ಸಹ ನಿರ್ದೇಶಕನ ಹೊಸ ಕಾರನ್ನು ಚಲಾಯಿಸಿದ ಯಶ್
ನಟ ಯಶ್ ಈಗ 'ಕೆಜಿಎಫ್ ಚಾಪ್ಟರ್ 2' ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿ ಇದ್ದಾರೆ. ಶೂಟಿಂಗ್ ನಡುವೆಯೂ ತಮ್ಮ ಹಳೆ ಚಿತ್ರದ ಸಹ ನಿರ್ದೇಶಕನ ಹೊಸ ಕಾರನ್ನು ಚಲಾಯಿಸಿದ್ದಾರೆ.
ಯಶ್ ಕೆರಿಯರ್ ನ ಸೂಪರ್ ಹಿಟ್ ಸಿನಿಮಾ 'ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ'ಯಲ್ಲಿ ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ದ ಅನಿಲ್ ಹೊಸ ಕಾರನ್ನು ಖರೀದಿ ಮಾಡಿದ್ದಾರೆ. ಅವರಿಗೆ ತಮ್ಮ ಕಾರನ್ನು ಮೊದಲು ಯಶ್ ಓಡಿಸಬೇಕು ಎನ್ನುವ ಆಸೆ ಇತ್ತು.

ಅನಿಲ್ ಆಸೆಯನ್ನು ಯಶ್ ಈಡೇರಿಸಿದ್ದಾರೆ. ಮೈಸೂರಿನಲ್ಲಿ ಸಿನಿಮಾದ ಚಿತ್ರೀಕರಣದ ನಡುವೆ ಬಿಡುವು ಮಾಡಿಕೊಂಡು ಅನಿಲ್ ಅವರ ಕಾರು ಓಡಿಸಿದ್ದಾರೆ. ಹೊಸ ಕಾರನ್ನು ಮೊದಲು ಯಶ್ ಅವರೇ ಓಡಿಸಿದ್ದು, ಅನಿಲ್ ಅವರ ಕುಟುಂಬಕ್ಕೆ ಖುಷಿ ನೀಡಿದೆ. ಕಾರು ಚಲಾಯಿಸಿ, ಅನಿಲ್ ಕುಟುಂಬಕ್ಕೆ ಫೋಟೋ ನೀಡಿ, ಶುಭಾಶಯ ಕೋರಿದ್ದಾರೆ.

ಅಂದಹಾಗೆ, 'ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ' ಸಿನಿಮಾದಲ್ಲಿ ಯಶ್, ರಾಧಿಕಾ ಪಂಡಿತ್ ನಟಿಸಿದ್ದರು. ಸಂತೋಷ್ ಈ ಸಿನಿಮಾದ ನಿರ್ದೇಶನ ಮಾಡಿದ್ದರು. ಸಂತೋಷ್ ಜೊತೆಗೆ ಅನಿಲ್ ಚಿತ್ರದಲ್ಲಿ ಕೆಲಸ ಮಾಡಿದ್ದರು.
English summary
Kannada actor Yash droves his Mr and Mrs Ramachari movie associate director Anil car.


Click it and Unblock the Notifications