For Quick Alerts
  ALLOW NOTIFICATIONS  
  For Daily Alerts

  ಸುಪಾರಿ ಪ್ರಕರಣದಲ್ಲಿ ನನ್ನ ಹೆಸರಿಲ್ಲ, ಇದೆಲ್ಲ ಸುಳ್ಳು: ನಟ ಯಶ್ ಸ್ಪಷ್ಟನೆ

  |
  ತಮ್ಮ ಬಗ್ಗೆ ಹರಡಿದ ಗಾಳಿ ಸುದ್ದಿಗೆ ಸ್ಪಷ್ಟನೆ ನೀಡಿದ ಯಶ್ | Filmibeat Kannada

  ಸ್ಯಾಂಡಲ್ ವುಡ್ ನಟನ ಹತ್ಯೆಗೆ ಸಂಚು ರೂಪಿಸಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸದಂತೆ ನಟ ರಾಕಿಂಗ್ ಸ್ಟಾರ್ ಯಶ್ ಇಂದು ಸ್ಪಷ್ಟನೆ ನೀಡಿದ್ದಾರೆ. ''ಸುಪಾರಿ ಪ್ರಕರಣದಲ್ಲಿ ನನ್ನ ಹೆಸರೇ ಇಲ್ಲ, ನನಗೂ ಇದಕ್ಕೂ ಸಂಬಂಧವಿಲ್ಲ'' ಎಂದು ಮಾಧ್ಯಮಗಳ ಮುಂದೆ ತಿಳಿಸಿದ್ದಾರೆ.

  ರೌಡಿ ಶೀಟರ್ ಭರತನನ್ನು ಮಾರ್ಚ್ 7 ರಂದು ಪೊಲೀಸರು ಬಂಧಿಸಿದ್ದರು. ವಿಚಾರಣೆ ವೇಳೆ ಸ್ಯಾಂಡಲ್ ವುಡ್ ನಟನೊಬ್ಬನ ಹತ್ಯೆಗೆ ಸ್ಕೆಚ್ ಹಾಕಿದ್ದರ ಬಗ್ಗೆ ಮಾಹಿತಿ ಸಿಕ್ಕಿದೆ ಎಂಬ ಆಧಾರದ ಮೇಲೆ ಪೊಲೀಸರು ಎಫ್.ಐ.ಆರ್ ದಾಖಲು ಮಾಡಿ ವಿಚಾರಣೆ ನಡೆಸುತ್ತಿದ್ದರು ಎನ್ನಲಾಗಿದೆ.

  ಯಶ್ ಹತ್ಯೆಗೆ ಸಂಚು ಸುದ್ದಿ ಬಗ್ಗೆ ನಟ ಶಿವರಾಜ್ ಕುಮಾರ್ ಪ್ರತಿಕ್ರಿಯೆ

  ಈ ಮಧ್ಯೆ ಕೆಲ ಮಾಧ್ಯಮಗಳಲ್ಲಿ ಯಶ್ ಅವರ ಹೆಸರು ಇರಬಹುದು ಎಂಬ ಅನುಮಾನ ವ್ಯಕ್ತಪಡಿಲಾಯಿತು. ಇದರಿಂದ ಸಹಜವಾಗಿ ಆತಂಕಕ್ಕೆ ಒಳಗಾದ ಯಶ್, ಸಂಜೆ 5 ಗಂಟೆಗೆ ತುರ್ತು ಸುದ್ದಿಗೋಷ್ಠಿ ಕರೆದು ಈ ಬಗ್ಗೆ ಮಾತನಾಡಿದರು. ಹಾಗಿದ್ರೆ, ಈ ಪ್ರಕರಣ ಕುರಿತು ಯಶ್ ಏನಂದ್ರು?

  ಗೃಹ ಸಚಿವರ ಬಳಿಯೇ ಮಾತನಾಡಿದ್ದೇನೆ

  ಗೃಹ ಸಚಿವರ ಬಳಿಯೇ ಮಾತನಾಡಿದ್ದೇನೆ

  ''ಈ ಸುದ್ದಿ ನೋಡಿದ ಮೇಲೆ ಸ್ವತಃ ನಾನೇ ಗೃಹ ಸಚಿವರ ಬಳಿ ಹಾಗೂ ಪೊಲೀಸ್ ಅಧಿಕಾರಿಗಳ ಬಳಿ ಮಾತನಾಡಿದ್ದೇನೆ. ಎಫ್.ಐ.ಆರ್ ಅಥವಾ ಈ ಪ್ರಕರಣದಲ್ಲಿ ನನ್ನ ಹೆಸರಿಲ್ಲ ಎಂದು ಅವರೇ ಖಚಿತ ಪಡಿಸಿದ್ದಾರೆ. ಹಾಗಿದ್ದರೂ ಯಾಕೆ ನನ್ನ ಹೆಸರು ಮತ್ತೆ ಮತ್ತೆ ಬರ್ತಿದೆ'' ಎಂದು ಪ್ರಶ್ನಿಸಿದ್ದಾರೆ.

