'ಕೆ.ಜಿ.ಎಫ್'ಗಾಗಿ ಯಶ್ ಅವರ ಹೊಸ ಲುಕ್ ನೋಡಿ
ರಾಕಿಂಗ್ ಸ್ಟಾರ್ ಯಶ್, ತಮ್ಮ ಹೊಸ ಚಿತ್ರ ಕೆ.ಜಿ.ಎಫ್'ಗಾಗಿ ಸಿಕ್ಕಾಪಟ್ಟೆ ತಯಾರಿ ಮಾಡುತ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಆದ್ರೆ, ಈ ಚಿತ್ರಕ್ಕಾಗಿ ಇಷ್ಟೊಂದು ಸ್ಪೆಷಲ್ ಆಗಿ ಹೇರ್ ಸ್ಟೈಲ್ ಮಾಡಿಕೊಳ್ತಾರೆ ಎಂಬುದನ್ನ ಯಾರು ಊಹಿಸಿರಲಿಲ್ಲ.
ಹೌದು, ಯಶ್ ಅವರ ಈ ಹೊಸ ಲುಕ್ ನೋಡಿದ್ರೆ, ಎಂತಹವರು ಕೂಡ ಶಾಕ್ ಆಗ್ತೀರಾ. ಉದ್ದನೆಯ ಕೂದಲು ಬಿಟ್ಟು, ಉದ್ದನೆಯ ಗಡ್ಡವನ್ನ ಬಿಟ್ಟು ಸಖತ್ ಡಿಫ್ರೆಂಟ್ ಆಗಿ ತಯಾರಾಗುತ್ತಿದ್ದಾರೆ.['ಕೆಜಿಎಫ್' ಚಿತ್ರಕ್ಕಾಗಿ ವರ್ಕೌಟ್ ಮಾಡ್ತಿದ್ದಾರಾ ಯಶ್!]

ಅಂದ್ಹಾಗೆ, 'ಕೆಜಿಎಫ್' ಚಿತ್ರ 1970ರ ದಶಕದ ಕಥೆಯಾಗಿರುವುದರಿಂದ ಯಶ್ ಈ ಚಿತ್ರದಲ್ಲಿ ರೆಟ್ರೋ ಸ್ಟೈಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಅದಕ್ಕಾಗಿ, ಯಶ್ ತಮ್ಮ ಲುಕ್ ನಲ್ಲಿ ಮೇಕ್ ಓವರ್ ಮಾಡಿಕೊಳ್ತಿದ್ದಾರಂತೆ.[ಯಶ್ ಜನ್ಮದಿನದ ಪ್ರಯುಕ್ತ 'ಕೆ.ಜಿ.ಎಫ್' ಪೋಸ್ಟರ್ ರಿಲೀಸ್.!]

'ಉಗ್ರಂ' ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಅವರು ಆಕ್ಷನ್-ಕಟ್ ಹೇಳುತ್ತಿರುವ 'ಕೆ.ಜಿ.ಎಫ್' ಚಿತ್ರವನ್ನ ಹೊಂಬಾಳೆ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರ್ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರಕ್ಕೆ ಭುವನ್ ಗೌಡ ಅವರು ಕ್ಯಾಮರಾ ಕೈ ಚಳಕ ತೋರಿದರೆ, ಸಂಗೀತ ನಿರ್ದೇಶಕ ರವಿ ಬಸ್ರೂರು ಅವರು ಮ್ಯೂಸಿಕ್ ಕಂಪೋಸ್ ಮಾಡಲಿದ್ದಾರೆ. ಉಳಿದಂತೆ 'ಕೆಜಿಎಫ್' ಚಿತ್ರಕ್ಕೆ ನಾಯಕಿಯಾಗಿ 'ಮಿಸ್ ಸೂಪರ್ ನ್ಯಾಷನಲ್ 2016' ಮತ್ತು 'ಮಿಸ್ ದಿವಾ 2016' ಪ್ರಶಸ್ತಿ ಗೆದ್ದಿರುವ 'ಶ್ರೀನಿಧಿ ಶೆಟ್ಟಿ' ಕಾಣಿಸಿಕೊಳ್ಳಲಿದ್ದಾರಂತೆ.


Click it and Unblock the Notifications











