For Quick Alerts
  ALLOW NOTIFICATIONS  
  For Daily Alerts

  ಅನೇಕ ದಿನಗಳ ಬಳಿಕ ಚಿತ್ರೀಕರಣಕ್ಕೆ ಮರಳಿದ ರಾಕಿ ಭಾಯ್ ಯಶ್

  |

  ನ್ಯಾಷನಲ್ ಸ್ಟಾರ್ ರಾಕಿ ಭಾಯ್ ಯಶ್ ಅನೇಕ ದಿನಗಳ ನಂತರ ಮತ್ತೆ ಬಹು ನಿರೀಕ್ಷೆಯ 'ಕೆಜಿಎಫ್-2 'ಚಿತ್ರೀಕರಣಕ್ಕೆ ಮರಳಿದ್ದಾರೆ. ರಾಕಿಂಗ್ ಸ್ಟಾರ್ ಅನೇಕ ದಿನಗಳಿಂದ ಚಿತ್ರೀಕರಣಕ್ಕೆ ರಜೆ ಹಾಕಿದ್ದರು. ಎರಡನೆ ಮಗುವಿಗೆ ತಂದೆಯಾದ ಯಶ್ ಈಗ ಸಂತದಿಂದ ಮತ್ತೆ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.

  'ಕೆಜಿಎಫ್ 2' ಬಗ್ಗೆ ಅಭಿಮಾನಿಗಳಿಗೆ ಯಶ್ ಮನವಿ'ಕೆಜಿಎಫ್ 2' ಬಗ್ಗೆ ಅಭಿಮಾನಿಗಳಿಗೆ ಯಶ್ ಮನವಿ

  ಗರ್ಭಿಣಿ ಪತ್ನಿ ಮತ್ತು ಮಗಳ ಜೊತೆ ಸಮಯ ಕಳೆಯಲು ಯಶ್ ಈ ಬಾರಿ ಕೆಜಿಎಫ್ ಚಿತ್ರೀಕರಣದಿಂದ ಕೊಂಚ ಬ್ರೇಕ್ ಪಡೆದಿದ್ದರು. ಕಳೆದ ಬಾರಿ ರಾಧಿಕಾ ಮೊದಲ ಮಗುವಿಗೆ ಜನ್ಮ ನೀಡುವ ಸಮಯದಲ್ಲಿ ಯಶ್ ಕೆಜಿಎಫ್ ಮೊದಲ ಭಾಗದ ರಿಲೀಸ್ ನಲ್ಲಿ ಬ್ಯುಸಿಯಾಗಿದ್ದರು. ಹಾಗಾಗಿ ರಾಧಿಕಾಗೆ ಹೆಚ್ಚು ಸಮಯ ಕೊಡಲು ಸಾಧ್ಯವಾಗಿರಲಿಲ್ಲ. ಈ ಬಾರಿ ಚಿತ್ರೀಕರಣಕ್ಕೆ ರಜೆ ಹಾಕಿ ಪತ್ನಿಯ ಜೊತೆ ಸಮಯ ಕಳೆದಿದ್ದಾರೆ.

  ಹುಟ್ಟುಹಬ್ಬ ಮುಗಿಸಿ ಚಿತ್ರೀಕರಣಕ್ಕೆ ಯಶ್

  ಹುಟ್ಟುಹಬ್ಬ ಮುಗಿಸಿ ಚಿತ್ರೀಕರಣಕ್ಕೆ ಯಶ್

  ಅಕ್ಟೋಬರ್ ತಿಂಗಳಲ್ಲಿ ರಾಧಿಕಾ ಪಂಡಿತ್ ಎರಡನೆ ಮಗುವಿಗೆ ಜನ್ಮ ನೀಡಿದ್ದಾರೆ. ಎರಡನೇ ಮಗುವಿನ ಆಗಮನದ ಸಂಸದಲ್ಲಿ ಇರುವ ಯಶ್ ದಂಪತಿ ಜೊತೆಗೆ ಮೊದಲ ಮಗುವಿನ ಮೊದಲ ವರ್ಷದ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿದ್ದಾರೆ. ಇತ್ತೀಚಿಗಷ್ಟೆ ಅದ್ದೂರಿಯಾಗಿ ನಡೆದ ಐರಾ ಯಶ್ ಹುಟ್ಟುಹಬ್ಬಕ್ಕೆ ಇಡೀ ಸ್ಯಾಂಡಲ್ ವುಡ್ ಭಾಗಿಯಾಗಿತ್ತು.

  ಬಾಂಗ್ಲಾದೇಶ ಅಭಿಮಾನಿಯ ಈ ಕಾಮೆಂಟ್ ನೋಡಿದ್ರೆ ಯಶ್ ಖುಷ್ ಆಗೋದು ಪಕ್ಕಾ!ಬಾಂಗ್ಲಾದೇಶ ಅಭಿಮಾನಿಯ ಈ ಕಾಮೆಂಟ್ ನೋಡಿದ್ರೆ ಯಶ್ ಖುಷ್ ಆಗೋದು ಪಕ್ಕಾ!

