»   » ಟ್ವಿಟ್ಟರ್ ಗೆ ಅಡಿಯಿಟ್ಟ 'ಅಣ್ತಮ್ಮ' ರಾಕಿಂಗ್ ಸ್ಟಾರ್

ಟ್ವಿಟ್ಟರ್ ಗೆ ಅಡಿಯಿಟ್ಟ 'ಅಣ್ತಮ್ಮ' ರಾಕಿಂಗ್ ಸ್ಟಾರ್

Posted By:
Subscribe to Filmibeat Kannada

ಸೆಲೆಬ್ರಿಟಿಗಳು ಅಭಿಮಾನಿಗಳನ್ನ ಕನೆಕ್ಟ್ ಮಾಡೋದೇ ಸಾಮಾಜಿಕ ಜಾಲತಾಣಗಳಲ್ಲಿ. ಕಿಚ್ಚ ಸುದೀಪ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ರಾಗಿಣಿ, ಗೋಲ್ಡನ್ ಸ್ಟಾರ್ ಗಣೇಶ್, ಶರಣ್, ಸೇರಿದಂತೆ ಸ್ಯಾಂಡಲ್ ವುಡ್ ನ ಬಹುತೇಕ ತಾರೆಯರು ಫೇಸ್ ಬುಕ್ ಮತ್ತು ಟ್ವಿಟ್ಟರ್ ನಲ್ಲಿ ಸಕ್ರಿಯರಾಗಿದ್ದಾರೆ.

Kannada Actor Yash enters Twitter officially

ಈಗ ಈ ಸಾಲಿಗೆ ಲೇಟೆಸ್ಟ್ ಎಂಟ್ರಿ ಕೊಟ್ಟಿರುವುದು ರಾಕಿಂಗ್ ಸ್ಟಾರ್ ಯಶ್. ಈಗಾಗಲೇ ಫೇಸ್ ಬುಕ್ ನಲ್ಲಿ ಸಖತ್ ಆಕ್ಟೀವ್ ಆಗಿರುವ ಯಶ್, ಏಪ್ರಿಲ್ 2 ರಂದು ಅಧಿಕೃತವಾಗಿ ತಮ್ಮ ಟ್ವಿಟ್ಟರ್ ಅಕೌಂಟ್ ನ ಓಪನ್ ಮಾಡಿದ್ದಾರೆ.

''ಸ್ನೇಹಿತರೊಂದಿಗೆ ಟ್ವಿಟ್ಟರ್ ನಲ್ಲಿ ಕನೆಕ್ಟ್ ಆಗುವುದಕ್ಕೆ ಇಂದೇ ಸೂಕ್ತ ದಿನ'' ಅಂತ್ಹೇಳಿ ಯಶ್ ಟ್ವೀಟ್ ಮಾಡಿದ್ದರು. ಇದಾದ ಬಳಿಕ ಇಂದು ಮತ್ತೆ ಟ್ವಿಟ್ಟರ್ ಗೆ ಲಾಗ್ ಇನ್ ಆಗಿ ಟ್ವೀಟ್ ಮಾಡುವ ಮೂಲಕ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ ಯಶ್. [ಟ್ವಿಟ್ಟರ್ ನಲ್ಲಿ 'ರಾಜ ರಾಜೇಂದ್ರ'ನ ದರ್ಬಾರ್]

''ಎಲ್ಲರಿಂದ ಬಂದಿರುವ ಟ್ವಿಟ್ಟರ್ ವೆಲ್ ಕಮ್ ಮೆಸೇಜ್ ಗಳನ್ನ ನಾನು ಓದಿದ್ದೇನೆ. ನಿಮ್ಮೆಲ್ಲರ ಪ್ರೀತಿ-ಅಭಿಮಾನಕ್ಕೆ ನಾನು ಧನ್ಯ'' ಅಂತ ಟ್ವೀಟ್ ಮಾಡಿದ್ದಾರೆ. ಇನ್ನೂ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಶತಕ ಬಾರಿಸಿರುವ ಸಂಭ್ರಮದ ಚಿತ್ರಗಳನ್ನೂ ಯಶ್ ಟ್ವೀಟಿಸಿದ್ದಾರೆ.

''ಎಲ್ಲಾ ಸೆಂಟರ್ ಗಳಲ್ಲೂ 100ನೇ ದಿನವನ್ನ ಹಬ್ಬದ ತರಹ ಆಚರಿಸಿದ್ದೀರಾ. ಇನ್ನೂ ಒಳ್ಳೆ ಚಿತ್ರಗಳನ್ನ ಕೊಡೋಕೆ ಇದಕ್ಕಿಂತ ಸ್ಪೂರ್ತಿ ಬೇಕಿಲ್ಲ.'' ಅಂತ ಎಲ್ಲಾ ಅಭಿಮಾನಿಗಳಿಗೆ ಯಶ್ ಧನ್ಯವಾದ ಸಲ್ಲಿಸಿದ್ದಾರೆ. [ಟ್ವಿಟ್ಟರ್ ನಲ್ಲಿ 'ನಮಸ್ಕಾರ ನಮಸ್ಕಾರ ನಮಸ್ಕಾರ' ಗಣೇಶ್]

ಕಡೆಗೂ ಅಭಿಮಾನಿಗಳೊಂದಿಗೆ ಮುಕ್ತವಾಗಿ ಮಾತನಾಡೋಕೆ ಯಶ್ ಟ್ವೀಟ್ ಹಕ್ಕಿ ಆಗಿದ್ದಾರೆ. 5 ದಿನಗಳಲ್ಲಿ 2616 ಜನರು ಯಶ್ ರನ್ನ ಫಾಲೋ ಮಾಡಿದ್ದಾರೆ. ನಿಮಗೂ ಯಶ್ ಜೊತೆ ಮಾತನಾಡಬೇಕು ಅನಿಸಿದ್ರೆ, @NimmaYash ಗೆ ಭೇಟಿ ಕೊಡಿ. (ಫಿಲ್ಮಿಬೀಟ್ ಕನ್ನಡ)

English summary
Kannada Actor Yash has opened his official Twitter Account. NimmaYash is his Twitter Handle.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada