ಇನ್ಸ್ಟಾಗ್ರಾಮ್ ನಲ್ಲಿ ದರ್ಶನ್, ಸುದೀಪ್, ಪುನೀತ್ ರನ್ನು ಹಿಂದೆ ಹಾಕಿದ ಯಶ್

Recommended Video

ದರ್ಶನ್, ಸುದೀಪ್, ಪುನೀತ್ ರನ್ನು ಹಿಂದೆ ಹಾಕಿದ ಯಶ್ | FILMIBET KANNADA

ಸ್ಟಾರ್ ಪವರ್ ಅನ್ನು ಈಗ ಸಿನಿಮಾದ ಯಶಸ್ಸು, ಅಭಿಮಾನಿ ಬಳಗದ ಜೊತೆಗೆ ಸೋಷಿಯಲ್ ಮೀಡಿಯಾದ ಹಿಂಬಾಲಕ ಮೂಲಕವೂ ಅಳೆಯಲಾಗುತ್ತದೆ. ಈಗ ರಾಕಿಂಗ್ ಸ್ಟಾರ್ ಯಶ್ ಇನ್ಸ್ಟಾಗ್ರಾಮ್ ನಲ್ಲಿ ಕನ್ನಡದ ಇತರ ನಟರಾದ ದರ್ಶನ್, ಸುದೀಪ್, ಪುನೀತ್ ರನ್ನು ಹಿಂದೆ ಹಾಕಿದ್ದಾರೆ.

ನಟ ಯಶ್ ಈಗ ಇನ್ಸ್ಟಾಗ್ರಾಮ್ ನಲ್ಲಿ 1 ಮಿಲಿಯನ್ ಫಾಲೋಹರ್ಸ್ ಪಡೆದಿದ್ದಾರೆ. ಒಂದು ಮಿಲಿಯನ್ ಗಡಿ ದಾಟುವ ಮೂಲಕ ಇನ್ಸ್ಟಾಗ್ರಾಮ್ ನಲ್ಲಿಯೂ ದಾಖಲೆ ಮಾಡಿದ್ದಾರೆ. 'ಕೆಜಿಎಫ್' ಸಿನಿಮಾದ ಸಮಯದಲ್ಲಿ ಇನ್ಸ್ಟಾಗ್ರಾಮ್ ಗೆ ಬಂದಿದ್ದ ಯಶ್ ಈಗ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಕನ್ನಡದ ನಟ ಆಗಿದ್ದಾರೆ.

ಇನ್ಸ್ಟಾಗ್ರಾಮ್ ನಲ್ಲಿ ನಟ ದರ್ಶನ್ 261K, ಸುದೀಪ್ 447K ಹಾಗೂ ಪುನೀತ್ ರಾಜ್ ಕುಮಾರ್ 717K ಫಾಲೋವರ್ಸ್ ಗಳನ್ನು ಹೊಂದಿದ್ದಾರೆ. ಯಶ್ ನಂತರ ಸ್ಥಾನದಲ್ಲಿ ಈ ನಟರು ಇದ್ದಾರೆ.

Kannada Actor Yash Got 1 Million Followers On Instagram

ಫೇಸ್ ಬುಕ್ ಹಾಗೂ ಟ್ವಿಟ್ಟರ್ ಗಿಂತ ಯಶ್ ಇನ್ಸ್ಟಾಗ್ರಾಮ್ ನಲ್ಲಿ ಅಧಿಕ ಹಿಂಬಾಲಕರನ್ನು ಹೊಂದಿದ್ದಾರೆ. 'ಕೆಜಿಎಫ್' ಸಿನಿಮಾದಿಂದ ನ್ಯಾಷನಲ್ ಸ್ಟಾರ್ ಆದ ಯಶ್ ಗೆ ಅದೇ ಹವಾದಲ್ಲಿ ಫಾಲೋವರ್ಸ್ ಹೆಚ್ಚಾಗಿದ್ದಾರೆ. 'ಕೆಜಿಎಫ್ 2' ಸಿನಿಮಾ ಬಂದ ಮೇಲೆ ಫಾಲೋವರ್ಸ್ ಸಂಖ್ಯೆ ಡಬಲ್ ಆದರೂ ಅಚ್ಚರಿ ಪಡಬೇಕಿಲ್ಲ.

ಅಂದಹಾಗೆ, ಯಶ್ ಇನ್ಸ್ಟಾಗ್ರಾಮ್ ನಲ್ಲಿ ಸದಾ ಸಕ್ರಿಯವಾಗಿರುತ್ತಾರೆ. ತಮ್ಮ ಸಿನಿಮಾಗಳ ಸುದ್ದಿ, ಮಗಳ ಫೋಟೋಗಳು, ಕುಟುಂಬದ ಕಾರ್ಯಕ್ರಮಗಳ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ.

More from Filmibeat

English summary
Kannada actor Yash got 1 million followers on instagram.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X