  ಬಳ್ಳಾರಿಯಲ್ಲಿ ಚಿತ್ರೀಕರಣ

  ಬಳ್ಳಾರಿಯಲ್ಲಿ ಚಿತ್ರೀಕರಣ

  ಕೆಜಿಎಫ್-2 ಚಿತ್ರದ ಚಿತ್ರೀಕರಣ ಸದ್ಯ ಬೆಂಗಳೂರಿನಲ್ಲಿ ನಡೆಯುತ್ತಿದೆ. ಇಂದು ಯಶ್ ಚಿತ್ರೀಕಣದಲ್ಲಿ ಭಾಗಿಯಾಗಿದ್ದಾರೆ. ಎರಡು ದಿನಗಳು ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಸಿ, ನಂತರ ಚಿತ್ರತಂಡ ಬಳ್ಳಾರಿಗೆ ಹೊರಡಲಿದೆ. ಬಳ್ಳಾರಿಯಲ್ಲಿ ಚಿತ್ರದ ಪ್ರಮುಖ ಭಾಗದ ಚಿತ್ರೀಕರಣ ಮಾಡುತ್ತಿದೆ ಚಿತ್ರತಂಡ. ಹಾಗಾಗಿ ಈ ವಾರ ಚಿತ್ರತಂಡ ಬಳ್ಳಾರಿ ಕಡೆ ಪಯಣ ಬೆಳಸಲಿದೆ.

  ರಮಿಕಾ ಸೇನ್ ಪಾತ್ರದಲ್ಲಿ ರವೀನಾ ಟಂಡನ್

  ರಮಿಕಾ ಸೇನ್ ಪಾತ್ರದಲ್ಲಿ ರವೀನಾ ಟಂಡನ್

  'ಕೆಜಿಎಫ್-2' ಚಿತ್ರದ ಪ್ರಮುಖ ಪಾತ್ರದಲ್ಲಿ ಬಾಲಿವುಡ್ ನಟಿ ರವೀನಾ ಟಂಡನ್ ಕಾಣಿಸಿಕೊಳ್ಳುತ್ತಿದ್ದಾರೆ. ರವೀನಾ ಟಂಡನ್ ಕೆಜಿಎಫ್-2 ಚಿತ್ರದಲ್ಲಿ ರಮಿಕಾ ಸೇನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೊದಲ ಭಾಗದಲ್ಲಿ ರಮಿಕಾ ಸೇನ್ ಪಾತ್ರದ ಬಗ್ಗೆ ರಿವೀಲ್ ಮಾಡಿರಲಿಲ್ಲ. ಎರಡನೆ ಭಾಗದಲ್ಲಿ ರಮಿಕಾ ಸೇನ್ ಪಾತ್ರದ ಮೂಲಕ ರವೀನಾ ಟಂಡನ್ ಎಂಟ್ರಿ ಕೊಡಲಿದ್ದಾರೆ. 1981ರ ಭಾರತದ ಪ್ರಧಾನ ಮಂತ್ರಿ ಪಾತ್ರದಲ್ಲಿ ರವೀನಾ ಕಾಣಿಸಿಕೊಳ್ಳಲಿದ್ದಾರೆ.

  ಎಚ್ಚರಿಕೆ.....ಪ್ರಶಾಂತ್ ನೀಲ್ ಹೆಸರಿನಲ್ಲಿ ದಾರಿ ತಪ್ಪಿಸುವ ಕೆಲಸ!ಎಚ್ಚರಿಕೆ.....ಪ್ರಶಾಂತ್ ನೀಲ್ ಹೆಸರಿನಲ್ಲಿ ದಾರಿ ತಪ್ಪಿಸುವ ಕೆಲಸ!

  ನಿರೀಕ್ಷೆ ಇಮ್ಮಡಿ ಮಾಡಿದೆ ಅಧೀರ ಎಂಟ್ರಿ

  ನಿರೀಕ್ಷೆ ಇಮ್ಮಡಿ ಮಾಡಿದೆ ಅಧೀರ ಎಂಟ್ರಿ

  ಈಗಾಗಲೆ ಕೆಜಿಎಫ್-2 ಚಿತ್ರಕ್ಕೆ ರಣ ಭಯಂಕರ ಅಧೀರನ ಎಂಟ್ರಿಯಾಗಿದೆ. ಬಾಲಿವುಡ್ ನ ಖ್ಯಾತ ನಟ ಮುನ್ನಾಭಾಯ್ ಸಂಜಯ್ ದತ್ ಎಂಟ್ರಿ ಕೊಟ್ಟಿದ್ದಾರೆ. ನಾಯಕಿಯಾಗಿ ಶ್ರೀನಿಧಿ ಶೆಟ್ಟಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಚಿತ್ರದಲ್ಲಿ ಹಿರಿಯ ನಟ ಅನಂತ್ ನಾಗ್, ಅಚ್ಯುತ್ ಕುಮಾರ್, ಮಾಳವಿಕ ಅವಿನಾಶ್ ಸೇರಿದಂತೆ ಅನೇಕರು ಭಾಗಿಯಾಗಿದ್ದಾರೆ. ಕನ್ನಡ ಚಿತ್ರಾಭಿಮಾನಿಗಳು ಮಾತ್ರವಲ್ಲದೆ ಭಾರತೀಯ ಚಿತ್ರರಂಗ ಕಾತುರದಿಂದ ಕಾಯುತ್ತಿರುವ ಕೆಜಿಎಫ್-2 ಸಿನಿಮಾ ಮುಂದಿನ ವರ್ಷ ಬೇಸಿಗೆ ರಜೆಯ ಸಮಯದಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.

  Read more about: yash kgf 2 ಯಶ್
  English summary
  Kannada actor Yash back to KGF-2 shooting after he welcomed second child and celebrate Ayra birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X