ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳ ಹಸಿರು ಅಭಿಯಾನಕ್ಕೆ ಭರ್ಜರಿ ರೆಸ್ಪಾನ್ಸ್

ನೆಚ್ಟಿನ ನಟನ ಹುಟ್ಟುಹಬ್ಬ ಅಂದರೆ ಅಭಿಮಾನಿಗಳಿಗೆ ಹಬ್ಬದ ಸಂಭ್ರಮ. ಅಭಿಮಾನಿಗಳು ಅವರವರ ಹುಟ್ಟುಹಬ್ಬ ಆಚರಿಸಿಕೊಳ್ಳದಿದ್ದರು ನೆಚ್ಚಿನ ನಟನ ಹುಟ್ಟುಹಬ್ಬವನ್ನು ಅದ್ದೂರಿ ಸೆಲೆಬ್ರೆಟ್ ಮಾಡಿ ಸಂಭ್ರಮಿಸುತ್ತಾರೆ. ಸದ್ಯ ಸ್ಯಾಂಡಲ್ ವುಡ್ ನ ರಾಕಿ ಭಾಯ್ ಯಶ್ ಹುಟ್ಟುಹಬ್ಬಕ್ಕೆ ಈಗಾಗಲೆ ಭರ್ಜರಿ ತಯಾರಿ ನಡೆಯುತ್ತಿದೆ.

ರಾಕಿಂಗ್ ಸ್ಟಾರ್ ಹುಟ್ಟುಹಬ್ಬಕ್ಕೆ ಇನ್ನು 50 ದಿನಗಳು ಇದೆ. ಈಗಾಗಲೆ ಅಭಿಮಾನಿಗಳು ಸಿದ್ಧರಾಗುತ್ತಿದ್ದಾರೆ. ಈ ಬಾರಿ ಯಶ್ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸಲಾಗುತ್ತಿದೆ.

"BE A PART OF SOLUTION BUT NOT POLLUTION. SAVE WATER, PLANT TREES, GO GREEN" ಎನ್ನುವ ಅಭಿಯಾನದ ಮೂಲಕ ವಿಶಿಷ್ಟವಾಗಿ ಬರ್ತಡೇ ಸೆಲೆಬ್ರೆಟ್ ಮಾಡಲಾಗುತ್ತಿದೆ. ವಿಭಿನ್ನ ಅಭಿಯಾನಕ್ಕೆ ಅಭಿಮಾನಿಗಳು ಸಂಭ್ರಮದಿಂದ ಭಾಗಿಯಾಗಿದ್ದಾರೆ.

ಯಶ್ ಅಭಿಮಾನಿಗಳ ಪರಿಸರ ಕಾಳಜಿ

ಯಶ್ ಅಭಿಮಾನಿಗಳ ಪರಿಸರ ಕಾಳಜಿ

ಪರಿಸರ ಕಾಳಜಿ ವಿಚಾರವಾಗಿ ಯಶ್ ಅಭಿಮಾನಿಗಳು ಇಂದಿನಿಂದ ಜನವರಿ 8 ಯಶ್ ಹುಟ್ಟುಹಬ್ಬದ ವರೆಗೂ ಪರಿಸರ ಸಂರಕ್ಷಣೆ ಜೊತೆಗೆ ಗಿಡಗಳನ್ನು ನೆಟ್ಟು ಬೆಳೆಸುವ ಹೊಸ ಅಭಿಯಾನ ಕೈಗೊಂಡಿದ್ದಾರೆ. ಇದಕ್ಕಾಗಿಯೆ ಯಶ್ ಕಾಮನ್ ಡಿಪಿ ಕೂಡ ರಿಲೀಸ್ ಮಾಡಲಾಗಿದೆ.

ಅಭಿಯಾನಕ್ಕೆ ಶಾನ್ವಿ ಸಾಥ್

ಅಭಿಯಾನಕ್ಕೆ ಶಾನ್ವಿ ಸಾಥ್

ಮಾಸ್ಟರ್ ಪೀಸ್ ಬೆಡಗಿ ಶಾನ್ವಿ ಶ್ರೀವಾತ್ಸವ್ ಈ ಅಭಿಯಾನದಲ್ಲಿ ಭಾಗಿಯಾಗಿದ್ದಾರೆ.

