ದಿಢೀರನೆ ಚೀನಾ ಪ್ರವಾಸ ಕೈಗೊಂಡಿದ್ದೇಕೆ ನಟ ಯಶ್

Recommended Video

ದಿಢೀರನೆ ಚೀನಾ ಪ್ರವಾಸ ಕೈಗೊಂಡಿದ್ದೇಕೆ ನಟ ಯಶ್ ? | YASH | KGF | SANJAY DUTT | FILMIBEAT KANNADA

ರಾಕಿ ಭಾಯ್ ಯಶ್ ಸದ್ಯ ಕೆಜಿಎಫ್-2 ಚಿತ್ರೀಕಣದಲ್ಲಿ ಬ್ಯುಸಿಯಾಗಿದ್ದಾರೆ. ಪತ್ನಿ ರಾಧಿಕಾ ಪಂಡಿತ್ ಗಾಗಿ ಕೊಂಚ ಬ್ರೇಕ್ ಪಡೆದಿದ್ದ ಯಶ್ ಮತ್ತೆ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಎರಡನೆ ಮಗುವಿಗೆ ತಂದೆಯಾಗಿರುವ ಯಶ್ ಇತ್ತೀಚಿಗೆ ಮೊದಲ ಮಗಳು ಐರಾ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಿದ ಯಶ್ ಕೆಜಿಎಫ್ ನಲ್ಲಿ ಭಾಗಿಯಾಗಿದ್ದರು.

ಸದ್ಯ ಚಾಪ್ಟರ್-2 ಚಿತ್ರೀಕರಣದಲ್ಲಿ ಇದ್ದ ಯಶ್ ಈಗ ದಿಢೀರನೆ ವಿದೇಶಿ ಪ್ರವಾಸ ಕೈಗೊಂಡಿದ್ದಾರೆ. ಅಂದ್ಹಾಗೆ ಯಶ್ ಚೀನಾ ಕಡೆ ಪಯಣ ಬೆಳೆಸಿದ್ದಾರಂತೆ. ವೈಯಕ್ತಿಕ ಕಾರಣಕ್ಕಾಗಿ ಯಶ್ ಚಿತ್ರೀಕರಣದ ನಡುವೆಯೂ ಚೀನಾ ಕಡೆ ಹೊರಟಿದ್ದಾರೆ. ಮೂಲಗಳ ಪ್ರಕಾರ ಯಶ್ ಫಾರ್ಮ್ ಹೌಸ್ ಬೇಕಾದ ವಸ್ತುಗಳನ್ನು ತರಲು ಚೀನಾಗೆ ಹೊರಟಿದ್ದಾರಂತೆ.

ಈಗಾಗಲೆ ಚೀನಾಗೆ ತಲುಪಿರುವ ಯಶ್ ಡಿಸೆಂಬರ್ 21ಕ್ಕೆ ವಾಪಾಸ್ ಆಗುತ್ತಾರಂತೆ. ಅಂದರೆ ಕೆಜಿಎಫ್-2 ಫಸ್ಟ್ ಲುಕ್ ರಿಲೀಸ್ ದಿನವೆ ಯಶ್ ಚೀನಾದಿಂದ ಪಾವಾಸ್ ಆಗುತ್ತಿದ್ದಾರಂತೆ. ಈಗಾಗಲೆ ಅಭಿಮಾನಿಗಳು ಕೆಜಿಎಫ್-2 ಫಸ್ಟ್ ಲುಕ್ ಗೆ ಕಾತರದಿಂದ ಕಾಯುತ್ತಿದ್ದಾರೆ. ಈ ಬಗ್ಗೆ ಅಧೀರ ಅಂದರೆ ನಟ ಸಂಜಯ್ ದತ್ ಕೂಡ ಟ್ವೀಟ್ ಮಾಡಿ ಕೆಜಿಎಫ್ ನ ಅದ್ಭುತ ಜರ್ನಿ ಬಗ್ಗೆ ಮಾತನಾಡಿದ್ದಾರೆ.

Kannada Actor Yash Has Trip To China

ಕೆಜಿಎಫ್-2 ಚಿತ್ರದ ಚಿತ್ರೀಕರಣ ಇನ್ನು ಬಾಕಿ ಇದೆ. ಚಿತ್ರತಂಡ ಅಂದುಕೊಂಡಂತೆ ಆದರೆ ಮುಂದಿನ ವರ್ಷ ಬೇಸಿಗೆ ರಜೆಯ ಸಮಯದಲ್ಲಿ ತೆರೆಗೆ ತರುವ ಪ್ಲಾನ್ ಮಾಡಿದೆ. ಕೆಜಿಎಫ್-2 ಚಿತ್ರ ಮೊದಲ ಭಾಗಕ್ಕಿಂತ ಎರಡನೆ ಭಾಗ ರೋಚಕವಾಗರಲಿದೆಯಂತೆ. ಬಾಲಿವುಡ್ ನಿಂದ ನಟ ಸಂಜಯ್ ದತ್ ಮತ್ತು ನಟಿ ರವೀನಾ ಟಂಡನ್ ಎಂಟ್ರಿ ಕೊಟ್ಟಿದ್ದಾರೆ.

More from Filmibeat

English summary
Kannada Actor Yash has trip to China. Yash currently busy in KGF-2 shooting.
Read more about: yash ಯಶ್
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X