'ಮಂಡ್ಯ ಅಲ್ಲ, ಕರ್ನಾಟಕ ಬಿಟ್ಟು ಹೋಗ್ತೀನಿ': ಸಿಎಂಗೆ ಯಶ್ ಸವಾಲ್
Recommended Video
ಮಂಡ್ಯ ಅಖಾಡ ಇಂದು ನಿಜಕ್ಕೂ ರಣರಂಗವಾಯಿತು. ಇಷ್ಟು ದಿನ ನಾವು ಮಾತನಾಡಲ್ಲ, ನಾವು ಮಾತನಾಡಲ್ಲ ಎನ್ನುತ್ತಿದ್ದ ಜೋಡೆತ್ತುಗಳು ಬಹಿರಂಗ ಪ್ರಚಾರದ ಅಂತಿಮ ದಿನ ತಮ್ಮಲ್ಲಿ ಹಿಡಿದಿಟ್ಟುಕೊಂಡಿದ್ದ ಆಕ್ರೋಶವನ್ನ ಹೊರಹಾಕಿದ್ದಾರೆ.
ಅದರಲ್ಲೂ ರಾಕಿಂಗ್ ಸ್ಟಾರ್ ಯಶ್ ಅಂತೂ ನೇರವಾಗಿ ಸಿಎಂ ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರ್ ವಿರುದ್ಧ ತೊಡೆತಟ್ಟಿ ಸವಾಲ್ ಹಾಕಿದ್ದಾರೆ. 'ಕಳ್ಳರ ಪಕ್ಷ' ಎಂದು ಟೀಕೆಗೆ ಸಂಬಂಧಪಟ್ಟಂತೆ ಮಾತನಾಡಿದ ಯಶ್ ''ನಾನು ಹಾಗೆ ಹೇಳಿದ್ದನ್ನ ಸಾಬೀತು ಮಾಡಿದ್ರೆ, ಮಂಡ್ಯ ಅಲ್ಲ, ಕರ್ನಾಟಕವನ್ನೇ ಬಿಟ್ಟು ಹೋಗ್ತೀನಿ'' ಎಂದು ಬಹಿರಂಗ ಸವಾಲು ಹಾಕಿದ್ರು.
ಮಂಡ್ಯ ಸಿಲ್ವರ್ ಜ್ಯುಬ್ಲಿ ಪಾರ್ಕ್ ನಲ್ಲಿ ಬಹಿರಂಗ ಸಭೆಯಲ್ಲಿ ಮಾತನಾಡಿದ ಯಶ್, ಎದುರಾಳಿ ಅಭ್ಯರ್ಥಿ ಮತ್ತು ಮುಖ್ಯಮಂತ್ರಿ ವಿರುದ್ಧ ಮಾತಿನ ವಾಗ್ದಾಳಿ ನಡೆಸಿದರು. ಹಾಗಿದ್ರೆ, ಯಶ್ ಆಕ್ರೋಶ ಮಾತಿನಲ್ಲಿ ಏನೆಲ್ಲಾ ಹೇಳಿದ್ದರು? ಮುಂದೆ ಓದಿ.....

ನಮ್ಮ ಹೆಣ್ಮಕ್ಳ ಬಗ್ಗೆ ಮಾತಾಡಿದ್ರೆ ಹುಷಾರ್.!
''ಅಂಬರೀಶ್ ಇದ್ದಾಗಲೂ ಮತ್ತು ನಮ್ಮ ಸ್ನೇಹಿತರ ಪರವಾಗಿ ನಾವು ಎಷ್ಟೋ ಕಡೆ ಪ್ರಚಾರ ಮಾಡಿದ್ದೀವಿ. ಆದ್ರೆ, ಎಲ್ಲೂ ಯಾರೂ ನಮ್ಮನ್ನ ಇಷ್ಟು ಕೆಟ್ಟದಾಗಿ ನಡೆಸಿಕೊಂಡಿಲ್ಲ. ಪ್ರತಿದಿನನೂ ನಾವು ತಾಳ್ಮೆಯಿಂದಲೇ ಇದ್ವಿ. ನಮ್ಮ ರಕ್ತ ಕೇಳಲ್ವೆ. ನಮ್ಮ ರಕ್ತನೂ ಕುದಿಯುತ್ತೆ. ನಮ್ಮ ಹೆಣ್ಮಕ್ಳ ಬಗ್ಗೆ ಮಾತಾಡಿದ್ರೆ ಯಾರೂ ಅಂತನೂ ನೋಡಲ್ಲ'' ಎಂದು ಯಶ್ ಕಿಡಿಕಾರಿದ್ದಾರೆ.

500 ರೂಪಾಯಿ ಆಫರ್ ಕೊಟ್ಟು ಕರೆಸಿದ್ದಲ್ಲ
''ಇದು ಸ್ವಾಭಿಮಾನದ ಚುನಾವಣೆ. ಇಲ್ಲಿ ಬಂದಿರುವುದು ಸ್ವಾಭಿಮಾನಕ್ಕೆ ಬೆಲೆ ಕೊಟ್ಟು. ಯಾರೂ ಇಲ್ಲಿ 500 ರೂಪಾಯಿ ಆಫರ್ ಕೊಟ್ಟಿರುವುದಕ್ಕೆ ಬಂದಿರುವ ಜನ ಅಲ್ಲ. ಬೇವರು ಸುರಿಸಿ ದುಡಿದು ತಂದ ದುಡ್ಡುನ್ನ ಸುಮಕ್ಕನ ಕೈಗೆ ತಂದು ಕೊಡ್ತಿದ್ದರು. ಯಾರೇ ಏನೂ ಹೇಳಿದ್ರು, ಈ ಅಭಿಮಾನ ಸುಳ್ಳು ಅಂದ್ರೆ ನಾವು ಒಪ್ಪಲ್ಲ'' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿನಿಮಾದವರಂತ ಇಬ್ಬರನ್ನ ನಂಬಬಾರದು.!
'ಸಿನಿಮಾದವರು ಸಿನಿಮಾದವರು ಅಂತಾರೆ, ಅವರ ಅಭ್ಯರ್ಥಿನೂ ಸಿನಿಮಾದವರು. ಅವರೇ ಹೇಳ್ತಾರೆ ನಾನು ನಿರ್ಮಾಪಕ ಅಂತ. ಮತ್ತೆ ನಮ್ಮ ಕಡೆ ಬೆರಳು ತೋರಿಸುತ್ತಾರೆ. ಸಿನಿಮಾದವರನ್ನ ನಂಬಬಾರದು ಅಂದ್ರೆ, ಅವರನ್ನ ನಂಬಬಾರದು'' ಎಂದು ಯಶ್ ತಿರುಗೇಟು ನೀಡಿದರು.

ಕರ್ನಾಟಕ ಬಿಟ್ಟು ಹೋಗ್ತೀನಿ
'ನಾನು ಕಳ್ಳರ ಪಕ್ಷ ಅಂತ ಹೇಳಿಲ್ಲ. ನಾನು ನಂಬುವ ಧರ್ಮಸ್ಥಳದ ಮಂಜುನಾಥ ಸ್ವಾಮಿ ಮೇಲೆ ಆಣೆಯಿಟ್ಟು ಹೇಳುತ್ತಿದ್ದೇನೆ, ನಾನು ಹಂಗೆ ಹೇಳಿದ್ರೆ, ಅವರು ಏನೇ ಹೇಳಿದ್ರೋ ಮಾಡ್ತೀನಿ. ಸಿನಿಮಾ, ಮಂಡ್ಯ, ಕರ್ನಾಟಕವನ್ನೇ ಬಿಟ್ಟು ಹೋಗ್ತೀನಿ. ಹೇಳಿ ಸುಮ್ಮನೆ ಆಗೋದಲ್ಲ, ಹೋಗ್ತೀನಿ'' ಎಂದು ಸವಾಲ್ ಹಾಕಿದರು.


Click it and Unblock the Notifications











