For Quick Alerts
  ALLOW NOTIFICATIONS  
  For Daily Alerts

  ಕೊಡಗಿನವರ ನೆರವಿಗೆ ಧಾವಿಸಿದ ಕನ್ನಡ ಚಿತ್ರರಂಗದ ತಾರೆಯರು

  By Harshitha
  |
  ಕೊಡಗಿನ ಜನತೆಗೆ ಸಹಾಯ ಹಸ್ತ ಚಾಚಿದ ಸ್ಯಾಂಡಲ್‌ವುಡ್ ಸ್ಟಾರ್ಸ್..! | Filmibeat Kannada

  ರಣಮಳೆಗೆ ಇಡೀ ಕೊಡಗು ತತ್ತರಿಸಿದೆ. ಕೊಡಗಿನವರ ಬದುಕನ್ನೇ ಪ್ರವಾಹ ಕಿತ್ತುಕೊಂಡಿದೆ. ಕೊಡಗಿನಲ್ಲಿ ಎಷ್ಟೋ ಮನೆಗಳು ನೀರಿನಲ್ಲಿ ಮುಳುಗಿದೆ. ಜನರು ಮನೆ ಬಿಟ್ಟು ಗಂಜಿ ಕೇಂದ್ರ ಸೇರಿದ್ದಾರೆ.

  ಪ್ರವಾಹ ಪೀಡಿತರಿಗೆ ರಾಕಿಂಗ್ ಸ್ಟಾರ್ ಯಶ್ ಸಹಾಯ ಹಸ್ತ ಚಾಚಿದ್ದಾರೆ. 'ಯಶೋಮಾರ್ಗ' ಮೂಲಕ ಕೊಡಗಿನ ಸುಂಟಿಕೊಪ್ಪದಲ್ಲಿರುವ ಸಂತ್ರಸ್ತರಿಗೆ ನಟ ಯಶ್ ನೆರವು ನೀಡಿದ್ದಾರೆ.

  ಅಕ್ಕಿ, ಬಿಸ್ಕತ್ತು, ಔಷಧಿ, ಹೊದಿಕೆ, ಜರ್ಕಿನ್ ಸೇರಿದಂತೆ ಅಗತ್ಯ ವಸ್ತುಗಳನ್ನ ಸಂತ್ರಸ್ತರಿಗೆ ನಟ ಯಶ್ ಕಳುಹಿಸಿಕೊಟ್ಟಿದ್ದಾರೆ. ''ಕೊಡಗಿನ ಜನರ ಸಹಾಯಕ್ಕೆ ಎಲ್ಲರೂ ಮುಂದೆ ಬಂದಿದ್ದಾರೆ. ಪ್ರವಾಹ ಪೀಡಿತರಿಗೆ ಏನು ಅವಶ್ಯಕತೆ ಇದೆಯೋ, ಅದನ್ನೆಲ್ಲಾ ಕಳುಹಿಸಿಕೊಟ್ಟಿದ್ದೇನೆ. ಆದ್ರೆ, ಅಲ್ಲಿ ತಲುಪಲು ರಸ್ತೆಗಳಿಲ್ಲ. ದಾರಿ ಮಧ್ಯೆ ಗುಡ್ಡ ಕುಸಿಯುತ್ತಿದೆ. ಹಾಗೂ ಹೀಗೂ ರೀಚ್ ಮಾಡಿದ್ದಾರೆ'' ಎನ್ನುತ್ತಾರೆ ನಟ ಯಶ್.

  ಕೊಡಗು ಜಿಲ್ಲೆಯ ಪ್ರವಾಹ ಪೀಡಿತರ ನೆರವಿಗೆ ಮುಂದಾದ ಚಂದನ್ ಶೆಟ್ಟಿ ಕೊಡಗು ಜಿಲ್ಲೆಯ ಪ್ರವಾಹ ಪೀಡಿತರ ನೆರವಿಗೆ ಮುಂದಾದ ಚಂದನ್ ಶೆಟ್ಟಿ

  ನೊಂದ ಜನರಿಗೆ ಸಹಾಯ ಹಸ್ತ ನಿಮ್ಮದಾಗಲಿ ಎಂದು ನಿರ್ದೇಶಕ ಎ.ಪಿ.ಅರ್ಜುನ್ ಕೂಡ ಫೇಸ್ ಬುಕ್ ನಲ್ಲಿ ಕೇಳಿಕೊಂಡಿದ್ದಾರೆ.

  ನಟ ಜಗ್ಗೇಶ್ ಕೂಡ ಅಗತ್ಯ ವಸ್ತುಗಳನ್ನೆಲ್ಲಾ ಕೊಡಗಿನ ಜನರಿಗೆ ಕಳುಹಿಸಿಕೊಡುತ್ತಿದ್ದಾರೆ.

  ಇನ್ನೂ ನಟಿ ಸಂಯುಕ್ತ ಹೊರನಾಡು ಕೂಡ ಟ್ರಕ್ ಗಳ ಮೂಲಕ ಅತ್ಯಗತ್ಯ ವಸ್ತುಗಳನ್ನು ಕೊಡಗಿಗೆ ಕಳುಹಿಸುತ್ತಿದ್ದಾರೆ.

  ಒಟ್ನಲ್ಲಿ, ಸ್ಯಾಂಡಲ್ ವುಡ್ ನ ನಟ-ನಟಿಯರು ಕೊಡಗಿನ ಜನತೆಗೆ ಸಹಾಯ ಮಾಡಲು ಮುಂದಾಗಿದ್ದಾರೆ. ಆದಷ್ಟು ಬೇಗ ಕೊಡಗು ಜನ ಜೀವನ ಸಹಜ ಸ್ಥಿತಿಗೆ ಮರಳಲಿ ಅನ್ನೋದು ಹಲವರ ಪ್ರಾರ್ಥನೆ.

  English summary
  Kannada Actor Yash, Jaggesh and Samyuktha Hornad donates to flood victims of Kodagu District.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X