»   » ಯಶ್-ರಾಧಿಕಾ ಅವರ ಹೊಸ ಚಿತ್ರದ ಹೆಸರೇನು ಗೊತ್ತಾ?

ಯಶ್-ರಾಧಿಕಾ ಅವರ ಹೊಸ ಚಿತ್ರದ ಹೆಸರೇನು ಗೊತ್ತಾ?

Posted By:
Subscribe to Filmibeat Kannada

ಕೆ.ಮಂಜು ನಿರ್ಮಾಣದಲ್ಲಿ ಮೂಡಿಬರುತ್ತಿರುವ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಒಂದಾಗಿ ಕಾಣಿಸಿಕೊಳ್ಳಲಿರುವ ಹೊಸ ಸಿನಿಮಾಕ್ಕೆ ಇದೀಗ ಹೆಸರಿಡಲಾಗಿದೆ.

ಹೌದು 'ಕೇಸ್ ನಂಬರ್ 18/9' ಚಿತ್ರದ ಖ್ಯಾತಿಯ ನಿರ್ದೇಶಕ ಮಹೇಶ್ ರಾವ್ ಅವರು ಆಕ್ಷನ್-ಕಟ್ ಹೇಳುತ್ತಿರುವ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಜೋಡಿಯಾಗಿ ನಟಿಸುತ್ತಿರುವ ಸಿನಿಮಾಗೆ 'ಗಾಂಧಿ ಕ್ಲಾಸ್' ಎಂದು ಹೆಸರಿಡಲಾಗಿದೆ.[ರಾಕಿಂಗ್ ಸ್ಟಾರ್ ಮತ್ತು ರೆಬೆಲ್ ಸ್ಟಾರ್ ಮತ್ತೆ ಒಂದಾದ್ರೆ?]

Kannada Actor Yash film to be Titled 'Gandhi Class'

ಕಳೆದ ತಿಂಗಳು ಈ ಚಿತ್ರದ ಮೂಹೂರ್ತ ನೆರವೇರಿದ್ದು ಈ ಸಿನಿಮಾದಿಂದ 'ಎದೆಗಾರಿಕೆ' ಖ್ಯಾತಿಯ ನಟ ಆದಿತ್ಯ ಅವರು ಕೆಲವು ಕಾರಣಗಳಿಂದ ಔಟ್ ಆಗಿದ್ದರು. ಇದೀಗ ಆದಿತ್ಯ ಜಾಗಕ್ಕೆ ಯಾರೂ ಎಂಬುದು ಇನ್ನೂ ಪಕ್ಕಾ ಆಗಿಲ್ಲ.

ಸದ್ಯದಲ್ಲೇ ಸಿನಿಮಾದ ಶೂಟಿಂಗ್ ಆರಂಭವಾಗಲಿದ್ದು, ಯಶ್ ಮತ್ತು ರಾಧಿಕಾ ಪಂಡಿತ್ 'ಗಾಂಧಿ ಕ್ಲಾಸ್' ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರೆ.[ಯಶ್ ಸಿನಿಮಾದಿಂದ 'ಡೆಡ್ಲಿ' ಆದಿತ್ಯ ಔಟ್ ಆಗಿದ್ದೇಕೆ?]

Kannada Actor Yash film to be Titled 'Gandhi Class'

ಇನ್ನು ರಾಧಿಕಾ ಪಂಡಿತ್ ಮತ್ತು ಯಶ್ ಒಂದಾಗಿ ಕಾಣಿಸಿಕೊಂಡಿದ್ದ 'ಮಿ.ಅಂಡ್ ಮಿಸಸ್ ರಾಮಾಚಾರಿ' ಸಿನಿಮಾ ಕಳೆದ ವರ್ಷ ಬ್ಲಾಕ್ ಬಸ್ಟರ್ ಹಿಟ್ ಆಗಿದ್ದು, ಇದೀಗ ಮತ್ತೆ ಅದೇ ಜೋಡಿ ಮೋಡಿ ಮಾಡಲಿದೆ.

ಈಗಾಗಲೇ ರಾಕಿಂಗ್ ಸ್ಟಾರ್ ಯಶ್ ಅವರು ತಮ್ಮ 'ಮಾಸ್ಟರ್ ಪೀಸ್' ಚಿತ್ರದ ಯಶಸ್ಸನ್ನು ಆಚರಿಸುತ್ತಿರುವ ಬೆನ್ನಲ್ಲೇ, ಹಲವಾರು ಹೊಸ ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಾಗಿದ್ದಾರೆ.

English summary
Yash and Radhika Pandit starrer new film has been titled as 'Gandhi Class' and the shooting for the film is likely to be soon. The film is being produced by K Manju and directed by Mahesh Rao and the film was launched last month.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada