For Quick Alerts
  ALLOW NOTIFICATIONS  
  For Daily Alerts

  ರಾಕಿಂಗ್ ಸ್ಟಾರ್ ಮುಡಿಗೆ ಬೆಂಗಳೂರು 'ಮೋಸ್ಟ್ ಡಿಸೈರಬಲ್ ಮೆನ್' ಪಟ್ಟ

  |

  ಕಿರುತೆರೆ ಮೂಲಕ ಇಂಡಸ್ಟ್ರಿ ಪ್ರವೇಶಿಸಿ ಈಗ ರಾಷ್ಟ್ರಮಟ್ಟದಲ್ಲಿ ಸೂಪರ್ ಸ್ಟಾರ್ ಆಗಿ ಗುರುತಿಸಿಕೊಂಡಿರುವ ನಟ ಯಶ್ 2020ನೇ ಸಾಲಿನ ಬೆಂಗಳೂರು 'ಮೋಸ್ಟ್ ಡಿಸೈರಬಲ್ ಮೆನ್' ಪಟ್ಟ ಅಲಂಕರಿಸಿದ್ದಾರೆ. ಮೂರು ವರ್ಷದಿಂದ ಯಾವುದೇ ಸಿನಿಮಾ ಬಿಡುಗಡೆಯಾಗಿಲ್ಲ. ಕೆಜಿಎಫ್ ಚಾಪ್ಟರ್ 2 ಚಿತ್ರದ ವಿಚಾರದಲ್ಲಿ ರಾಕಿ ಭಾಯ್ ಹೆಚ್ಚು ಸುದ್ದಿಯಲ್ಲಿದ್ದರು.

  ಇದಕ್ಕೂ ಮುಂಚೆ ಎರಡು ಬಾರಿ ಬೆಂಗಳೂರು ಮೋಸ್ಟ್ ಡಿಸೈರಬಲ್ ಮೆನ್ ಪಟ್ಟ ಪಡೆದಿದ್ದ ಯಶ್ ಈಗ ಮೂರನೇ ಸಲ ಮೊದಲ ಸ್ಥಾನ ದಕ್ಕಿಸಿಕೊಂಡಿದ್ದಾರೆ. ಕ್ರಿಕೆಟ್ ತಾರೆ, ಮಾಡೆಲ್, ಕಿರುತೆರೆ ಕಲಾವಿದ, ಸಿನಿಮಾ ಕಲಾವಿದ, ಬಿಸಿನೆಸ್ ಮ್ಯಾನ್ ಸೇರಿದಂತೆ 30 ಜನರ ಪಟ್ಟಿಯನ್ನು ಟೈಮ್ಸ್ ಸಂಸ್ಥೆ ಪ್ರಕಟ ಮಾಡಿದ್ದು, ನಟ ಯಶ್ ಮೊದಲ ಸ್ಥಾನದಲ್ಲಿದ್ದಾರೆ. ಮುಂದೆ ಓದಿ...

  ಮೊದಲ ಸ್ಥಾನಕ್ಕೇರಿದ ಯಶ್

  ಮೊದಲ ಸ್ಥಾನಕ್ಕೇರಿದ ಯಶ್

  2019ನೇ ವರ್ಷ ಟೈಮ್ಸ್ ಸಂಸ್ಥೆ ಪ್ರಕಟ ಮಾಡಿದ್ದ ಮೋಸ್ಟ್ ಡಿಸೈರಬಲ್ ಮೆನ್ ಪಟ್ಟಿಯಲ್ಲಿ ನಟ ಯಶ್ ಎರಡನೇ ಸ್ಥಾನದಲ್ಲಿದ್ದರು. 2020ನೇ ಸಾಲಿನಲ್ಲಿ ಮೊದಲ ಸ್ಥಾನಕ್ಕೆ ಜಿಗಿದಿದ್ದಾರೆ. ದಾಖಲೆಗಳ ಪ್ರಕಾರ, ಇದುವರೆಗೂ ಮೂರು ಬಾರಿ ಮೋಸ್ಟ್ ಡಿಸೈರಬಲ್ ಮೆನ್ ಆಗಿ ಯಶ್ ಆಯ್ಕೆಯಾಗಿದ್ದರು.

  ಕೆಜಿಎಫ್ ಚಾಪ್ಟರ್ 2 ಅಪ್‌ಡೇಟ್: ಒಂದು ಖುಷಿ, ಇನ್ನೊಂದು ನಿರಾಸೆಕೆಜಿಎಫ್ ಚಾಪ್ಟರ್ 2 ಅಪ್‌ಡೇಟ್: ಒಂದು ಖುಷಿ, ಇನ್ನೊಂದು ನಿರಾಸೆ

  ಕೆಜಿಎಫ್ ಚಿತ್ರದಿಂದ ನ್ಯಾಷನಲ್ ಸ್ಟಾರ್

  ಕೆಜಿಎಫ್ ಚಿತ್ರದಿಂದ ನ್ಯಾಷನಲ್ ಸ್ಟಾರ್

  ಕೆಜಿಎಫ್ ಸಿನಿಮಾ ಬರುವವರೆಗೂ ರಾಕಿಂಗ್ ಸ್ಟಾರ್ ಆಗಿದ್ದ ನಟ ಯಶ್, ಕೆಜಿಎಫ್ ಬಿಡುಗಡೆ ಆದ್ಮೇಲೆ ನ್ಯಾಷನಲ್ ಸ್ಟಾರ್ ಆದರು. ಸೌತ್ ಇಂಡಿಯಾದಲ್ಲಿ ಮಾತ್ರ ಸದ್ದು ಮಾಡ್ತಿದ್ದ ರಾಕಿ ಭಾಯ್ ಹೆಸರು ಬಾಲಿವುಡ್ ದಾಟಿ ಗಡಿಯಾಚೆಯೂ ಸಂಚರಿಸಿದೆ.

  ಕೆಜಿಎಫ್ ಚಾಪ್ಟರ್ 2 ರಿಲೀಸ್ ಆಗಬೇಕಿದೆ

  ಕೆಜಿಎಫ್ ಚಾಪ್ಟರ್ 2 ರಿಲೀಸ್ ಆಗಬೇಕಿದೆ

  ಕೆಜಿಎಫ್ ಚಾಪ್ಟರ್ 1ನೇ ಸಿನಿಮಾ 2018ರಲ್ಲಿ ಬಿಡುಗಡೆಯಾಗಿತ್ತು. ಇದೀಗ, ಚಾಪ್ಟರ್ 2 ತಯಾರಾಗಿ ಬಿಡುಗಡೆಗೆ ಸಜ್ಜಾಗಿದೆ. ಮುಂದುವರಿದ ಭಾಗಕ್ಕಾಗಿ ಇಡೀ ಭಾರತೀಯ ಚಿತ್ರರಂಗ ಕಾದಿದೆ. ಬಹುಶಃ ಈ ಸಿನಿಮಾ ನಿರೀಕ್ಷೆಯಂತೆ ಹಿಟ್ ಆದರೆ ಯಶ್ ಇಮೇಜ್ ಮತ್ತಷ್ಟು ಎತ್ತರಕ್ಕೆ ಹೋಗುವುದರಲ್ಲಿ ಯಾವುದೇ ಅನುಮಾನವಿಲ್ಲ.

  ಯಶ್ ಬಗ್ಗೆ ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್ ಹೇಳಿದ ಚಿನ್ನದಂತಾ ಮಾತುಯಶ್ ಬಗ್ಗೆ ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್ ಹೇಳಿದ ಚಿನ್ನದಂತಾ ಮಾತು

  Upendra ಹೆಸರಿಲ್ಲದ Prajakeeya ಪಕ್ಷ ಗೆಲ್ಲುತ್ತಾ?ಇದು ಸಾಧ್ಯಾನಾ? | Uppi's Open Challenge|Filmibeat Kannada
  ನರ್ತನ್ ಜೊತೆ ಮುಂದಿನ ಚಿತ್ರ?

  ನರ್ತನ್ ಜೊತೆ ಮುಂದಿನ ಚಿತ್ರ?

  ವರದಿಗಳ ಪ್ರಕಾರ ಯಶ್ ಮುಂದಿನ ಸಿನಿಮಾ ಮಫ್ತಿ ಖ್ಯಾತಿಯ ನರ್ತನ್ ಜೊತೆ ಎಂದು ಹೇಳಲಾಗುತ್ತಿದೆ. ಈ ಸಂಬಂಧ ಎಲ್ಲಾ ತಯಾರಿ ನಡೆಯುತ್ತಿದೆ. ಕೆಜಿಎಫ್ ಚಾಪ್ಟರ್ 2 ರಿಲೀಸ್ ಆದ್ಮೇಲೆ ಈ ಪ್ರಾಜೆಕ್ಟ್ ಅಧಿಕೃತವಾಗಿ ಘೋಷಣೆಯಾಗಬಹುದು.

  English summary
  Rocking Star Yash is the Bangalore Times Most Desirable Man of 2020.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X