ವರ್ಷಗಳ ಬಳಿಕ ಶಾಪಿಂಗ್ ಹೊರಟ ರಾಕಿಂಗ್ ಸ್ಟಾರ್ ಯಶ್ ದಂಪತಿ

Recommended Video

ಮಗಳಿಗಾಗಿ ಶಾಪಿಂಗ್ ಮಾಡಲು ನಿಂತ ರಾಕಿಂಗ್ ದಂಪತಿ | Yash | FILMIBEAT KANNADA

ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ದಂಪತಿ ಈಗ ಶಾಪಿಂಗ್ ಮೂಡ್ ನಲ್ಲಿ ಇದ್ದಾರೆ. ಅಂದ್ಹಾಗೆ ಅವರು ಅವರಿಗಾಗಿ ಶಾಪಿಂಗ್ ಮಾಡುತ್ತಿಲ್ಲ. ಬದಲಿಗೆ ರಾಕಿಂಗ್ ದಂಪತಿಯ ಮುದ್ದಿನ ಮಗಳು ಆಯಿರಾಗಾಗಿ ಯಶ್ ಮತ್ತು ರಾಧಿಕಾ ಶಾಪಿಂಗ್ ಮಾಡುತ್ತಿದ್ದಾರೆ.

ಆಯಿರಾಗೆ ಈಗ ಒಂದು ವರ್ಷ ತುಂಬುತ್ತಿದೆ. ಅಪ್ಪ-ಅಮ್ಮನಂತೆ ಮಗಳು ಸಹ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಫೇಮಸ್ ಆಗಿದ್ದಾಳೆ. ಆಯಿರಾಳ ಒಂದು ಫೋಟೋ ಅಪ್ ಲೋಡ್ ಮಾಡಿದರೆ ಸಾಕು ಕ್ಷಣಾರ್ಧದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿ ಬಿಡುತ್ತೆ.

ಮೊನ್ನೆ ಮೊನ್ನೆಯಷ್ಟೆ ಅಪ್ಪ ಯಶ್ ಜೊತೆ ಸೇರಿ ಕರ್ನಾಟಕ ಜನತೆಗೆ ಹಾಯ್ ಹೇಳಿದ್ದರು ಆಯಿರಾ. ಯಶ್ ಮತ್ತು ರಾಧಿಕಾ ಅಟಿಕೆ ಸಾಮಾನು ಕೊಂಡುಕೊಳ್ಳುವಲ್ಲಿ ಬ್ಯುಸಿಯಾಗಿದ್ದಾರೆ. ಈ ಖುಷಿಯನ್ನು ರಾಧಿಕಾ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

Kannada Actor Yash And Radhika Pandit Purchased Toy For Daughter

"ನಾವು ನಮಗಾಗಿ ಶಾಪಿಂಗ್ ಮಾಡಲು ಹೋಗಿ ವರ್ಷಗಳೇ ಕಳೆದಿವೆ. ಆದ್ರೀಗ ಆಯಿರಾಗಾಗಿ ಆಟಿಕೆಕೊಂಡುಕೊಳ್ಳಲು ಮಾಲ್ ಗೆ ಬಂದಿದ್ದೀವಿ. ಜೀವನ ಹೇಗೆ ಬದಲಾಗುತ್ತೆ. ನಾವು ಆಟಿಕೆ ಶಾಪ್ ನಲ್ಲಿ ಎಂಜಾಯ್ ಮಾಡಿದೆವು. ಅವರು ನಮಗೆ ಮನರಂಜನೆ ನೀಡಿದರು" ಎಂದು ಬರೆದುಕೊಂಡಿದ್ದಾರೆ.

ಯಶ್ ಮತ್ತು ರಾಧಿಕಾ ಇಬ್ಬರು ಆಟಿಕೆಯನ್ನು ಆಯ್ಕೆ ಮಾಡುತ್ತಿರುವ ಫೋಟೋವನ್ನು ಅಪ್ ಲೋಡ್ ಮಾಡಿದ್ದಾರೆ. ಈ ಫೋಟೋಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಲೈಕ್ಸ್ ಹರಿದುಬಂದಿದೆ. ರಾಧಿಕಾ ದಂಪತಿ ಸದ್ಯ ಎರಡನೆ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ.

More from Filmibeat

English summary
Kannada actor yash and Radhika Pandit purchased toy for daughter.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X