"ಅಖಿಲ ಕರ್ನಾಟಕ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿ ಬಳಗದ ಆಹ್ವಾನದಂತೆ 5BOSS0 POSTER ಅಂದ್ರೆ CDP (Common Display Picture)ನ ತಮ್ಮ‌ ಫೇಸ್ ಬುಕ್, ಟ್ವಿಟ್ಟರ್ ಮತ್ತು ಇನ್ಸ್ ಟಾಗ್ರಾಮ್ ನಲ್ಲಿ‌ ಪೋಸ್ಟ್ ಮಾಡಿದ್ದಾರೆ. ಜೊತೆಗೆ ಈ ಪೋಸ್ಟರ್ ಕಾನ್ಸೆಪ್ಪ್ ನನಗೆ ಸಖತ್ ಇಷ್ಟ ಆಯ್ತು. ಪರಿಸರ ಮಾಲಿನ್ಯದ ಮೇಲೆ ಕೋಪಗೊಂಡಿರೋ ಯಶ್ ಸಾರ್ ಅವರ ಮೈ ಮನಸು ಹಸಿರು ಮಯವಾಗಿರುವಂತೆ ಡಿಸೈನ್ ಮಾಡಿರೋ ರೀತಿ ಇಂಟ್ರೆಸ್ಟಿಂಗ್ ಅನ್ನಿಸ್ತಿದೆ. ಯಶ್ ಅವರ ಅಭಿಮಾನಿಗಳ ಈ ಅಭಿಯಾನದಲ್ಲಿ ನಾನು ಭಾಗಿಯಾಗಿದ್ದೀನಿ ನೀವು ಭಾಗಿಯಾಗಿ. ಹಸಿರು ಬೆಳೆಸೋಣ. ಪರಿಸರ ಉಳಿಸೋಣ. ಜೈ ಹಿಂದ್, ಜೈ ಕರ್ನಾಟಕ ಮಾತೆ" ಎಂದು ಬರೆದುಕೊಂಡಿದ್ದಾರೆ.

ಅಭಿಮಾನಿಗಳಿಂದ ಸಖತ್ ರೆಸ್ಪಾನ್ಸ್

ಅಭಿಮಾನಿಗಳಿಂದ ಸಖತ್ ರೆಸ್ಪಾನ್ಸ್

ಮಾಸ್ಟರ್ ಪೀಸ್ ಬೆಡಗಿ ಶಾನ್ವಿ ಶ್ರೀವಾತ್ಸವ್ ಕಾಮನ್ ಡಿಪಿ ರಿಲೀಸ್ ಮಾಡಿ, ಅಭಿಯಾನ ಶುರು ಮಾಡುತ್ತಿದ್ದಂತೆ ಅಭಿಮಾನಿಗಳಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಈಗಾಗಲೆ ಅಭಿಮಾನಿಗಳು ಗಿಡಗಳನ್ನು ನೆಟ್ಟು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಅಲ್ಲದೆ ಎಲ್ಲರೂ ಅಭಿಯಾನದಲ್ಲಿ ಭಾಗಿಯಾಗುವಂತೆ ಕೇಳಿಕೊಳ್ಳುತ್ತಿದ್ದಾರೆ.

ಬಾಂಗ್ಲದೇಶ ಅಭಿಮಾನಿಗಳಿಂದ ಸಾಥ್

ಬಾಂಗ್ಲದೇಶ ಅಭಿಮಾನಿಗಳಿಂದ ಸಾಥ್

ರಾಕಿ ಭಾಯ್ ಹವಾ ಕೇವಲ ಭಾರತದ ಮಾತ್ರವಲ್ಲ ವಿದೇಶದಲ್ಲೂ ಜೋರಾಗಿದೆ. ಪಕ್ಕದ ಬಾಂಗ್ಲದೇಶದಲ್ಲೂ ಯಶ್ ಅಭಿಮಾನಿಗಳು ಅಭಿಯಾನದಲ್ಲಿ ಕೈ ಜೋಡಿಸಿದ್ದಾರೆ. "ಈ ಹಸಿರು ಅಭಿಯಾನದಲ್ಲಿ ನಾವು ಕೈ ಜೋಡಿಸಲಿದ್ದೇವೆ. ಹಾಗಾಗಿ ಬಾಂಗ್ಲದಲ್ಲಿ ಬೊಗರು ಸ್ಥಳದಲ್ಲಿ ದೊಡ್ಡ ಕಾರ್ಯಕ್ರಮ ಕಡ ಏರ್ಪಡಿಸಲಿದ್ದೇವೆ" ಎಂದು ಪೋಸ್ಟರ್ ವೊಂದು ರಿಲೀಸ್ ಮಾಡಲಾಗಿದೆ. ಜೊತೆಗೆ ಗೋ ಗ್ರೀನ್ ಯಶ್ ಫ್ಯಾನ್ಸ್ ಅನ್ನು ಹೆಸರು ಭಾರಿ ಸದ್ದು ಮಾಡುತ್ತಿದೆ.

More from Filmibeat

English summary
Kannada actor Yash fans are campaigning go green to celebrate his birthday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X