಲ್ ಮೋಸ್ಟ್ ನೆರವೇರಿದೆ. ಕೆಜಿಎಫ್ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಭಾವುಟವನ್ನ ಗಡಿಯಾಚೆ ಹಾರಿಸುತ್ತಿದ್ದಾರೆ.

More from Filmibeat

English summary
Kannada actor, rocking star yash achieved his goal what he told in siima 2015.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X