For Quick Alerts
  ALLOW NOTIFICATIONS  
  For Daily Alerts

  ಗಣರಾಜ್ಯೋತ್ಸವಕ್ಕೆ ದರ್ಶನ್-ಯಶ್ ಶುಭಕೋರಿದ್ದು ಹೀಗೆ?

  |
  ದರ್ಶನ್, ಯಶ್ ದೇಶದ ಜನತೆಗೆ ಹೇಗೆ ಶುಭ ಕೋರಿದ್ರು ನೋಡಿ | FILMIBEAT KANNADA

  ಇಂದು ದೇಶದಾದ್ಯಂತ 71ನೇ ಗಣರಾಜೋತ್ಸವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣಗಳ ಮೂಲಕ ದೇಶಪ್ರೇಮದ ಶುಭಾಶಯ ತಿಳಿಸುತ್ತಿದ್ದಾರೆ. ಸಾಕಷ್ಟು ಮಂದಿ ಟ್ವಿಟ್ಟರ್ ನಲ್ಲಿ ದೇಶಪ್ರೇಮ ಸಾರಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ರಾಕಿಂಗ್ ಸ್ಟಾರ್ ಇಬ್ಬರು ಸಾಮಾಜಿಕ ಜಾಲತಾಣದಲ್ಲಿ ದೇಶದ ಜನತೆಗೆ ಶುಭಕೋರಿದ್ದಾರೆ.

  ನಟ ದರ್ಶನ್ ಪ್ರಕೃತಿ ಸೌಂದರ್ಯದ ಮುಧ್ಯೆ ಕ್ಯಾಮರಾ ಹಿಡಿದು ಕುಳಿತಿರುವ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಟ್ವಿಟ್ಟರ್ ನಲ್ಲಿ ಶುಭಕೋರಿದ್ದಾರೆ. ವೈಲ್ಡ್ ಲೈಫ್ ಫೋಟೋಗ್ರಫಿ ಮಾಡುತ್ತಿರುವ ಫೋಟೋ ಇದಾಗಿದೆ. "ಎಲ್ಲರಿಗೂ ಗಣರಾಜ್ಯೋತ್ಸವದ ಹಾರ್ಧಿಕ ಶುಭಾಶಯಗಳು" ಎಂದಿದ್ದಾರೆ.

  'ರಾಬರ್ಟ್'ನಲ್ಲಿ ಮೈಸೂರು ಹುಡುಗಿ: ಯಾರೀ ಸುಂದರಿ?'ರಾಬರ್ಟ್'ನಲ್ಲಿ ಮೈಸೂರು ಹುಡುಗಿ: ಯಾರೀ ಸುಂದರಿ?

  ಇನ್ನು ರಾಕಿಂಗ್ ಸ್ಟಾರ್ ಯಶ್ ಕೂಡ ಸಾಮಾಜಿಕ ಜಾಲತಾಣದಲ್ಲಿ ಶುಭಕೋರಿದ್ದಾರೆ. ಮಹಾತ್ಮಗಾಂಧಿ ಅವರ ಸಾಲುಗಳನ್ನು ಬರೆದು ಶುಭಕೋರಿದ್ದಾರೆ. "ಒಂದು ದೇಶದ ಸಂಸ್ಕೃತಿ ಆ ದೇಶದ ಜನರ ಹೃದಯ ಹಾಗೂ ಆತ್ಮದಲ್ಲಿ ನೆಲೆಸಿದೆ" ಎಂದು ಹೇಳಿದ್ದಾರೆ.

  ಜೊತೆಗೆ "ಮುಂದೆ ಸಾಗುತ್ತಲೆ ಇರಿ, ದೇಶಕ್ಕಾಗಿ ನಿಮ್ಮ ಕಾರ್ಯವನ್ನು ಮಾಡುವ ಮೂಲಕ ಗಣರಾಜ್ಯವನ್ನು ಬಲಪಡಿಸಲು ಬದ್ದರಾಗಿರಿ, ಜೈ ಹಿಂದ್" ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಗಣರಾಜ್ಯ ದಿನದ ಶುಭಾಶಯಗಳು ಎಂದು ಫೋಟೋವನ್ನು ಶೇರ್ ಮಾಡಿದ್ದಾರೆ.

  Kannada Actor Yash And Darshan Are Wishes For Republic Day

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದ್ಯ ರಾಬರ್ಟ್ ಚಿತ್ರದ ಚಿತ್ರೀಕರಣ ಮುಗಿಸಿ ರಾಜವೀರ ಮದಕರಿ ನಾಯಕ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಇನ್ನು ರಾಕಿ ಭಾಯ್ ಸದ್ಯ ಕೆಜಿಎಫ್-2 ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

  English summary
  Kannada Actor Yash and Darshan are wishes for Republic Day. India celebrating 71st Republic Day.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X