»   » 'ಕೆಜಿಎಫ್' ಚಿತ್ರಕ್ಕಾಗಿ ವರ್ಕೌಟ್ ಮಾಡ್ತಿದ್ದಾರಾ ಯಶ್!

'ಕೆಜಿಎಫ್' ಚಿತ್ರಕ್ಕಾಗಿ ವರ್ಕೌಟ್ ಮಾಡ್ತಿದ್ದಾರಾ ಯಶ್!

Posted By:
Subscribe to Filmibeat Kannada

ರಾಕಿಂಗ್ ಸ್ಟಾರ್ ಯಶ್ ಅಭಿನಯಿಸುತ್ತಿರುವ ಬಹುಕೋಟಿ ವೆಚ್ಚದ 'ಕೆಜಿಎಫ್' ಚಿತ್ರ ಆರಂಭದಿಂದಲೂ ಸಖತ್ ಸುದ್ದಿ ಮಾಡುತ್ತಿದೆ. ಬಜೆಟ್ ವಿಚಾರಕ್ಕೆ ಸ್ಯಾಂಡಲ್ ವುಡ್ ನಲ್ಲಿ ಹೊಸ ದಾಖಲೆ ಎನಿಸಿಕೊಂಡಿರುವ ಈ ಚಿತ್ರದಲ್ಲಿ, ಯಶ್ ಅವರ ಗೆಟಪ್ ಹೇಗಿರುತ್ತೆ ಎಂಬ ಕುತೂಹಲ ಕೂಡ ಕಾಡುತ್ತಿದ್ದು, ಇದಕ್ಕಾಗಿ ರಾಕಿಂಗ್ ಸ್ಟಾರ್ ಸಖತ್ ತಯಾರಿ ಮಾಡುತ್ತಿದ್ದಾರೆ.[ಯಶ್ ಜನ್ಮದಿನದ ಪ್ರಯುಕ್ತ 'ಕೆ.ಜಿ.ಎಫ್' ಪೋಸ್ಟರ್ ರಿಲೀಸ್.!]

ಸಿನಿಮಾದಿಂದ ಸಿನಿಮಾಗೆ ತಮ್ಮ ಲುಕ್ ಬದಲಾಯಿಸಿಕೊಳ್ಳುವ ಯಶ್ ಅವರನ್ನ, 'ಕೆಜಿಎಫ್' ಚಿತ್ರದಲ್ಲಿ ಮತ್ತೊಂದು ಡಿಫ್ರೆಂಟ್ ಲುಕ್ ನಲ್ಲಿ ನೋಡಬಹುದು. ಇದಕ್ಕಾಗಿ ನಟ ಯಶ್ ಜಿಮ್ ನಲ್ಲಿ ಬಾರಿ ವರ್ಕೌಟ್ ಮಾಡುತ್ತಿದ್ದು, ಬಾಡಿ ಬಿಲ್ಡ್ ಕೂಡ ಮಾಡುತ್ತಿದ್ದಾರಂತೆ.

'ಕೆಜಿಎಫ್'ಗಾಗಿ ಯಶ್ ವರ್ಕೌಟ್!

ಯಶ್ ಅಭಿನಯಿಸುತ್ತಿರುವ 'ಕೆಜಿಎಫ್' ಚಿತ್ರಕ್ಕಾಗಿ ರಾಕಿಂಗ್ ಸ್ಟಾರ್ 'ಜಿಮ್'ನಲ್ಲಿ ವರ್ಕೌಟ್ ಮಾಡುತ್ತಿದ್ದಾರಂತೆ. 'ಸಂತು ಸ್ಟ್ರೈಟ್ ಫಾರ್ವಾರ್ಡ್' ಚಿತ್ರದ ನಂತರ ಮದುವೆಯಾಗಿದ್ದ ಯಶ್, ಸ್ವಲ್ಪ ದಪ್ಪವಾಗಿದ್ದರು. ಹೀಗಾಗಿ, ತಮ್ಮ ಹೊಸ ಚಿತ್ರಕ್ಕಾಗಿ ಕಸರತ್ತು ಮಾಡುತ್ತಿದ್ದಾರಂತೆ.