  ರಾಕಿಂಗ್ ಸ್ಟಾರ್ ಹತ್ಯೆಗೆ ಸಂಚು ಅನ್ನೋದು ಸುಳ್ಳು

  ಇಂತಹ ಸುದ್ದಿಗೆ ಕಿವಿ ಕೊಡಬೇಡಿ

  ಇಂತಹ ಸುದ್ದಿಗೆ ಕಿವಿ ಕೊಡಬೇಡಿ

  ''ನಾನೇನು ಕೋಳಿನಾ.....ಕುರಿನಾ....ಯಾರೋ ಬಂದು ಕೊಲೆ ಮಾಡೋದಕ್ಕೆ. ನಾನೇನು, ನನ್ನ ಶಕ್ತಿ ಅಂತ ನನಗೆ ಗೊತ್ತಿದೆ. ಬೇರೆಯವರಿಗೂ ಗೊತ್ತಾಗಲಿ ಅಂತಾನೇ ನಾನು ನಿಮ್ಮ ಮುಂದೆ ಬಂದಿದ್ದೀನಿ. ಆದ್ರೆ, ಆ ರೀತಿ ಯಾವುದೇ ಘಟನೆ ನಡೆದಿಲ್ಲ. ಇದೆಲ್ಲ ಎಲ್ಲಿಂದ ಆರಂಭವಾಗಿದೆ, ಹೇಗೆ ಹರಡುತ್ತಿದೆ ಎಂಬುದು ಗೊತ್ತಿಲ್ಲ. ದಯವಿಟ್ಟು ಯಾರೂ ಇಂತಹ ಸುದ್ದಿಗಳಿಗೆ ಕಿವಿಕೊಡಬೇಡಿ'' ಎಂದು ಯಶ್ ಹೇಳಿದರು.

  ಕಾರ್ ಮೇಲೆ ಅಟ್ಯಾಕ್ ಆಗಿಲ್ಲ

  ಕಾರ್ ಮೇಲೆ ಅಟ್ಯಾಕ್ ಆಗಿಲ್ಲ

  ''ಈ ಹಿಂದೆ ನನ್ನ ಕಾರಿನ ಮೇಲೆ ಯಾರೋ ಕಲ್ಲು ಹೊಡೆದಿದ್ದರು. ಆ ಕಾರಿನಲ್ಲಿ ನಾನಿರಲಿಲ್ಲ. ಆಗ ನಾನು ಪೊಲೀಸ್ ಕಂಪ್ಲೆಂಟ್ ಕೊಟ್ಟಿದ್ದೆ. ಅಲ್ಲಿಗೆ ಅದು ಮುಗಿದಿತ್ತು. ಯಾರೋ ಅಟ್ಯಾಕ್ ಮಾಡಿಲ್ಲ, ಏನೂ ಆಗಿಲ್ಲ. ನಂತರ ಟಿವಿ, ಪತ್ರಿಕೆಯಲ್ಲಿ ವರದಿಯಾಯಿತು. ಈಗ ಮತ್ತೆ ಸುಪಾರಿ ಅಂತ ಸುದ್ದಿ ಆಗ್ತಿದೆ. ಈ ಹಿಂದೆ ಇನ್ನೊಬ್ಬ ರೌಡಿ ಬಂಧನವಾದಾಗಲೂ ನನಗೆ ಸ್ಕೆಚ್ ಹಾಕಿದ್ರಂತೆ ಎಂಬ ಸುದ್ದಿ ಬಂದಿತ್ತು. ಯಾಕೆ ಪದೇ ಪದೇ ನನ್ನ ಹೆಸರು ಬರ್ತಿದೆ'' ಎಂದು ಪ್ರಶ್ನಿಸಿದರು.

  ನಮ್ಮ ಇಂಡಸ್ಟ್ರಿಯಲ್ಲಿ ಅಂತವರಿಲ್ಲ

  ನಮ್ಮ ಇಂಡಸ್ಟ್ರಿಯಲ್ಲಿ ಅಂತವರಿಲ್ಲ

  ''ಸಾಮಾಜಿಕ ಜಾಲತಾಣದಲ್ಲಿ ಇದು ಕೆಟ್ಟ ಪರಿಣಾಮ ಬೀರುತ್ತಿದೆ. ಇನ್ನೊಬ್ಬ ನಟ ಯಾರೋ ಸುಪಾರಿ ಕೊಟ್ಟಿರಬಹುದು ಎಂಬ ಮಾತುಗಳು ಚರ್ಚೆಯಾಗ್ತಿದೆ. ಇದೆಲ್ಲ ನಮ್ಮ ಇಂಡಸ್ಟ್ರಿಯಲ್ಲಿ ಇಲ್ಲ. ನಮ್ಮಲ್ಲಿ ಯಾರೂ ಆ ರೀತಿ ಯೋಚನೆ ಕೂಡ ಮಾಡಲ್ಲ. ಇದನ್ನ ಇಲ್ಲಿಗೆ ಬಿಟ್ಟು ಬಿಡಿ. ಆ ರೀತಿ ಏನಾದರೂ ಇದ್ದರೇ ಸೂಕ್ತ ದಾಖಲೆ ಕೊಡಿ, ನಾನೇ ಪೊಲೀಸರ ಬಳಿ ಮಾತನಾಡುತ್ತೇನೆ. ಇಲ್ಲ ಸಲ್ಲದೇ ನನ್ನ ಹೆಸರು ತರುವುದು ಬೇಡ'' ಎಂದು ಯಶ್ ವಿನಂತಿಸಿಕೊಂಡರು.

  Read more about: yash ಯಶ್
  English summary
  Kannada actor yash clarified about supari case.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X