ಡಿಫ್ರೆಂಟ್ ಹೇರ್ ಸ್ಟೈಲ್

ಹೇರ್ ಸ್ಟೈಲ್ ವಿಚಾರದಲ್ಲೂ ಯಶ್ ಬದಲಾಗುತ್ತಿದ್ದಾರೆ. 'ಕೆಜಿಎಫ್' ಚಿತ್ರಕ್ಕಾಗಿ ಹೊಸ ಹೇರ್ ಸ್ಟೈಲ್ ನಲ್ಲಿ ರಾಮಾಚಾರಿ ಮಿಂಚಲಿದ್ದಾರೆ.

70ರ ದಶಕದ ಲುಕ್ ನಲ್ಲಿ ರಾಕಿಂಗ್ ಸ್ಟಾರ್

'ಕೆಜಿಎಫ್' ಚಿತ್ರ 1970 ರ ದಶಕದ ಕಥೆಯಾಗಿರುವುದರಿಂದ ಯಶ್ ಈ ಚಿತ್ರದಲ್ಲಿ ರೆಟ್ರೋ ಸ್ಟೈಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.[ಯಶ್ ಬಹುಕೋಟಿ ವೆಚ್ಚದ 'ಕೆಜಿಎಫ್' ಶೂಟಿಂಗ್ ಗೆ ಮುಹೂರ್ತ ಫಿಕ್ಸ್!]

'ಯಶ್'ಗೆ ನಾಯಕಿಯಾಗಿ ಶ್ರೀನಿಧಿ ಶೆಟ್ಟಿ!

ರಾಕಿಂಗ್ ಸ್ಟಾರ್ ಯಶ್ ಬಹುನಿರೀಕ್ಷಿತ 'ಕೆಜಿಎಫ್' ಚಿತ್ರಕ್ಕೆ ನಾಯಕಿಯಾಗಿ 'ಶ್ರೀನಿಧಿ ಶೆಟ್ಟಿ' ಆಯ್ಕೆಯಾಗಿದ್ದಾರೆ ಎನ್ನಲಾಗುತ್ತಿದೆ. 24 ವರ್ಷದ ಬ್ಯೂಟಿ ಕ್ವೀನ್ ಶ್ರೀನಿಧಿ ಶೆಟ್ಟಿ ಭಾರತದ ಮಾಡೆಲ್‌ ಆಗಿದ್ದು, 'ಮಿಸ್‌ ಸುಪರ್ ನ್ಯಾಷನಲ್ 2016' ಮತ್ತು 'ಮಿಸ್ ದಿವಾ 2016' ಸೌಂದರ್ಯ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.[ರಾಕಿಂಗ್ ಸ್ಟಾರ್ ಯಶ್ 'ಕೆಜಿಎಫ್' ಚಿತ್ರಕ್ಕೆ ನಾಯಕ ನಟಿ ಇವರೇ...]

40 ಕೋಟಿ ವೆಚ್ಚದ 'ಕೆಜಿಎಫ್'

'ಉಗ್ರಂ' ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಅವರು ಆಕ್ಷನ್-ಕಟ್ ಹೇಳುತ್ತಿರುವ 'ಕೆ.ಜಿ.ಎಫ್' ಚಿತ್ರವನ್ನ ಹೊಂಬಾಳೆ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರ್ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರಕ್ಕೆ ಭುವನ್ ಗೌಡ ಅವರು ಕ್ಯಾಮರಾ ಕೈ ಚಳಕ ತೋರಿದರೆ, ಸಂಗೀತ ನಿರ್ದೇಶಕ ರವಿ ಬಸ್ರೂರು ಅವರು ಮ್ಯೂಸಿಕ್ ಕಂಪೋಸ್ ಮಾಡಲಿದ್ದಾರೆ.

English summary
Kannada Actor Yash Getting Ready For KGF. 'KGF' is Most Eexpensive Film of Sandalwood. The Movie Directed by Prashanth Neel, the Movie is about an Ambitious Man who is in his 70’s.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada